• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏಕಾಏಕಿ ಕೊರೊನಾ ಏರಿಕೆ ಹಿಂದಿದೆಯಂತೆ ಈ ಮೂರು ಕಾರಣ...

|

ಮುಂಬೈ, ಫೆಬ್ರವರಿ 25: ಮಹಾರಾಷ್ಟ್ರದಲ್ಲಿ ಕಳೆದ ಏಳೆಂಟು ದಿನಗಳಿಂದ ಕೊರೊನಾ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಬುಧವಾರವೂ ಎಂಟು ಸಾವಿರ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

ಕಳೆದ ನಾಲ್ಕು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಕೊರೊನಾ ತಗ್ಗಿದ್ದು, ದಿಢೀರನೆ ವಾರದಿಂದ ಪ್ರಕರಣಗಳು ಏರಿಕೆಯಾಗಿವೆ. ಹೀಗೆ ಏಕಾಏಕಿ ಪ್ರಕರಣಗಳು ಏರಿಕೆಯಾಗಲು ನಿಖರ ಕಾರಣ ತಿಳಿದುಬಂದಿಲ್ಲ. ತಜ್ಞರು ಹಲವು ಕಾರಣಗಳನ್ನು ಪರಿಶೀಲಿಸಿದ್ದು, ವಿಶ್ಲೇಷಣೆ ನಡೆಸಿ ಮೂರು ಅಂಶಗಳನ್ನು ಪತ್ತೆ ಮಾಡಿದ್ದಾರೆ. ಮುಂದೆ ಓದಿ...

 ಹೆಚ್ಚಳದ ಹಿಂದೆ ಹಲವು ಅಂಶಗಳಿವೆ...

ಹೆಚ್ಚಳದ ಹಿಂದೆ ಹಲವು ಅಂಶಗಳಿವೆ...

ಹೀಗೆ ಕೊರೊನಾ ಪ್ರಕರಣಗಳು ಏಕಾಏಕಿ ಏರಿಕೆಯಾಗಲು ಹಲವು ಅಂಶಗಳು ಸೇರಿ ಕಾರಣವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ವೈರಸ್‌ನ ರಚನಾತ್ಮಕ ಬದಲಾವಣೆ ಇದಕ್ಕೆ ಮೂಲ ಕಾರಣ ಎಂದು ಹೇಳಿದ್ದಾರೆ. ಸೋಂಕಿನ ರಚನೆ, ಸೋಂಕಿತ ಹಾಗೂ ಇನ್ನೊಬ್ಬರಿಗೆ ಸೋಂಕು ರವಾನೆ ಪ್ರಕ್ರಿಯೆಯಲ್ಲಿನ ಬದಲಾವಣೆಗಳು ರಾಜ್ಯದಲ್ಲಿ ದಿಢೀರನೆ ಪ್ರಕರಣಗಳು ಏರಿಕೆಯಾಗಲು ಕಾರಣ ಎಂದು ಅಂದಾಜಿಸಿದ್ದಾರೆ.

 ಮೂರು ಅಂಶ ಮುಂದಿಟ್ಟ ತಜ್ಞರು

ಮೂರು ಅಂಶ ಮುಂದಿಟ್ಟ ತಜ್ಞರು

ಸೋಂಕಿನ ರಚನೆ ಮಾತ್ರವಲ್ಲದೇ ಹವಾಮಾನ, ಮಾಲಿನ್ಯ ಹಾಗೂ ಮನೆಯ ರಚನೆ ವೈರಸ್‌ನ ಏರಿಳಿಕೆಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ. ಈ ಮೂರು ಅಂಶಗಳು ವೈರಸ್‌ನ ಹರಡುವಿಕೆ ಮೇಲೆ ಪ್ರಭಾವ ಬೀರುತ್ತದೆ ಎಂದಿರುವ ರಾಜ್ಯ ಹಿರಿಯ ಆರೋಗ್ಯಾಧಿಕಾರಿ, ವಿದರ್ಭ ಪ್ರದೇಶದಲ್ಲಿ ಸೋಂಕು ಹೆಚ್ಚಲು ಈ ಮೂರು ಅಂಶಗಳು ಕಾರಣವಾಗಿರಬಹುದು ಎಂದಿದ್ದಾರೆ. ಜೊತೆಗೆ ಈ ಅಂಶಗಳು ಸೋಂಕು ಹರಡಲು ಪ್ರಚೋದನೆ ನೀಡುತ್ತವೆ ಎಂದು ತಿಳಿಸಿದ್ದಾರೆ.

 ಅಕ್ಟೋಬರ್ ನಂತರ ಅಧಿಕ ಮಟ್ಟದ ಪ್ರಕರಣ ದಾಖಲು

ಅಕ್ಟೋಬರ್ ನಂತರ ಅಧಿಕ ಮಟ್ಟದ ಪ್ರಕರಣ ದಾಖಲು

ಬುಧವಾರ ಮಹಾರಾಷ್ಟ್ರದಲ್ಲಿ 8,807 ಪ್ರಕರಣಗಳು ಕಂಡುಬಂದಿದ್ದು, ಅಕ್ಟೋಬರ್ ನಂತರ ಇದೇ ಮೊದಲ ಬಾರಿ ಅಧಿಕ ಮಟ್ಟದಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 21ರಂದು 8,142 ಪ್ರಕರಣಗಳು ದಾಖಲಾಗಿದ್ದವು. ಆನಂತರ ಪ್ರತಿನಿತ್ಯದ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿತ್ತು. ಇದೀಗ ಮತ್ತೆ ಅಕೋಲಾ, ಅಮರಾವತಿ, ಬುಲ್ದಾನಾ, ಯವತ್ಮಾಲ್, ವಾಶಿಮ್, ಭಂಡಾರ, ಚಂದ್ರಾಪುರ, ಗಡ್ಚಿರೋಲಿ, ಗೊಂಡಾ, ನಾಗ್ಪುರ ವಾರ್ದಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಪುಣೆ ಹಾಗೂ ಮುಂಬೈ ನಗರಗಳಿಗೂ ಹರಡುತ್ತಿದೆ.

 ರೂಪಾಂತರ ಸೋಂಕು ಕಾರಣವೇ?

ರೂಪಾಂತರ ಸೋಂಕು ಕಾರಣವೇ?

ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಲು ರೂಪಾಂತರ ಸೋಂಕು ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಮಹಾರಾಷ್ಟ್ರದಲ್ಲಿ ರೂಪಾಂತರ ಸೋಂಕಿನ ಪ್ರಕರಣಗಳ ಉಪಸ್ಥಿತಿ ಇದ್ದರೂ, ಸೋಂಕಿನ ಪ್ರಮಾಣ ಹೆಚ್ಚಳಕ್ಕೂ ರೂಪಾಂತರಕ್ಕೂ ಸಂಬಂಧವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

English summary
A senior maharashtra health official told the nature of the virus and the overall environment of an area including weather, pollution, housing structure, are the three factors that play behind the surge in virus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X