Breaking: ಶಿವಸೇನೆಯಿಂದ ಏಕನಾಥ್ ಶಿಂಧೆಗೆ ಗೇಟ್ ಪಾಸ್ ಕೊಟ್ಟ ಉದ್ಧವ್ ಠಾಕ್ರೆ!
"ಶಿವಸೇನಾ ಪಕ್ಷ ಪ್ರಮುಖನಾಗಿ ನನಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ" ಎಂದು ಉದ್ಧವ್ ಠಾಕ್ರೆ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ. ಮುಂಬೈ, ಜುಲೈ 01: ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕತ್ವವು ಯಾರ ಪಾಲಾಗುತ್ತದೆ? ಎನ್ನುವ ಬಗ್ಗೆ ತೀವ್ರ ಚರ್ಚೆಯ ನಡುವೆ ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಶಿವಸೇನೆಯಿಂದಲೇ ಹೊರ ಹಾಕಲಾಗುವುದು ಎಂದು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಶಿವಸೇನೆ ಸಂಘಟನೆಯ ಸಂಘಟನಾ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆಯನ್ನು ತೆಗೆದು ಹಾಕಲಾಗುವುದು. ಏಕೆಂದರೆ ಮುಖ್ಯಮಂತ್ರಿ ಏಕನಾಥ್ ಶಿಂಧೆ "ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿದ್ದಾರೆ.
ಅಲ್ಲದೇ ಸ್ವಯಂಪ್ರೇರಣೆಯಿಂದ ತಮ್ಮ ಸದಸ್ಯತ್ವವನ್ನು ತ್ಯಜಿಸಿದ್ದಾರೆ ಎಂದು ಪಕ್ಷವು ಹೊರಡಿಸಿರುವ ಪತ್ರದಲ್ಲಿ ಉದ್ಧವ್ ಠಾಕ್ರೆ ಉಲ್ಲೇಖಿಸಿದ್ದಾರೆ.
"ಶಿವಸೇನಾ ಪಕ್ಷ ಪ್ರಮುಖನಾಗಿ ನನಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ" ಎಂದು ಉದ್ಧವ್ ಠಾಕ್ರೆ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

ಉದ್ಧವ್ ಠಾಕ್ರೆ ಬಣದಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ತಮಗೆ ಅತಿಹೆಚ್ಚು ಶಾಸಕರ ಬೆಂಬಲವಿದೆ ಎಂದು ಆರಂಭದಿಂದಲೂ ಬಂಡಾಯ ಶಾಸಕ ಏಕನಾಥ್ ಶಿಂಧೆ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ಅದ್ಯಾವ ಹಂತದಲ್ಲಿಯೂ ಸಹ ತಾವು ಶಿವಸೇನೆಯ ಮುಖ್ಯಸ್ಥರು ಎನ್ನುವಂತೆ ಬಿಂಬಿಸಿಕೊಂಡಿಲ್ಲ. ನಾನೇ ಶಿವಸೇನೆ ಮುಖ್ಯಸ್ಥ ಎಂದು ಎಲ್ಲಿಯೂ ಹೇಳಿಕೆಯನ್ನು ನೀಡಿಲ್ಲ. ಅಂದರೆ, ಇಂದಿಗೂ ಸಹ ಶಿವಸೇನೆಯ ಮುಖ್ಯಸ್ಥರು ಉದ್ಧವ್ ಠಾಕ್ರೆಯೇ ಆಗಿದ್ದಾರೆ ಎಂಬುದು ಸ್ಪಷ್ಚವಾಗಿ ಗೋಚರಿಸುತ್ತಿದೆ.
ಉದ್ಧವ್ ಠಾಕ್ರೆ ಬಣದಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ತಮಗೆ ಅತಿಹೆಚ್ಚು ಶಾಸಕರ ಬೆಂಬಲವಿದೆ ಎಂದು ಆರಂಭದಿಂದಲೂ ಬಂಡಾಯ ಶಾಸಕ ಏಕನಾಥ್ ಶಿಂಧೆ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ಅದ್ಯಾವ ಹಂತದಲ್ಲಿಯೂ ಸಹ ತಾವು ಶಿವಸೇನೆಯ ಮುಖ್ಯಸ್ಥರು ಎನ್ನುವಂತೆ ಬಿಂಬಿಸಿಕೊಂಡಿಲ್ಲ. ನಾನೇ ಶಿವಸೇನೆ ಮುಖ್ಯಸ್ಥ ಎಂದು ಎಲ್ಲಿಯೂ ಹೇಳಿಕೆಯನ್ನು ನೀಡಿಲ್ಲ. ಅಂದರೆ, ಇಂದಿಗೂ ಸಹ ಶಿವಸೇನೆಯ ಮುಖ್ಯಸ್ಥರು ಉದ್ಧವ್ ಠಾಕ್ರೆಯೇ ಆಗಿದ್ದಾರೆ ಎಂಬುದು ಸ್ಪಷ್ಚವಾಗಿ ಗೋಚರಿಸುತ್ತಿದೆ.

