ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್?

|
Google Oneindia Kannada News

ಮುಂಬೈ, ಅಕ್ಟೋಬರ್ 24: ಮುಂಬೈ ಕ್ರೂಸ್ ಡ್ರಗ್ ಪ್ರಕರಣ ಭಾರೀ ಟ್ವಿಸ್ಟ್ ಪಡೆದುಕೊಂಡಿದೆ. ಈ ಪ್ರಕರಣ ಕೈಬಿಡಲು 25 ಕೋಟಿ ಡೀಲ್ ನಡೆದಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಈ ಡೀಲ್ ಅನ್ನು ಎನ್‌ಸಿಬಿ ಅಧಿಕಾರಿಗಳು ಮಾಡಿಕೊಂಡಿದ್ದರು ಎನ್ನುವ ಗಂಭೀರ ಆರೋಪ ಮಾಡಲಾಗಿದೆ. ಆರ್ಯನ್ ಖಾನ್ ಬಂಧನದ ಹಿಂದೆ ದೊಡ್ಡ ಪಿತೂರಿ ನಡೆದಿದೆ ಎಂದು ಆರೋಪಿ ಪ್ರಭಾಕರ್​ ಸೈಲ್ ಆರೋಪಿಸಿದ್ದಾನೆ.

ಆರ್ಯನ್​ ಖಾನ್​ ರೇವ್​ ಪಾರ್ಟಿ ಮಾಡುತ್ತಿದ್ದರು ಎನ್ನಲಾದ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆದ ಬಳಿಕ ಕೆಲವು ಸಾಕ್ಷಿದಾರರಿಂದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರು ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂಬ ಪ್ರಭಾಕರ್​ ಸೈಲ್ ಹೇಳಿದ್ದಾರೆ.

ತಲೆಮರೆಸಿಕೊಂಡ ಗೋಸ್ವಾಮಿ: ಆರ್ಯನ್ ಖಾನ್‌ನನ್ನು ಎನ್‌ಸಿಬಿ ವಶಕ್ಕೆ ಪಡೆದುಕೊಂಡಿದೆ ಎನ್ನುವ ಹೊತ್ತಿಲ್ಲಿ ಆರ್ಯನ್ ಖಾನ್ ವ್ಯಕ್ತಿಯೊಂದಿಗಿರುವ ಫೋಟೋ ಭಾರೀ ವೈರಲ್ ಆಗಿತ್ತು. ಈ ಫೋಟೋದಲ್ಲಿರುವ ವ್ಯಕ್ತಿ ಕೆಪಿ ಗೋಸ್ವಾಮಿ. ಈತ ಎನ್‌ಸಿಬಿ ಸಿಬ್ಬಂದಿಯಲ್ಲ ಎಂದು ಗೊತ್ತಾಗುವ ಹೊತ್ತಿಗೆ ಆತ ತಲೆಮರೆಸಿಕೊಂಡಿದ್ದನು. ಆದರೆ ಗೋಸ್ವಾಮಿ ಆಪ್ತ ಎನ್ನಲಾದ ಮತ್ತೋರ್ವ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನಷ್ಟು ವಿವರ ಮುಂದಿದೆ..

 ಕೆಪಿ ಗೋಸ್ವಾಮಿ ಬಾಡಿಗಾರ್ಡ್

ಕೆಪಿ ಗೋಸ್ವಾಮಿ ಬಾಡಿಗಾರ್ಡ್

ಕೆಪಿ ಗೋಸ್ವಾಮಿ ಬಾಡಿಗಾರ್ಡ್ಆ ವ್ಯಕ್ತಿಯೇ ಪ್ರಭಾಕರ್ ಸೈಲ್. ಇವರು ಕೆಪಿ ಗೋಸ್ವಾಮಿ ಬಾಡಿಗಾರ್ಡ್ ಆಗಿ ಕೆಲ ಮಾಡುತ್ತಿದ್ದರು. ರೇವ್ ಪಾರ್ಟಿ ಮೇಲೆ ದಾಳಿ ಮಾಡಿದಾಗ ಇವರು ಸ್ಥಳದಲ್ಲಿದ್ದರು. ಆದರೆ ದಾಳಿ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಇವರು ಸದ್ಯ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ ಗೋಸಾಮಿ ನಾಪತ್ತೆಯಾದಾಗಿನಿಂದ ತಮಗೂ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ಆರ್ಯನ್ ಖಾನ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್ ನಡೆದಿತ್ತು ಎಂದು ಹೇಳಿದ್ದಾರೆ.

