ಕೊನೆಗೂ ಒಂದಾದ ಬಿಜೆಪಿ-ಶಿವಸೇನೆ, ಮಹಾರಾಷ್ಟ್ರದಲ್ಲಿ 25:23

ಮುಂಬೈ, ಫೆಬ್ರವರಿ 16: 'ಎಷ್ಟೇ ಕಿತ್ತಾಡಿಕೊಂಡರೂ ಕೊನೆಗೆ ನಾವು ಒಂದೇ...' ಎಂಬಂತೆ ಶಿವಸೇನೆ ಮತ್ತು ಬಿಜೆಪಿ ಮತ್ತೆ ಒಂದಾಗಿವೆ. ಈ ಮೂಲಕ ಇಷ್ಟು ದಿನಗಳ ವಿರಸದ ಚಿತ್ರವೊಂದು ಸುಖ್ಯಾಂತ್ಯದ 'ಶುಭಂ' ಸಂದೇಶ ನೀಡಿದೆ!

ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳಲ್ಲಿ 25 ರಲ್ಲಿ ಬಿಜೆಪಿ ಮತ್ತು 23 ರಲ್ಲಿ ಶಿವಸೇನೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಸೀಟು ಹಂಚಿಕೆ ಚರ್ಚೆ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.

2014 ರ ಲೋಕಸಭಾ ಚುನಾವಣೆಯಲ್ಲಿ 22 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಿತ್ತು. ಬಿಜೆಪಿ 26 ರಲ್ಲಿ ಸ್ಪರ್ಧಿಸಿತ್ತು.

LS polls: Marashtra seat sharing-BJP 25, Shiv Sena 23

ಮಹಾರಾಷ್ಟ್ರದ ವಿಧಾನಸಭೆಗೂ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಎರಡು ಪಕ್ಷಗಳೂ ಮೈತ್ರಿ ಮಾಡಿಕೊಳ್ಳಲಿವೆ. ಒಟ್ಟು 288 ಕ್ಷೇತ್ರಗಳ ಪೈಕಿ 145 ರಲ್ಲಿ ಬಿಜೆಪಿ ಕಣಕ್ಕಿಳಿದರೆ, 143 ರಲ್ಲಿ ಶಿವಸೇನೆ ಕಣಕ್ಕಿಳಿಯಲಿದೆ. ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗದಿದ್ದರೂ, ಬಲ್ಲಮೂಲಗಳು ತಿಳಿಸಿರುವ ಪ್ರಕಾರ ಟಿಕೆಟ್ ಹಂಚಿಕೆ 25:23 ಅನುಪಾತದಲ್ಲೇ ಅಂತಿಮಗೊಂಡಿದೆ ಎನ್ನಲಾಗಿದೆ.

ಈ ಬಾರಿಯಾದರೂ ಶಿವಸೇನೆ ಬಿಜೆಪಿಯಿಂದ ಹೊರಬಂದು ಸ್ಪರ್ಧಿಸಬಹುದು, ಈ ಮೂಲಕ ತಮಗೂ ಒಂದಷ್ಟು ಲಾಭವಾಗಬಹುದು ಎಂದು ಎಣಿಸಿದ್ದ ವಿಪಕ್ಷಗಳಿಗೆ ಈ ನಡೆ ನುಂಗಲಾರದ ತುತ್ತು ಎನ್ನಿಸಿದೆ. 2019 ರ ಲೋಕಸಬಾ ಚುನಾವಣೆ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+