ದೇವೇಗೌಡರ ಮನೆ ಹೆಣ್ಣುಮಕ್ಕಳ ಕಾರಣದಿಂದ ರಾಜೀನಾಮೆ ನೀಡಿದೆ: ಜೆಡಿಎಸ್ ಶಾಸಕ

ಮುಂಬೈ, ಜುಲೈ 07: ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ನೀಡಿ ಮುಂಬೈಗೆ ತೆರಳಿರುವ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಮೊದಲ ಬಾರಿಗೆ ಮಾಧ್ಯಮದೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ನನ್ನನ್ನು ದೇವೇಗೌಡ ಅವರ ಕುಟುಂಬದ ಹೆಣ್ಣು ಮಕ್ಕಳು ಟಾರ್ಗೆಟ್ ಮಾಡಿದರು, ಬೇರೆಯವರ ಮಾತುಗಳನ್ನು ಕೇಳಿ ನನ್ನ ಕ್ಷೇತ್ರದಲ್ಲೂ ವಿಚಾರದಲ್ಲೂ ಅವರು ಹಸ್ತಕ್ಷೇಪ ಮಾಡಿದರು ಎಂದು ದೇವೇಗೌಡ ಅವರ ಮನೆ ಸೊಸೆಯಂದಿರ ಮೇಲೆ ಆರೋಪ ಮಾಡಿದರು.

ಪಕ್ಷದಲ್ಲಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು, ಸ್ಥಳೀಯ ಚುನಾವಣೆಗಳಲ್ಲೂ ಹಸ್ತಕ್ಷೇಪ ಮಾಡಿದರು, ಸರ್ಕಾರದ ಕಾಮಗಾರಿಗಳಲ್ಲೂ ಹಸ್ತಕ್ಷೇಪ ಮಾಡಿದರು ಎಂದು ನಾರಾಯಣಗೌಡ ಹೇಳಿದರು.

ಹಲವು ವರ್ಷದಿಂದ ನಾನು ರಾಜಕೀಯದಲ್ಲಿ ಇದ್ದೇನೆ, ಸಾಕಷ್ಟು ಅನುಭವ ಹೊಂದಿದ್ದೇನೆ, ಸಚಿವ ಸ್ಥಾನಕ್ಕೆ ಭೇಟಿಕೆ ಸಹ ಇಟ್ಟಿದ್ದೆ ಆದರೆ ನನ್ನನ್ನು ನಿರ್ಲಕ್ಷಿಸಿದರು, ಯಾವುದೂ ಚೇರ್‌ಮನ್ ಹುದ್ದೆ ಕೊಡುತ್ತೇನೆ ಎಂದರು, ಆದರೆ ದೇವೇಗೌಡ ಅವರ ಮನೆಯ ಹೆಣ್ಣು ಮಕ್ಕಳ ಹಸ್ತಕ್ಷೇಪದಿಂದ ಅದನ್ನೂ ನೀಡಲಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.

'ದೇವೇಗೌಡರ ಮನೆ ಹೆಣ್ಣುಮಕ್ಕಳು ನನ್ನ ಟಾರ್ಗೆಟ್‌ ಮಾಡಿದ್ರು'

'ದೇವೇಗೌಡರ ಮನೆ ಹೆಣ್ಣುಮಕ್ಕಳು ನನ್ನ ಟಾರ್ಗೆಟ್‌ ಮಾಡಿದ್ರು'

ಬಹಳ ಚಿಕ್ಕ-ಚಿಕ್ಕ ವಿಷಯಕ್ಕೂ ನನ್ನನ್ನು ಟಾರ್ಗೆಟ್ ಮಾಡಿದರು, ಹದಿನೈದು ಮತ ಹಾಕಿಸಲು ಯೋಗ್ಯತೆ ಇಲ್ಲದವರ ಮಾತು ಕೇಳಿ ನನ್ನನ್ನು ಮೂಲೆಗುಂಪು ಮಾಡಿದರು. ದೇವೇಗೌಡ ಅವರು ಸಹ ನನ್ನ ಮುಖ ನೋಡಿ ಮಾತನಾಡುತ್ತಿರಲಿಲ್ಲ, ಹದಿನೈದು ವರ್ಷ ಅನುಭವ ಇರುವ ನನ್ನನ್ನು ಪಕ್ಷ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜೀನಾಮೆಗೆ ನಿರ್ಲಕ್ಷ್ಯವೇ ಕಾರಣ: ನಾರಾಯಣಗೌಡ

ರಾಜೀನಾಮೆಗೆ ನಿರ್ಲಕ್ಷ್ಯವೇ ಕಾರಣ: ನಾರಾಯಣಗೌಡ

ರಾಜೀನಾಮೆಗೆ ನಿರ್ಲಕ್ಷ್ಯವೇ ಕಾರಣ ಎಂದ ನಾರಾಯಣಗೌಡ, ನನಗೆ ಸಚಿವ ಸ್ಥಾನ ಕೊಡಲು ಹಿಂದೇಟು ಹಾಕಿದ್ದು ಸಹ ನನಗೆ ಬೇಸರ ಮೂಡಿಸಿತ್ತು ಎಂದರು. ಬಿಜೆಪಿ ಸೇರುವ ಬಗ್ಗೆ ಮಾತನಾಡಿದ ಅವರು, ಮಂಗಳವಾರ ರಾಜೀನಾಮೆ ಅಂಗೀಕಾರವಾಗುತ್ತದೆ, ಆ ನಂತರ ಆ ಬಗ್ಗೆ ನಿರ್ಣಯಿಸುತ್ತೇನೆ ಎಂದು ಹೇಳಿದರು.