ಕೆಪಿ ಗೋಸ್ವಾಮಿಯ ಅಂಗರಕ್ಷಕರಾಗಿರುವ ಪ್ರಭಾಕರ್ ಸೈಲ್, ಮುಂಬೈ ಡ್ರಗ್ಸ್ ದಂಧೆ ಪ್ರಕರಣದ ತನಿಖೆ ಮಾಡುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಪರವಾಗಿ ಆಪಾದಿತ ಗೋಸ್ವಾಮಿ ಹಣದ ಬೇಡಿಕೆಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಆರ್ಯನ್ ಖಾನ್ ಜೊತೆಗಿನ ಸೆಲ್ಫಿ ವೈರಲ್ ಆಗಿರುವ ಕೆಪಿ ಗೋಸ್ವಾಮಿ ಕೂಡ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.

ಪ್ರಭಾಕರ್ ಸೈಲ್ ಹೇಳುವುದೇನು?

ಪ್ರಭಾಕರ್ ಸೈಲ್ ಹೇಳುವುದೇನು?

ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಬಂಧನದ ನಂತರ ಹಣ ವಿನಿಮಯಕ್ಕೆ ಸಂಬಂಧಿಸಿದ ನಾಟಕೀಯ ಬೆಳವಣಿಗೆಗಳಿಗೆ ನಾನೇ ಸಾಕ್ಷಿ ಎಂದು ಹೇಳಿಕೊಂಡಿದ್ದಾರೆ. ಸಮೀರ್ ವಾಂಖೆಡೆ ಅವರು ದಾಳಿ ರಾತ್ರಿ ಗೋಸ್ವಾಮಿಯ ಜೊತೆಗಿದ್ದರು ಎಂದು ಪ್ರಭಾಕರ್ ಹೇಳಿದ್ದಾರೆ.

ಪ್ರಭಾಕರ್ ಸೈಲ್ ಅವರು NCB ಕಛೇರಿಯ ಬಳಿ ಸ್ಯಾಮ್ ಮತ್ತು ಗೋಸ್ವಾಮಿ ಎಂಬ ವ್ಯಕ್ತಿ ಭೇಟಿಯಾಗುತ್ತಿದ್ದರು ಎಂದು ಪ್ರಭಾಕರ್ ಹೇಳಿಕೊಂಡಿದ್ದಾರೆ. ಈ ವೇಳೆ ಬಿಳಿ ಬಣ್ಣದ ಕಾರು ಇವರೊಂದಿಗೆ ಸೇರಿಕೊಂಡಿತು. ಅದರಲ್ಲಿ ಶಾರುಖ್ ಖಾನ್ ಮ್ಯಾನೇಜರ್ ಇದ್ದು ವಾಹನಗಳು ಲೋಯರ್ ಪ್ಯಾರೆಲ್‌ಗೆ ತೆರಳಿದವು. ಗೋಸ್ವಾಮಿಮತ್ತು ಸ್ಯಾಮ್ ತಮ್ಮ ಸಂಭಾಷಣೆಯಲ್ಲಿ 25 ಕೋಟಿ ರೂ.ಗೆ ಬೇಡಿಕೆ ಇಟ್ಟರು.

 8 ಕೋಟಿ ಸಮೀರ್ ವಾಂಖೆಡೆಗೆ ಹೋಗುತ್ತದೆ

8 ಕೋಟಿ ಸಮೀರ್ ವಾಂಖೆಡೆಗೆ ಹೋಗುತ್ತದೆ

ಆದರೆ 18 ಕೋಟಿ ರುಪಾಯಿಗಳಿಗೆ ಡೀಲ್ ಇತ್ಯರ್ಥವಾಯಿತು ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಈ ವೇಳೆ 18 ಕೋಟಿಗಳಲ್ಲಿ 8 ಕೋಟಿ ಸಮೀರ್ ವಾಂಖೆಡೆಗೆ ಹೋಗುತ್ತದೆ ಎಂದು ಗೋಸ್ವಾಮಿ ಹೇಳಿದ್ದರು. ಹತ್ತು ಕೋಟಿ ಇತರರಿಗೆ ವಿತರಿಸಲಾಗುವುದು ಎಂದಿದ್ದರು ಎಂದು ಪ್ರಭಾಕರ್ ಹೇಳಿಕೊಂಡಿದ್ದಾರೆ.

