ಮುಳುಗಿದ ಜಿಂದಾಲ್ ಕಾಮಾಕ್ಷಿ ಹಡಗು, 19 ಜನರ ರಕ್ಷಣೆ
ಮುಂಬೈ, ಜೂ. 22 : ಮುಂಬೈನಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಸರಕು ಸಾಗಣೆ ಮಾಡುವ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 19 ಸಿಬ್ಬಂದಿಗಳನ್ನು ಐಎನ್‌ಎಸ್ ನೌಕಾನೆಲೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಸೋಮವಾರ ಬೆಳಗ್ಗೆ ಸರಕು ಸಾಗಣೆ ಮಾಡುತ್ತಿದ್ದ 'ಜಿಂದಾಲ್ ಕಾಮಾಕ್ಷಿ' ಹಡಗು ಸಮುದ್ರದಲ್ಲಿ ಮುಳುಗಡೆಯಾಗಿದೆ. ಈ ಕುರಿತು ಹಡಗಿನ ಸಿಬ್ಬಂದಿ ಮುಂಬೈ ನೌಕಾನೆಲೆಗೆ ಮಾಹಿತಿ ನೀಡಿದ್ದು, ಹೆಲಿಕಾಪ್ಟರ್ ಮೂಲಕ ನೌಕಾನೆಲೆ ಸಿಬ್ಬಂದಿ ಹಡಗಿನಲ್ಲಿದ್ದ 20 ಸಿಬ್ಬಂದಿಗಳ ಪೈಕಿ 19 ಜನರನ್ನು ರಕ್ಷಣೆ ಮಾಡಿದ್ದಾರೆ.

ಮುಂಬೈನಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ರಕ್ಷಣೆ ಮಾಡಲಾದ ಸಿಬ್ಬಂದಿಗಳನ್ನು ಐಎನ್‌ಎಸ್ ನೌಕಾನೆಲೆಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗಿನ ಕ್ಯಾಪ್ಟನ್‌ಗಾಗಿ ಹುಡುಕಾಟ ಮುಂದುವರೆದಿದೆ. [ಮುಂಬೈ ಮಹಾಮಳೆ : ರೈಲು ಬಂದ್]












Click it and Unblock the Notifications