ರಾಧೇ ಮಾ ವಿರುದ್ಧ ಎಫ್ ಐಆರ್, ವಿಚಾರಣೆಗೆ ಬರುವಂತೆ ಸಮನ್ಸ್
ಮುಂಬೈ, ಆಗಸ್ಟ್ 09: ವಿವಾದಿತ ದೇವಮಾತೆ ರಾಧೇ ಮಾ ಈಗ ಮುಂಬೈಗೆ ಬಂದಿಳಿದಿದ್ದಾರೆ. ಮುಂಬೈಗೆ ಬಂದ ರಾಧೇ ಮಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
ವರದಕ್ಷಿಣೆ ಕಿರುಕುಳ ಕೇಸಿನಲ್ಲಿ ಸುಖ್ವಿಂದರ್ ಕೌರ್ ಅಲಿಯಾಸ್ ರಾಧೇ ಮಾ ವಿರುದ್ಧ ದೂರು ಸ್ವೀಕರಿಸಿ, ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ರಾಧೇ ಮಾ ಹೇಳಿಕೆ ಪಡೆಯಲಾಗಿದ್ದು, ವಿಚಾರಣೆಗೆ ಸೋಮವಾರದಂದು ಹಾಜರಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಖಂಡಿವಿಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಮುಕುಂದ್ ಪವಾರ್ ಅವರು ಹೇಳಿದ್ದಾರೆ.

50 ವರ್ಷ ವಯಸ್ಸಿನ ರಾಧೆ ಮಾ ಈ ಬಗ್ಗೆ ಪ್ರತಿಕ್ರಿಯಿಸಿ, ಸತ್ಯವೇ ಶಿವ, ಸತ್ಯಕ್ಕೆ ಜಯವಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಪಂಜಾಬ್ ಮೂಲದ ರಾಧೇ ಮಾ ಅವರಿಗೆ ಕಿರುತೆರೆ ತಾರೆಗಳಾದ ಡಾಲಿ ಬಿಂದ್ರಾ, ಮನೋಜ್ ತಿವಾರಿ, ರವಿ ಕಿಶನ್ ಸೇರಿದಂತೆ ಅನೇಕರ್ ಸೆಲೆಬ್ರಿಟಿಗಳು ಭಕ್ತರಾಗಿದ್ದಾರೆ.
ವರದಕ್ಷಿಣೆ ಕಿರುಕುಳ, ಭಕ್ತರೊಡನೆ ಅನುಚಿತ ವರ್ತನೆ ಮುಂತಾದ ಆರೋಪಗಳಿವೆ. ಇತ್ತೀಚೆಗೆ ರಾಧೆ ಮಾ ಅವರು ಮಿನಿ ಸ್ಕರ್ಟ್ ನಲ್ಲಿರುವ ಚಿತ್ರಗಳು ಇಂಟರ್ನೆಟ್ ನಲ್ಲಿ ಹರಿದಾಡಿ ಭಾರಿ ಚರ್ಚೆಗೊಳಗಾಗಿತ್ತು.












Click it and Unblock the Notifications