"ಡ್ಯಾನ್ಸ್ ಬಾರ್ಗಳ ಮೇಲಿನ ನಿರ್ಬಂಧ ತೆರವು"
ಮುಂಬೈ, ಅ.15: ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ಗಳ ಮೇಲಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಗುರುವಾರ ತೆರವುಗೊಳಿಸಿದೆ. ಬೀರ್ ಬಾರ್, ರೆಸ್ಟೋರೆಂಟ್ ಗಳಲ್ಲಿ ಮಹಿಳೆಯರು ನರ್ತಿಸುವುದಕ್ಕೆ ಮಹಾರಾಷ್ಟ್ರ ಪೊಲೀಸ್ ಕಾಯ್ದೆ ನಿರ್ಬಂಧ ಹೇರಿತ್ತು.
ಅದರೆ, ಬಾರ್ಗಳಲ್ಲಿ ನರ್ತಿಸುವುದರಿಂದ ಮಹಿಳೆಯರ ಘನತೆಗೆ ಕುಂದು ಉಂಟಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾ ದೀಪಕ್ ಮಿಶ್ರಾ ಹಾಗೂ ಜಸ್ಟೀಸ್ ಪ್ರಫುಲ್ಲಾ ಸಿ ಅಭಿಪ್ರಾಯಪಟ್ಟಿದ್ದಾರೆ.

2005ರಲ್ಲಿ ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ಗಳ ಮೇಲೆ ಮುಂಬೈ ಪೊಲೀಸ್ ನಿರ್ಬಂಧ ಹೇರಿತ್ತು. ಪಂಚತಾರಾ ಹೋಟೆಲ್ಗಳಿಗೆ ವಿನಾಯಿತಿ ನೀಡಲಾಗಿತ್ತು. 2013ರಲ್ಲಿ ಮುಂಬೈ ಹೈಕೋರ್ಟ್ ಅಧಿಕೃತವಾಗಿ ಬಾರ್ಗಳಲ್ಲಿ ಮಹಿಳೆಯರು ನರ್ತಿಸಕೂಡದು ಎಂದು ನಿರ್ಬಂಧ ವಿಧಿಸಿತ್ತು. ಇದರಿಂದ ಸಾವಿರಾರು ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಬಾರ್ ಮಾಲೀಕರು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.
I think it's fantastic that the ban (on dance bars) has been lifted: Konkona Sen Sharma, Actress #DanceNoBar https://t.co/KbGtIjKsvd
— TIMES NOW (@TimesNow) ಅಕ್ಟೋಬರ್ 15, 2015 ಮಹಾರಾಷ್ಟ್ರದಲ್ಲಿ ಸುಮಾರು 700 ಡ್ಯಾನ್ಸ್ ಬಾರ್ಗಳಿದ್ದು, ಸುಮಾರು 75,000 ಮಹಿಳೆಯರಿಗೆ ಉದ್ಯೋಗ ಕಲ್ಪಿಸಿವೆ. ನರ್ತಕಿಯರ ಒಕ್ಕೂಟಗಳು ನಿಷೇಧವನ್ನು ವಿರೋಧಿಸಿದ್ದವು. ಅದರೆ, ಈಗ ನಿಷೇಧ ತೆರವುಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿವೆ. ಬಾಲಿವುಡ್ ನಟಿ ಕೊಂಕನಾ ಸೇನ್ ಕೂಡಾ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. (ಐಎಎನ್ಎಸ್)












Click it and Unblock the Notifications