ಮುಂಬೈ ಪಾಲಿಗೆ ಕರಾಳ ದಿನ: ಕಟ್ಟಡ ಕುಸಿತದ ದುರಂತಕ್ಕೆ 19 ಸಾವು

Posted By:
Subscribe to Oneindia Kannada

ಮುಂಬೈ, ಆಗಸ್ಟ್ 31:ಮುಂಬೈಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿತದ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 19 ಕ್ಕೇರಿದ್ದು, ಮುಂಬೈಯ ಭೆಂಡಿ ಬಜಾರ್ ಪಾಲಿಗೆ ಆಗಸ್ಟ್ 31 ಕರಾಳ ದಿನವೆನ್ನಿಸಿದೆ.

   Mumbai Rain :Schools Colleges Shut Today | Oneindia Kannada

   ಕಳೆದ ಮೂರು ದಿನಗಳಿಂದ ಮುಂಬೈಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮೂರಂತಸ್ತಿನ ಕಟ್ಟಡವೊಂದು ಇಂದು(ಆಗಸ್ಟ್ 31) ಬೆಳಿಗ್ಗೆ ಕುಸಿದು ಬಿದ್ದಿತ್ತು.

   ಅಗ್ನಿ ಶಾಮಕ ದಳದ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 15 ಜನಕ್ಕೆ ಗಾಯವಾಗಿದೆ. 25 ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

   ಮುಂಬೈ ಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 14 ಕ್ಕೆ ಏರಿಕೆ

   Heavy rain in Mumbai: A 3 floor building collapses near JJ Junction

   ಮುಂಬೈಯ ಪಾಕ್ಮೋಡಿಯ ರಸ್ತೆಯ ಜೆಜೆ ಜಂಕ್ಷನ್ ಬಳಿಯ ಬಿಂಡಿ ಬಜಾರ್ ನ ಮೂರಂತಸ್ತಿನ ವಸತಿ ಸಂಕೀರ್ಣ ಕುಸಿದಿದ್ದು, ಕಟ್ಟಡದೊಳಗೆ 30-35 ಜನ ಸಿಲುಕಿಕೊಂಡಿರುವ ಸಾಧ್ಯತೆಯಿದೆ. ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ನಡೆಸುತ್ತಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

   Heavy rain in Mumbai: A 3 floor building collapses near JJ Junction

   ಕಳೆದ ಮೂರು ದಿನಗಳಿಂದ ಮುಂಬೈಯಲ್ಲಿ ಸುರಿಯುತ್ತಿರುವ ಮಳೆಗೆ ಮುಂಬೈಯ ಹಲವು ಕಟ್ಟಡಗಳು ಕುಸಿಯುವ ಅಪಾಯವಿದೆ. ಈಗಾಗಲೇ 791 ಕಟ್ಟಡಗಳನ್ನು ಅಪಾಯಕಾರಿ ಕಟ್ಟಡಗಳು ಎಂದು ಮಳೆಗಾಲದ ಸರ್ವೆಯೊಂದು ಗುರುತಿಸಿದ್ದು, ಈ ಎಲ್ಲಾ ಕಟ್ಟಡಗಳೂ ಬಿರುಸಿನ ಮಳೆ, ಗಾಳಿಯನ್ನು ತಡೆಯದಷ್ಟು ದುರ್ಬಲವಾಗಿವೆ ಎಂದು ಸಮೀಕ್ಷೆ ಹೇಳಿದೆ.

   ಜುಲೈ 25 ರಂದು ಸಹ ಮುಂಬೈಯ ಲಾಲ್ ಬಹದ್ದೂರ್ ಶಾಸ್ತ್ರೀ ಮಾರ್ಗದಲ್ಲಿರುವ ದಾಮೋದರ್ ಪಾರ್ಕ್ ಬಳಿಯ ನಾಲ್ಕು ಅಂತಸ್ತಿನ ಎರಡು ಕಟ್ಟಡ ಕುಸಿದು 14 ಮಂದಿ ಸಾವನ್ನಪ್ಪಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A building collapsed near JJ Junction in Pakmodia street in Mumbai. 19 people died.Many people feared trapped. Rescue operation is taking place.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