ಗಣಪತಿ ದೇಗುಲದಲ್ಲಿ ನೇಣುಬಿಗಿದುಕೊಂಡು ಮಾಜಿ ಶಾಸಕ ಆತ್ಮಹತ್ಯೆ
ಮುಂಬೈ, ಜನವರಿ 17: ಮಾಜಿ ಶಾಸಕ, ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಮುಖಂಡ, ಸಿನಿಮಾ ನಿರ್ಮಾಪಕ ಸದಾನಂದ ಅಲಿಯಾಸ್ ಪಪ್ಪು (51) ಎಂಬುವರು ದೇಗುಲವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಎಸ್ ಅಲಿ ರಸ್ತೆಯಲ್ಲಿರುವ ಲಂಡಾಚಾ ಗಣಪತಿ ದೇಗುಲದಲ್ಲಿ ನೇಣುಬಿಗಿದುಕೊಂಡು ಸದಾನಂದ ಅವರು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ನೋಟ್ ಸಿಕ್ಕಿದೆ.
ಮರಾಠಿ ಚಿತ್ರ ನಿರ್ದೇಶಕ, ಎನ್ಸಿಪಿ ಮಾಜಿ ಎಂಎಲ್ಎ ಸದಾನಂದ್ ಅವರು ಬರೆದಿರುವ ಡೆತ್ ನೋಟ್ ನಲ್ಲಿ ಬಿಲ್ಡರ್ವೊಬ್ಬ ನನಗೆ ಚಿತ್ರಹಿಂಸೆ ನೀಡುತ್ತಿದ್ದಾನೆ ಬೇರೆ ದಾರಿ ಕಾಣದೆ ನಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆಯಲಾಗಿದೆ.

ದೇಗುಲದ ಆವರಣದಲ್ಲಿರ ಶೆಡ್ಬಳಿ ಸದಾನಂದ ಅವರ ಶವ ಕಂಡ ದೇಗುಲದ ಪೂಜಾರಿಯೊಬ್ಬರು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.ಸದಾನಂದ್ ಅವರ ಮಗ ಅಂಕುರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಐಪಿಸಿ ಸೆಕ್ಷನ್ 306ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎಲ್ ಜಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮರಾಠಿ ಚಿತ್ರಗಳನ್ನು ಸದಾನಂದ ಅವರು ನಿರ್ಮಿಸಿದ್ದರು.












Click it and Unblock the Notifications