ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಸಂಪರ್ಕಕ್ಕೆ ಒಪ್ಪದ ಫೇಸ್ ಬುಕ್ ಗೆಳತಿಯ ಕೊಲೆ

|
Google Oneindia Kannada News

ಮುಂಬೈ, ಫೆಬ್ರವರಿ 20: ಫೇಸ್ ಬುಕ್ ನ ಸ್ನೇಹವೊಂದು ಮುಂಬೈ ಯುವತಿಯ ಸಾವಿಗೆ ಕಾರಣವಾಗಿದೆ. ವಶಿಯ ಇಪ್ಪತ್ತು ವರ್ಷದ ಯುವತಿ ಅಂಕಿತಾ ಮೋರೆ ತನ್ನ ಫೇಸ್ ಬುಕ್ ಗೆಳೆಯನ್ನು ಭೇಟಿ ಮಾಡುವ ಸಲುವಾಗಿ ತೆರಳಿದ್ದರು. ಆತ ಇಪ್ಪತ್ತೈದು ವರ್ಷದ ನಲಸೋಪರದ ಇಪ್ಪತ್ತೈದು ವರ್ಷದ ಯುವಕ ಹರಿದಾಸ್ ನಿರ್ಗುಡೆ.

ಈಚೆಗಷ್ಟೇ ತನ್ನ ಫೇಸ್ ಬುಕ್ ಅಕೌಂಟ್ ನ ಗೆಳೆಯರ ಪಟ್ಟಿಯಿಂದ ಆತನನ್ನ್ನು ಅಂಕಿತಾ ಹೊರಗಿಟ್ಟಿದ್ದರು. ನಿರ್ಗುಡೆ ಉಳಿದುಕೊಂಡಿದ್ದ ಫ್ಲ್ಯಾಟ್ ನ ಮಹಡಿಯ ಬಳಿ ಅಂಕಿತಾ ದೇಹ ಪತ್ತೆಯಾಗಿದೆ. ಅದನ್ನು ಕಂಡ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಜೋಕೆ, ಒಂದು whatsapp ಮೆಸೇಜ್ ನಿಮ್ಮನ್ನು ಜೈಲಿಗೆ ತಳ್ಳಬಹುದು!ಜೋಕೆ, ಒಂದು whatsapp ಮೆಸೇಜ್ ನಿಮ್ಮನ್ನು ಜೈಲಿಗೆ ತಳ್ಳಬಹುದು!

ಇನ್ನು ಫ್ಲ್ಯಾಟ್ ನಲ್ಲಿ ಯಾರ ಮನೆಗೆ ಯುವತಿ ಬಂದಿದ್ದು ಎಂದು ಪೊಲೀಸರು ವಿಚಾರಿಸುವಾಗ ನಿರ್ಗುಡೆ ಮನೆಯ ಬಳಿ ರಕ್ತದ ಕಲೆಗಳು ಕಂಡುಬಂದಿದೆ. ಆಕೆ ನನ್ನ ಜತೆ ಲೈಂಗಿಕ ಸಂಪರ್ಕಕ್ಕೆ ಒಪ್ಪಲಿಲ್ಲ. ಆದ್ದರಿಂದ ಶೂ ಲೇಸ್ ನಿಂದ ಕೊಂದುಬಿಟ್ಟೆ ಎಂದು ನಿರ್ಗುಡೆ ತಪ್ಪೊಪ್ಪಿಕೊಂಡಿದ್ದಾನೆ. ಆತನ ಮನೆಯಲ್ಲೇ ಅಂಕಿತಾರ ಮೊಬೈಲ್ ಫೋನ್ ಹಾಗೂ ಪರ್ಸ್ ಪತ್ತೆಯಾಗಿದೆ.

Facebook friend kills 20-year-old girl for refusing physical relationship

ನಿರ್ಗುಡೆ ತನ್ನ ಸೋದರಿ ಜತೆ ವಾಸವಿದ್ದ. ಆ ದಿನ ಆಕೆ ಮನೆಯಲ್ಲಿರಲಿಲ್ಲ. ಅಂಥ ವೇಳೆ ಅಂಕಿತಾರನ್ನು ತನ್ನ ಮನೆಗೆ ಆಹ್ವಾನಿಸಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಆಕೆ ಒಪ್ಪದಿದ್ದಾಗ ಕೊಂದು, ಮಹಡಿಯಲ್ಲಿ ಹೆಣ ಮಲಗಿಸಿ, ವಾಪಸ್ ಮನೆಗೆ ಬಂದಿದ್ದಾನೆ. ಕಳೆದ ಕೆಲ ತಿಂಗಳಿಂದ ಇವರಿಬ್ಬರ ಮಧ್ಯೆ ಚಾಟಿಂಗ್ ನಡೆಯುತ್ತಿತ್ತು. ಪರಸ್ಪರ ಇಷ್ಟಪಡುತ್ತಿದ್ದರು. ಆ ಯುವತಿ ತನ್ನ ಕುಟುಂಬದವರಿಗೆ ತಿಳಿಸದೆ ಆತನ ಭೇಟಿಗೆ ಬಂದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Ankita More, A 20-year-old girl from Vashi who had gone to meet her Facebook friend, Haridas Nirgude, a 25-year-old man from Nalasopara, was found dead in the building. The police said that, girl had gone to meet the accused, whom she had befriended recently on the social networking site. Nirgude has confessed to killing the girl after she refused physical relationship, the police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X