ಮುಂಬೈನಲ್ಲಿ ಕೊರೊನಾ ವೈರಸ್‌ ಪ್ರತಿಕೃತಿ ಸುಟ್ಟು ಹೋಳಿ ಸಂಭ್ರಮಾಚರಣೆ

ಮುಂಬೈ, ಮಾರ್ಚ್ 09: ಜಗತ್ತಿನಾದ್ಯಂತ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸುತ್ತಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3.8 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.

ಕೊರೊನಾ ಭೀತಿಯಿಂದ ಅನೇಕ ಕಡೆ ಹೋಳಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಹೋಳಿ ಸಂಭ್ರಮಿಸಲು ಹೆಚ್ಚು ಜನರು ಸೇರುವುದರಿಂದ ಕೊರೊನಾ ಹರಡಬಹುದು ಎಂಬ ಆತಂಕದಿಂದ ಹೋಳಿ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ.

ಆತಂಕದ ನಡುವೆಯೂ ಅನೇಕ ಕಡೆ ಹೋಳಿ ಸಂಭ್ರಮಾಚರಣೆ ಮಾಡಲಾಗಿದೆ. ಮುಂಬೈನ ವರ್ಲಿ ಪ್ರದೇಶದಲ್ಲಿ ಕೊರೊನಾ ವೈರಸ್ ಪ್ರತಿಕೃತಿ ದಹನ ಮಾಡಿ ವಿಶೇಷವಾಗಿ ಹೋಳಿ ಆಚರಿಸಲಾಗಿದೆ.

Coronavirus Effigy Burned In Mumbai

ವಿಶ್ವಾದ್ಯಂತ ಜನರನ್ನು ಬಲಿ ಪಡೆಯುತ್ತಿರುವ ಕೊರೊನಾ ವೈರಸ್‌ ಹೆಸರಿನಲ್ಲಿ ರಾಕ್ಷಸನ ಪ್ರತಿಕೃತಿ ನಿರ್ಮಿಸಿ, ಅದಕ್ಕೆ 'ಕೊರೊನಾಸುರ' (COVID 19) ಎಂದು ಹೆಸರಿಟ್ಟು ಬೆಂಕಿಯಿಟ್ಟು ಸುಡಲಾಗಿದೆ.

ಇದುವರೆಗೂ ಜಗತ್ತಿನಲ್ಲಿ 1,10,288 ಕೊರೊನಾ ಪ್ರಕರಣಗಳು ದಾಖಲಾಗಿದೆ. 3,831 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 43 ಪ್ರಕರಣಗಳು ಬೆಳಕಿಗೆ ಬಂದಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+