ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿಗಳ ವಿದೇಶ ಪ್ರವಾಸ: ಮಹಾರಾಷ್ಟ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

|
Google Oneindia Kannada News

ಮುಂಬೈ,ಫೆಬ್ರವರಿ 04: ರಾಜ್ಯದ ಅಧಿಕಾರಿಗಳ ವಿದೇಶ ಪ್ರವಾಸಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಒಂದು ವರ್ಷದಲ್ಲಿ 3 ಬಾರಿ ಪ್ರವಾಸಕ್ಕೆ ಅವಕಾಶವಿದ್ದು, 15 ದಿನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿದೆ.

ವಿದೇಶದಲ್ಲಿ ಅಧ್ಯಯನ ಪ್ರವಾಸಗಳಿಗೆ ಹೋಗಲು ಅಥವಾ ಅಂತರರಾಷ್ಟ್ರೀಯ ಕಾರ್ಯಾಗಾರಗಳಿಗೆ ಹಾಜರಾಗಲು ಬಯಸುವ ಅಧಿಕಾರಿಗಳು ತಮ್ಮ ಭೇಟಿಗಳು ರಾಜ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗುತ್ತವೆ ಎಂಬುದನ್ನು ವಿವರಿಸಬೇಕು ಎಂದು ಸಮಿತಿ ಹೇಳಿದೆ.

"ಕೇಂದ್ರ ಬಜೆಟ್ ದೇಶಕ್ಕೆ ಸಂಬಂಧಿಸಿದ್ದಾ, ಚುನಾವಣೆಗೆ ಸಂಬಂಧಿಸಿದ್ದಾ?"

ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು, ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಗಾರಿಕಾ ಒಪ್ಪಂದಗಳು ಮತ್ತು ನಿಯಮಿತ ಕಾರ್ಯಕ್ರಮಗಳಿಗೆ ಭೇಟಿ ನೀಡುವುದಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯ ಅಗತ್ಯವಿರುತ್ತದೆ ಎಂದು ಅದು ಹೇಳಿದೆ.

Maha Govt Issues Guidelines For Foreign Tours Of IAS Officers, Bureaucrats

ವಿದೇಶಿ ಪ್ರವಾಸವು ರಾಜ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಲಿದೆ ಎಂಬುದನ್ನು ಪ್ರಮಾಣೀಕರಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳಿಗೆ ನೀಡಲಾಗಿದೆ ಮತ್ತು ಅಂತಹ ಪ್ರವಾಸಗಳಿಗೆ ಹೋಗುವ ಅಧಿಕಾರಿಗಳಿಗೆ ಯಾವುದೇ ವಯಕ್ತಿಕ ಹಿತಾಸಕ್ತಿ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಅಧಿಕಾರಿಗಳಿಗೆ ವಿದೇಶ ಪ್ರವಾಸಗಳ ಅಗತ್ಯವಿದೆಯೇ ಎಂಬುದನ್ನು ಪರೀಕ್ಷಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಸೋಮವಾರ ಹೊರಡಿಸಲಾದ ಸರ್ಕಾರದ ನಿರ್ಣಯ ತಿಳಿಸಿದೆ.

ಸರ್ಕಾರದ ನಿರ್ಣಯದ ಪ್ರಕಾರ, ವಿದೇಶಿ ಪ್ರಯಾಣವನ್ನು 15 ದಿನಗಳಿಗಿಂತ ಹೆಚ್ಚಿಲ್ಲದಂತೆ ವರ್ಷಕ್ಕೆ ಮೂರು ಬಾರಿ ವಿದೇಶ ಪ್ರವಾಸಕ್ಕೆ ಮಾತ್ರ ಅವಕಾಶ ಎಂದು ತಿಳಿಸಿದೆ.

English summary
The Maharashtra government has issued guidelines for foreign tours of IAS officers and state bureaucrats, saying they will be allowed three trips abroad in a year for not more than 15 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X