ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೆಹರು ಈಗಲೂ ಬಿಜೆಪಿಗೆ ಅಡೆತಡೆಯಾಗಿದ್ದಾರೆ' ಎಂದ ಕಾಂಗ್ರೆಸ್‌ ನಾಯಕ

|
Google Oneindia Kannada News

ಮುಂಬೈ, ಅಕ್ಟೋಬರ್‌ 20: "ಪಂಡಿತ್‌ ಜವಹರಲಾ‌ಲ್‌ ನೆಹರು ಬಿಜೆಪಿಗೆ ಈಗಲೂ ತೊಂದರೆಯಾಗಿಯೇ ಉಳಿದಿದ್ದಾರೆ," ಎಂದು ಕಾಂಗ್ರೆಸ್‌ ನಾಯಕ ಮುಕುಲ್ ವಾಸ್ನಿಕ್‌ ಬುಧವಾರ ಹೇಳಿದ್ದಾರೆ.

"ಪಂಡಿತ್‌ ಜವಹರಲಾ‌ಲ್‌ ನೆಹರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಗುರಿಗಳನ್ನು ಅರಿತುಕೊಳ್ಳಲು ದೊಡ್ಡ ಅಡೆತಡೆಗಳಲ್ಲಿ ಒಂದಾಗಿದ್ದಾರೆ. ಭಾರತದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ್‌ ಜವಹರಲಾ‌ಲ್‌ ನೆಹರು ಎಲ್ಲಿಯವರೆಗೆ ಜೀವಂತವಾಗಿ ಇರುತ್ತಾರೋ ಅಲ್ಲಿಯವರೆಗೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವು ಜೀವಂತವಾಗಿ ಉಳಿಯುತ್ತದೆ," ಎಂದು ಕಾಂಗ್ರೆಸ್‌ ನಾಯಕ ಮುಕುಲ್ ವಾಸ್ನಿಕ್‌ ಅಭಿಪ್ರಾಯಿಸಿದ್ದಾರೆ.

ಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆ

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, "2014 ರಲ್ಲಿ ದೇಶಕ್ಕೆ ಹೊಸ ನಾಯಕತ್ವವು ಹೊಸ ರಾಜಕೀಯ ಕಣ್ಣೋಟವನ್ನು ನೀಡಲಿದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಹಾಗೆ ಆಗಲಿಲ್ಲ," ಎಂದಿದ್ದಾರೆ.

 Jawaharlal Nehru Still A Big Hurdle For BJP says Congress Leader

"ಆದರೆ ಬಳಿಕ ನಾಯಕ (ನೇತ) ಆಗಿರಲಿಲ್ಲ, ಬದಲಾಗಿ ನಟರು (ಅಭಿನೇತ) ಆಗಿದ್ದರು. ಇನ್ನು ನಟನಾಗಿರುವ ಸಂದರ್ಭದಲ್ಲೇ ತಾನು ನಾಯಕನಿಗಂತ ಉತ್ತಮ ಖಳ ನಾಯಕ ಎಂದು ಕೂಡಾ ತಿಳಿಸಿಕೊಟ್ಟಿದ್ದಾರೆ. ಇದು ನಮ್ಮ ದೇಶಕ್ಕೆ ಬಂದೊದಗಿದ ದುರದೃಷ್ಟ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹೆಸರನ್ನು ಉಲ್ಲೇಖ ಮಾಡದೆಯೇ ಪ್ರಧಾನಿಗೆ ಕಾಂಗ್ರೆಸ್‌ ನಾಯಕ ಮುಕುಲ್ ವಾಸ್ನಿಕ್‌ ಟಾಂಗ್‌ ನೀಡಿದ್ದಾರೆ.

