ಬೆಂಗಳೂರು ಮೂಲದ ಸಂಗೀತಗಾರ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣು

Posted By:
Subscribe to Oneindia Kannada

ಮುಂಬೈ, ಸೆ. 10: ಬೆಂಗಳೂರು ಮೂಲದ ಸಂಗೀತಗಾರ ಕರಣ್ ಜೋಸೆಫ್ (29) ಅವರು ಮುಂಬೈನ ಅಪಾರ್ಟ್ಮೆಂಟ್ ನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕರಣ್‌ ಜೋಸೆಫ್ ಅವರು ಬಾಂದ್ರಾ ಉಪನಗರದ ಬುಲ್ಲೊಕ್ ರಸ್ತೆಯಲ್ಲಿರುವ ಕಟ್ಟಡವೊಂದರ 12ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರಣ್ ಅವರ ಗೆಳೆಯ ರಿಶಿ ಶಾ ಅವರಿಗೆ ನೀಡಿದ್ದ ಅಪಾರ್ಟ್ಮೆಂಟ್ ನಲ್ಲಿ ಕರಣ್ ವಾಸಿಸುತ್ತಿದ್ದರು. ಬಹುಕಾಲದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.

Karan Joseph Musician from Bengaluru jumps to his death in Mumbai

ಕರಣ್ ಅವರು ಕಳೆದ ಒಂದು ತಿಂಗಳಿನಿಂದ ಇದೇ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದರು. ಬೆಳಗ್ಗೆ 8.30ರ ವೇಳೆಗೆ ಸ್ನೇಹಿತರ ಜತೆ ಟಿವಿ ನೋಡುತ್ತಾ ಕುಳಿತಿದ್ದ ಕರಣ್, ಇದ್ದಕ್ಕಿದ್ದಂತೆ, ಕಿಟಿಕಿ ಬಳಿ ತೆರಳಿ ಕೆಳಕ್ಕೆ ಜಿಗಿದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಇನ್ಸ್ ಪೆಕ್ಟರ್ ಪಂಡಿತ್ ಥಾಕ್ರೆ ಹೇಳಿದ್ದಾರೆ.

ಕರಣ್ ಅವರ ಮೊಬೈಲ್‌ಫೋನ್ ವಶಪಡಿಸಿಕೊಂಡಿರುವ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಪೋಷಕರಿಗೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪಿಯಾನೋ ವಾದಕ ಕೂಡಾ ಆಗಿದ್ದ ಕರಣ್ ಅವರ ಸಾವಿಗೆ ಸಂಗೀತಗಾರ ವಿಶಾಲ್ ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 29-year-old musician from Bengaluru, Karan Joseph, allegedly committed suicide by jumping off the 12th floor of a high-rise in suburban Bandra in Mumbai, the police said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