ಪರೋಕ್ಷವಾಗಿ ಸಂದೇಶ ರವಾನಿಸಿದರಾ ಶಿಂಧೆ
ಮಹಾರಾಷ್ಟ್ರದಲ್ಲಿ ಶಿವಸೇನೆಯ ಸಂಸ್ಥಾಪಕ ಆಗಿರುವ ಬಾಳಾಸಾಹೇಬ್ ಠಾಕ್ರೆಯ ರಾಜಕೀಯ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇದರ ಮಧ್ಯೆ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪರೋಕ್ಷ ಸಂದೇಶವೊಂದನ್ನು ರವಾನಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಾಳಾಸಾಹೇಬ್ ಠಾಕ್ರೆ ಜೊತೆಗಿನ ಫೋಟೋವೊಂದನ್ನು ಪ್ರೊಫೈಲ್ ಚಿತ್ರವಾಗಿ ಬದಲಾಯಿಸಿಕೊಂಡಿದ್ದಾರೆ. ಆ ಮೂಲಕ ಹಿಂದುತ್ವದ ಐಕಾನ್ ಮತ್ತು ಮರಾಠಾದ ಹೆಮ್ಮೆಯ ಚಿಹ್ನೆಯನ್ನು ಚೇಂಜ್ ಮಾಡಿದ್ದಾರೆ. ಇದು ರಾಜಕೀಯ ಮೇಲಾಟದ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದೆ.

ಮಹಾ ವಿಕಾಸ ಅಘಾಡಿ ಅಪವಿತ್ರ ಮೈತ್ರಿ ಎಂದ ಶಿಂಧೆ
ತಾವೇ ನಿಜವಾದ ಶಿವಸೇನೆ ಎಂದು ಏಕನಾಥ್ ಶಿಂಧೆ ಬಣವು ಸುಪ್ರೀಂ ಕೋರ್ಟ್‌ನಲ್ಲಿ ಘೋಷಿಸಿಕೊಂಡಿದೆ. ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮತ್ತು ಕಾಂಗ್ರೆಸ್‌ನೊಂದಿಗೆ ಒಕ್ಕೂಟವನ್ನು ರಚಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆಯ ಹಿಂದುತ್ವದ ಸಿದ್ಧಾಂತವನ್ನು ದುರ್ಬಲಗೊಳಿಸಿದ್ದಾರೆ ಎಂದು ವಾದಿಸಿದರು. ಅಲ್ಲದೇ ಮಹಾ ವಿಕಾಸ ಅಘಾಡಿ ಸರ್ಕಾರವು "ಅಸ್ವಾಭಾವಿಕ ಮೈತ್ರಿ" ಎಂದು ಕರೆದರು.
ಉದ್ಧವ್ ಠಾಕ್ರೆ ವಿರುದ್ಧ ನೇರ ವಾಗ್ದಾಳಿ ನಡೆಸಿದ ಸೇನೆಯ ಬಂಡಾಯ ಸಚಿವ ಗುಲಾಬ್ರಾವ್ ಪಾಟೀಲ್, ಈ ಹಿಂದೆ ಉದ್ಧವ್ ಠಾಕ್ರೆ ತಮ್ಮದೇ ಪಕ್ಷದ 52 ಶಾಸಕರು ಮತ್ತು ತಮ್ಮ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಆದರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಬಿಡಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಶಿಂಧೆ ಸರ್ಕಾರಕ್ಕೆ ಜುಲೈ 4ರಂದು ವಿಶ್ವಾಸ ಪರೀಕ್ಷೆ
ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಜುಲೈ 4ರಂದು ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಶಿವಸೇನೆ-ಬಿಜೆಪಿ ಸರ್ಕಾರವು ಜುಲೈ 4ರಂದು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಏಕನಾಥ್ ಶಿಂಧೆ ಜೊತೆಗೆ ಗುರುತಿಸಿಕೊಂಡ ಇತರೆ ಬಂಡಾಯ ಶಾಸಕರು ಜುಲೈ 2ರಂದು ಮುಂಬೈಗೆ ಆಗಮಿಸಲಿದ್ದಾರೆ.
ಜುಲೈ 3 ಅಥವಾ 4ರಂದು ರಾಜ್ಯಪಾಲರು ಅಧಿವೇಶನ ಕರೆದಿದ್ದಾರೆ. ನಾವು 170 ಶಾಸಕರ ಬೆಂಬಲವನ್ನು ಹೊಂದಿದ್ದು, ಈ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಧಾನಸಭೆಯಲ್ಲಿ ನಾವು ಆರಾಮದಾಯಕ ಬಹುಮತ ಸಾಬೀತುಪಡಿಸುತ್ತೇವೆ," ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.












Click it and Unblock the Notifications