ಪಂಡಿತ್‌ ಜವಹರಲಾ‌ಲ್‌ ನೆಹರು ಬಗ್ಗೆ ನಡೆಸಿದ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕ, "ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ತನ್ನ ಗುರಿಯನ್ನು ತಿಳಿಯುವಲ್ಲಿ ಪಂಡಿತ್‌ ಜವಹರಲಾ‌ಲ್‌ ನೆಹರು ದೊಡ್ಡ ತೊಡಕು ಆಗಿದ್ದರು. ಪಂಡಿತ್‌ ಜವಹರಲಾ‌ಲ್‌ ನೆಹರು ಸಿದ್ದಾಂತಗಳು ಎಲ್ಲಿಯವರೆಗೆ ಈ ದೇಶದಲ್ಲಿ ಜೀವಂತವಾಗಿ ಇರುತ್ತದೆಯೋ ಅಲ್ಲಿಯವರೆಗೆ ಭಾರತದ ಸಂವಿಧಾನ, ಭಾರತದ ಪ್ರಜಾಪ್ರಭುತ್ವವು ನಿರಾತಂಕವಾಗಿ ಇರುತ್ತದೆ," ಎಂದು ಮಾಜಿ ಕೇಂದ್ರ ಸಚಿವ ಮುಕುಳ್‌ ವಾಸ್ನಿಕ್‌ ಹೇಳಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಇತರೆ ನಾಯಕರು ಹಾಗೂ ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರ ಪೃಥ್ವಿರಾಜ್‌ ಔಹಾಣ್‌ ಕೂಡಾ ಇದ್ದರು. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರ ಪೃಥ್ವಿರಾಜ್‌ ಔಹಾಣ್‌, "ನೆಹರುರವರ 'ಡಿಸ್ಕವರಿ ಆಫ್ ಇಂಡಿಯಾ' ಪುಸ್ತಕವು ವೈಜ್ಞಾನಿಕ ವಿಧಾನ ಮತ್ತು ವೈಜ್ಞಾನಿಕ ಮನೋಭಾವವು ಜೀವನ ವಿಧಾನವಾಗಿರಬೇಕು ಎಂಬ ಬಹಳ ಮುಖ್ಯವಾದ ವಾಕ್ಯವನ್ನು ಹೊಂದಿದೆ," ಎಂದು ಉಲ್ಲೇಖ ಮಾಡಿದರು.

"ವೈಜ್ಞಾನಿಕ ವಿಧಾನ ಮತ್ತು ವೈಜ್ಞಾನಿಕ ಮನೋಭಾವವು ಪಂಡಿತ್‌ ಜವಹರಲಾ‌ಲ್‌ ನೆಹರು ಅವರ ಪರಿಕಲ್ಪನೆ. ಆದರೆ ನರೇಂದ್ರ ಮೋದಿಯ ಬಿಜೆಪಿ ಸರ್ಕಾರವು ಎಲ್ಲವನ್ನೂ ನಾಶ ಮಾಡಿದ್ದಾರೆ. ಪ್ರತಿಗಾಮಿ ಚಿಂತನೆಯನ್ನು ದೇಶದಲ್ಲಿ ಹರಡುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಪಂಡಿತ್‌ ಜವಹರಲಾ‌ಲ್‌ ನೆಹರು ಹಾಗೂ ಚಿಂತನೆ ಮೇಲೆ ನಡೆಸುವ ದಾಳಿಯು ಕಾಂಗ್ರೆಸ್‌ನ ಸಂಸ್ಕೃತಿಯ ಮೇಲೆ ನಡೆಸುವ ದಾಳಿಯಾಗಿದೆ. ಆದ್ದರಿಂದ ಪಂಡಿತ್‌ ಜವಹರಲಾ‌ಲ್‌ ನೆಹರು ಮೇಲೆ ದಾಳಿ ನಡೆಸಲಾಗುತ್ತಿದೆ," ಎಂದರು.

ಕಳೆದ ಎರಡು ತಿಂಗಳ ಹಿಂದೆ ಬಿಜೆಪಿ ಪಕ್ಷದ ನಾಯಕ ಸಿ ಟಿ ರವಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ಲಘುವಾಗಿ ಮಾತನಾಡಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದವು. "ಜವಾಹರಲಾಲ್ ನೆಹರು ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅವರು ಪಧಾನಿಯಾಗಿದ್ದಕ್ಕಿಂತ ಹೆಚ್ಚು ಸಮಯ ಜೈಲುವಾಸ ಅನುಭವಿಸಿದವರು. ಇವರ ಬಗ್ಗೆ ಲಘುವಾಗಿ ಮಾತನಾಡಿರುವ ಸಿ.ಟಿ.ರವಿ, ನೆಹರು ಹೆಸರಿನಲ್ಲಿ ಹುಕ್ಕಾ ಬಾರ್ ಆರಂಭಿಸಿ ಎಂದಿರುವ ಇವರು, ಏನ್ ತಿಳಿದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ನೆಹರು ಬಗ್ಗೆ ಇಂತಹ ಬಾಲಿಶ ಹೇಳಿಕೆ ಕೊಡುವುದು ತಪ್ಪು," ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Jawaharlal Nehru Still A Big Hurdle For BJP says Congress Leader Mukul Wasnik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X