ಲೋಕಸಭೆ ಚುನಾವಣೆಗೆ ಸ್ಪರ್ಧೆ: ಮಾಧುರಿ ದೀಕ್ಷಿತ್ ಹೇಳಿದ್ದೇನು?
Recommended Video

ಮುಂಬೈ, ಡಿಸೆಂಬರ್ 08: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತಂಟೆ ಬಾಲಿವುಡ್ ನ ಮೋಹಕ ನಟಿ ಮಾಧುರಿ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಮಹಾರಾಷ್ಟ್ರದ ಪುಣೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಬಿಜೆಪಿಯ ಹಿರಿಯ ನಾಯಕರೊಬ್ಬರು ನೀಡಿದ್ದ ಹೇಳಿಕೆಯ ಮೇರೆಗೆ ಮಾಧ್ಯಮಗಳು ಅದನ್ನು ಬಹಿರಂಗ ಪಡಿಸಿದ್ದವು.
ಆದರೆ ಈ ವರದಿಯನ್ನು ತಳ್ಳಿಹಾಕಿರುವ ಮಾಧುರಿ ದೀಕ್ಷಿತ್, ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವದಂತಿ ಸುಳ್ಳು ಎಂದಿದ್ದಾರೆ.

ಕಳೆದ ಜೂನ್ ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಪ್ರಚಾರ ಭಾಗವಾದ 'ಸಂಪರ್ಕ ಸಮರ್ಥನ್' ಅಭಿಯಾನದಡಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗಷ್ಟೇ ಪುಣೆಯಲ್ಲಿ ಲೋಕಸಭಾ ಟಿಕೆಟ್ ಯಾರಿಗೆ ನೀಡಲಾಗುತ್ತದೆ ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರದ ಬಿಜೆಪಿ ಮುಖಂಡರೊಬ್ಬರು, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಅಮತಿಮಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಪಟ್ಟಿಯಲ್ಲಿ ಮಾಧುರಿ ದೀಕ್ಷಿತ್ ಸೇರಿದಂತೆ ಹಲವರ ಹೆಸರಿದೆ. ಮಾಧುರಿ ದೀಕ್ಷಿತ್ ಅವರಿಗೆ ಪುಣೆಯ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಿರುವುದರಂದ ಅವರ ಹೆಸರನ್ನೇ ಅಂತಿಮ ಗೊಳಿಸುವ ಸಾಧ್ಯತೆ ಇದೆ ಎಂದಿದ್ದರು.
ಆದರೆ ಈ ಎಲ್ಲ ಹೇಳಿಕೆಯನ್ನು 51 ವರ್ಷ ವಯಸ್ಸಿನ ದೀಕ್ಷಿತ್ ತಳ್ಳಿ ಹಾಕಿದ್ದಾರೆ. 1984 ರಲ್ಲಿ 'ಅಬೋಧ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಧುರಿ ನಂತರ ತೆಜಾಬ್, ರಾಮ್ ಲಖಾನ್, ದಿಲ್, ಬೇಟಾ, ಹಂ ಆಪ್ಕೆ ಹೈ ಕೌನ್, ಅಂಜಾಮ್, ಮೃತ್ಯುದಂಡ್, ಪುಕಾರ್, ದಿಲ್ ತೊ ಪಾಗಲ್ ಹೈ, ದೇವದಾಸ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
2007 ರಲ್ಲಿ ಮತ್ತೆ ಚಿತ್ರರಗಕ್ಕೆ ಮರುಪದಾರ್ಪಣೆ ಮಾಡಿದ ಅವರು ಆಜಾ ನಚ್ಲೆ ಚಿತ್ರದಲ್ಲೂ ಅಭಿನಯಿಸಿದ್ದಾರೆ.












Click it and Unblock the Notifications