ದೇವೇಗೌಡ ಅವರು ನಮ್ಮ ಸಮಸ್ಯೆ ಕೇಳಿಲ್ಲ: ನಾರಾಯಣಗೌಡ

ದೇವೇಗೌಡ ಅವರು ನಮ್ಮ ಸಮಸ್ಯೆ ಕೇಳಿಲ್ಲ: ನಾರಾಯಣಗೌಡ

ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಗೌರವದಿಂದ ಮಾತನಾಡಿದ ಶಾಸಕ ನಾರಾಯಣಗೌಡ, ಕುಮಾರಸ್ವಾಮಿ ಅವರಿಗೆ ಬೆಳೆಯಲು ಬಿಡುತ್ತಿಲ್ಲ, ದೇವೇಗೌಡ ಅವರು ಯಾರನ್ನೂ ಕರೆದು ಮಾತನಾಡಿಸಲಿಲ್ಲ, ನಮ್ಮ ಕಷ್ಟಗಳನ್ನು ಕೇಳಲಿಲ್ಲ ಎಂದು ನಾರಾಯಣಗೌಡ ಹೇಳಿದರು.

'ಕುಮಾರಸ್ವಾಮಿಗೆ ಕಾಂಗ್ರೆಸ್ ಕಾಟ ಕೊಡ್ತಿದೆ'

'ಕುಮಾರಸ್ವಾಮಿಗೆ ಕಾಂಗ್ರೆಸ್ ಕಾಟ ಕೊಡ್ತಿದೆ'

ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನವರು ಬಹಳ ಕಾಟ ನೀಡುತ್ತಿದ್ದಾರೆ ಎಂದು ಆರೋಪಿಸಿದ ನಾರಾಯಣಗೌಡ, ಕಾಂಗ್ರೆಸ್‌ನವರು ಸರ್ಕಾರದಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ, ಕುಮಾರಸ್ವಾಮಿ ಅವರಿಗೆ ಆಡಳಿತ ಮಾಡಲು ಅವಕಾಶ ಕೊಡುತ್ತಿಲ್ಲ ಎಂದರು.

ನಮ್ಮನ್ನು ಯಾರೂ ಹೈಜಾಕ್ ಮಾಡಿಲ್ಲ: ನಾರಾಯಣಗೌಡ

ನಮ್ಮನ್ನು ಯಾರೂ ಹೈಜಾಕ್ ಮಾಡಿಲ್ಲ: ನಾರಾಯಣಗೌಡ

ಬಿಜೆಪಿಯ ಅಣತಿಯಂತೆ ರಾಜೀನಾಮೆ ನೀಡಿದ್ದೀರಾ? ಎಂಬುದಕ್ಕೆ ಉತ್ತರಿಸಿದ ಅವರು, ನಮ್ಮನ್ನು ಯಾರೂ ಹೈಜಾಕ್ ಮಾಡಿಲ್ಲ, ನಾವೆಲ್ಲರೂ ನಮ್ಮ ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇವೆ ಮತ್ತು ಸ್ವ-ಇಚ್ಛೆಯಿಂದಲೇ ಇಲ್ಲಿಗೆ (ಮುಂಬೈ)ಗೆ ಬಂದಿದ್ದೇವೆ, ಇನ್ನೂ 10 ಜನ ಶಾಸಕರು ರಾಜೀನಾಮೆ ನೀಡುವವರಿದ್ದಾರೆ ಎಂದರು.

'ಸಚಿವ ಸ್ಥಾನದ ಭರವಸೆ ನೀಡಿದರೆ ವಾಪಸ್ ಬರ್ತೇವೆ'

'ಸಚಿವ ಸ್ಥಾನದ ಭರವಸೆ ನೀಡಿದರೆ ವಾಪಸ್ ಬರ್ತೇವೆ'

ಅಕಸ್ಮಾತ್ ಕುಮಾರಸ್ವಾಮಿ ಸಚಿವ ಸ್ಥಾನದ ಭರವಸೆ ನೀಡಿದರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ವಾಪಸ್ ಬರುತ್ತೇನೆ ಎಂದು ಹೇಳಿದರು. ನನ್ನ ಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯ, ನನ್ನ ಅನುಭವದ ಸರಿಯಾದ ಉಪಯೋಗವೇ ನನಗೆ ಮುಖ್ಯ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+