ದಾವೂದ್ ತಮ್ಮ ಇಕ್ಬಾಲ್ ಬಿಚ್ಚಿಟ್ಟ ರಹಸ್ಯಗಳ ವಿವರ
ಮುಂಬೈ, ಸೆ. 22: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಡಗಿಕೊಂಡಿರುವ ಪಾಕಿಸ್ತಾನದ ವಿಳಾಸದ ವಿವರಗಳನ್ನು ಸೆರೆ ಸಿಕ್ಕಿರುವ ಆತನ ತಮ್ಮ ಇಕ್ಬಾಲ್ ಕಸ್ಕರ್ ಥಾಣೆ ಪೊಲೀಸರ ಮುಂದೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಪಾಕಿಸ್ತಾನ ಮಾತ್ರ ದಾವೂದ್ ಇಬ್ರಾಹಿಂ ತನ್ನ ದೇಶದಲ್ಲಿ ಇಲ್ಲ ಎಂದು ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ವಾದಿಸುತ್ತಾ ಬಂದಿದೆ. ದಾವೂದ್ ನಿರಂತರವಾಗಿ ತನ್ನ ವಾಸ್ತವ್ಯವನ್ನು ಬದಲಿಸುತ್ತಿರುತ್ತಾನೆ ಎಂದು ಕಸ್ಕರ್ ಸ್ಪಷ್ಟಪಡಿಸಿದ್ದಾನೆ.

2016ರಲ್ಲಿ ದಾವೂದ್ ಇರುವ ವಿಳಾಸಗಳ ಪಟ್ಟಿಯನ್ನು ವಿಶ್ವಸಂಸ್ಥೆಗೆ ಪರಿಶೀಲನೆಗಾಗಿ ಭಾರತ ಸಲ್ಲಿಸಿತ್ತು. ಈ ಪೈಕಿ 9 ವಿಳಾಸಗಳಲ್ಲಿ 3 ವಿಳಾಸಗಳು ತಪ್ಪು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿ ತಿಳಿಸಿತ್ತು. ಹಾಗೂ ಆ ಮೂರು ವಿಳಾಸಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಳಾಸಗಳು:
* ಮನೆ ನಂ 37, 30ನೇ ಬೀದಿ, ಡಿಫೆನ್ಸ್ ಹೌಸಿಂಗ್ ಪ್ರಾಧಿಕಾರಿ, ಕರಾಚಿ, ಪಾಕಿಸ್ತಾನ
* ನೂರಾಬಾದ್, ಕರಾಚಿ, ಪಾಕಿಸ್ತಾನ (ಬೆಟ್ಟ ಪ್ರದೇಶದಲ್ಲಿರುವ ಬಂಗಲೆ)
* ವೈಟ್ ಹೌಸ್, ಸೌದಿ ಮಸೀದಿ ಬಳಿ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ
ಕಳೆದ ವರ್ಷದ ತನಕ ದಾಖಲೆಯಲ್ಲಿದ್ದ ಮತ್ತೊಂದು ವಿಳಾಸ:
* ಮನೆ ನಂ 29, ಮಾರ್ಗಲ್ಲಾ ರಸ್ತೆ, ಎಫ್ 6/2 ಸ್ಟ್ರೀಟ್, ಕರಾಚಿ, ಪಾಕಿಸ್ತಾನ
ಹೆಸರುಗಳು ಹೀಗಿವೆ: ಇಸ್ಮಾಯಿಲ್ ಅಬ್ದುಲ್, ಅಜೀಜ್ ಅಬ್ದುಲ್ ಹಮೀದ್, ಅಬ್ದುಲ್ ರಹಮಾನ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ಅನೀಸ್ ಇಬ್ರಾಹಿಂ, ಶೇಖ್ ಅಬ್ದುಲ್, ಶೇಖ್ ಮುಹಮ್ಮದ್, ಶೇಖ್ ಇಸ್ಮಾಯಿಲ್, ಅಜೀಜ್ ಇಬ್ರಾಹಿಂ, ಶೇಖ್ ಮುಹಮ್ಮದ್ ಬಡಾ ಭಾಯಿ, ದಾವೂದ್ ಭಾಯಿ, ಇಕ್ಬಾಲ್ ಭಾಯಿ, ದಿಲೀಪ್ ಅಜೀಜ್, ದಾವೂದ್ ಇಬ್ರಾಹಿಂ, ದಾವೂದ್ ಹಸನ್, ಅನೀಸ್ ಇಬ್ರಾಹಿಂ, ದಾವೂದ್ ಹಸನ್, ಶೇಖ್ ಕಸ್ಕರ್, ಮೆಮೊನ್ ಕಸ್ಕರ್, ದಾವೂದ್ ಹಸನ್, ಇಬ್ರಾಹಿಂ ಮೆಮೊ, ದಾವೂದ್ ಇಬ್ರಾಹಿಂ ಸಬ್ರಿ, ದಾವೂದ್ ಸಹಬ್, ಹಾಜಿ ಶೇಥ್ ಬಡಾ












Click it and Unblock the Notifications