Breaking: ತೆಲುಗು ನಟಿ ಮೇಲೆ ಅತ್ಯಾಚಾರ; ಜಿಮ್ ಟ್ರೈನರ್ ಬಂಧನ

ಮುಂಬೈ, ಸೆ.14: ತೆಲುಗು ನಟಿಯೊಬ್ಬರನ್ನು ಮದುವೆಯಾಗುವ ನೆಪದಲ್ಲಿ ಅವರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಫಿಟ್‌ನೆಸ್ ತರಬೇತುದಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, 24 ವರ್ಷ ವಯಸ್ಸಿನ ಸಂತ್ರಸ್ತ ನಟಿ, ಆರೋಪಿ ಆದಿತ್ಯ ಅಜಯ್ ಕಪೂರ್ ಅವರನ್ನು ತನ್ನ ಸ್ನೇಹಿತನ ನಿವಾಸದಲ್ಲಿ ಭೇಟಿಯಾಗಿದ್ದರು. ಭೇಟಿ ಸ್ನೇಹವಾಗಿ ಇಬ್ಬರೂ ಅಲ್ಲಿ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು. ಪರಸ್ಪರ ಸಂಪರ್ಕದಲ್ಲಿದ್ದ ನಂತರ ಇಬ್ಬರೂ ಕಾಲಕ್ರಮೇಣ ಹತ್ತಿರವಾದರು ಎನ್ನಲಾಗಿದೆ.

ನಟಿಯ ಮೇಲೆ ಮುಂಬೈ ಮತ್ತು ಗೋವಾದಲ್ಲಿ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

fitness trainer arrested for allegedly raping a Telugu actress

ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಎಫ್‌ಐಆರ್ ಅನ್ನು ಉಲ್ಲೇಖಿಸಿ, " ಆದಿತ್ಯ ಅಜಯ್ ಕಪೂರ್ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡುವ ಮೂಲಕ ದೈಹಿಕ ಸಂಬಂಧವನ್ನು ಹೊಂದಿದ್ದರು. ನಟಿ ಮದುವೆಯಾಗುವಂತೆ ಕೇಳಿದಾಗ, ಅವನು ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸಲು ಒತ್ತಾಯಿಸಿದ್ದಾನೆ. ಆಕೆ ಅದನ್ನು ನಿರಾಕರಿಸಿದಾಗ, ಆಕೆಯನ್ನು ನಿಂದಿಸಲು ಮತ್ತು ಹಲ್ಲೆ ಮಾಡಲು ಪ್ರಾರಂಭಿಸಿದ್ದನು" ಎಂದಿದ್ದಾರೆ.

ಮುಂದುವರೆದು "ಸಂತ್ರಸ್ತೆಯ ಪೋಷಕರ ಫೋನ್ ಸಂಖ್ಯೆಗಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದನು. ಇದಷ್ಟೇ ಅಲ್ಲದೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಆರೋಪಿ ಆದಿತ್ಯ ಅಜಯ್ ಕಪೂರ್ ಕಿರುಕುಳದಿಂದ ಬೇಸತ್ತು ನಟಿ ಪೊಲೀಸರನ್ನು ಸಂಪರ್ಕಿಸಿದಳು" ಎಂದು ಮಾಹಿತಿ ನೀಡಿದ್ದಾರೆ.

ವರದಿಗಳ ಪ್ರಕಾರ, ಆರಂಭದಲ್ಲಿ ಮುಂಬೈನ ಎನ್‌ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಅಪರಾಧವು ಅವರ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಕಫ್ ಪರೇಡ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅತ್ಯಾಚಾರ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪ್ರಸ್ತುತ ಪ್ರಕರಣದ ತನಿಖೆ ನಡೆಯುತ್ತಿದೆ.

ಸಂತ್ರಸ್ತ ನಟಿ ಹಲವು ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+