ಪ್ರಭಾಕರ್ ಸೈಲ್ ಅವರನ್ನು ಮರುದಿನ ಬೆಳಿಗ್ಗೆ ಗೋಸ್ವಾಮಿ ಅವರು ಟಾರ್ಡಿಯೋಗೆ ಕಳುಹಿಸಿದರು. ಅಲ್ಲಿ ಪ್ರಭಾಕರ್ ಬಿಳಿ ಕಾರಿನಿಂದ 50 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು ಎಂದು ಹೇಳಿದರು. ಈ ಹಣವನ್ನು ಗೋಸಾವಿ ಮತ್ತೆ ಟ್ರೈಡೆಂಟ್ ಹೋಟೆಲ್‌ಗೆ ಸ್ಯಾಮ್‌ಗೆ ಹಿಂದಿರುಗಿಸಲು ಕಳುಹಿಸಿದರು. ಆ ಮೊತ್ತವು ಕೇವಲ 38 ಲಕ್ಷಗಳಾಗಿದ್ದರಿಂದ 12 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ ಎಂದು ಹಣವನ್ನು ವಾಪಸ್ಸು ಕಳುಹಿಸಲಾಯಿತು ಎಂದು ಪ್ರಭಾಕರ್ ಸೈಲ್ ಹೇಳಿದರು. ಬಳಿಕ ಸ್ಯಾಮ್ ಅವರು ಗೋಸ್ವಾಮಿಯೊಂದಿಗೆ ಮಾತನಾಡಿ, ಮುಂದಿನ 2-3 ದಿನಗಳಲ್ಲಿ ಅದನ್ನು ಹಿಂದಿರುಗಿಸುವುದಾಗಿ ಹೇಳಿದರು ಎಂದು ಹೇಳಿದ್ದಾರೆ.

ಆರೋಪ ತಳ್ಳಿ ಹಾಕಿದ ಸಮೀರ್

ಆರೋಪ ತಳ್ಳಿ ಹಾಕಿದ ಸಮೀರ್

ಇತ್ತ ಕೆಪಿ ಗೋಸ್ವಾಮಿ 'ಅನುಮಾನಾಸ್ಪದವಾಗಿ ನಾಪತ್ತೆಯಾದ' ನಂತರ ಸಮೀರ್ ವಾಂಖೆಡೆಯಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಸಮೀರ್​ ವಾಂಖೆಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಕರ್​ ಸೈಲ್​ ಮಾಡಿದ ಎಲ್ಲ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಶೀಘ್ರವೇ ಸೂಕ್ತ ಉತ್ತರ ನೀಡುವುದಾಗಿ ಅವರು ತಿಳಿಸಿದ್ದಾರೆ. 'ದುಡ್ಡಿನ ವ್ಯವಹಾರ ನಡೆದಿದ್ದರೆ ಯಾರನ್ನಾದರೂ​ ಯಾಕೆ ಜೈಲಿಗೆ ಕಳಿಸಬೇಕಿತ್ತು?' ಎಂದು ಅವರು ಪ್ರಶ್ನಿಸಿದ್ದಾರೆ. ಒಟ್ಟಾರೆ ಪ್ರಭಾಕರ್​ ಸೈಲ್​ ಹೇಳಿಕೆಯಿಂದ ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಂತಾಗಿದೆ.

ಅಕ್ಟೋಬರ್ 20 ರಂದು ಮುಂಬೈನ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಆರ್ಯನ್ ಖಾನ್ ಜೈಲಿನಲ್ಲಿದ್ದಾರೆ. ಅಕ್ಟೋಬರ್ ಆರಂಭದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿದೆ.

English summary
Mumbai Cruise Drug Case has got a huge twist. Prabhakar Sail has been accused of a conspiracy behind the arrest of Aryan Khan.It is alleged that there was a 25 crore deal to drop the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X