ಉದ್ಧವ್ ಠಾಕ್ರೆ ಜೊತೆ ರಾಹುಲ್ ಗಾಂಧಿ ಸೋಶಿಯಲ್ ಡಿಸ್ಟೆನ್ಸ್: ಸ್ಪಷ್ಟನೆ
ನವದೆಹಲಿ, ಮೇ 26: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ ಎನ್ನುವ ಸುದ್ದಿಗೆ ರೆಕ್ಕೆಪುಕ್ಕ ಇದೆಯೋ, ಇಲ್ಲವೋ ಗೊತ್ತಿಲ್ಲ, ಆದರೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತ್ರ ಸರಣಿ ಸಭೆ ನಡೆಸಿದ್ದೇ ನಡೆಸಿದ್ದು.
Recommended Video
ಉದ್ಧವ್ ಠಾಕ್ರೆ ನೇತೃತ್ವದ ಸರಕಾರದ ಜೊತೆ ರಾಹುಲ್ ಗಾಂಧಿ ಅಂತರ ಕಾಯ್ಡುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆಯನ್ನು ನೀಡಿದ್ದಾರೆ.
"ಠಾಕ್ರೆ ಸರಕಾರಕ್ಕೆ ಕಾಂಗ್ರೆಸ್ ಬೆಂಬಲವನ್ನು ಮಾತ್ರ ನೀಡುತ್ತಿದೆ. ಸರಕಾರದ ಪ್ರಮುಖ ನಿರ್ಧಾರಗಳಲ್ಲಿ ಕಾಂಗ್ರೆಸ್ ತಲೆ ಹಾಕುವುದಿಲ್ಲ"ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಪಂಜಾಬ್, ಛತ್ತೀಸಗಢ, ರಾಜಸ್ಥಾನ ಮತ್ತು ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷ ತಾನೇ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಆದರೆ, ಮಹಾರಾಷ್ಟ್ರದ ವಿಚಾರದಲ್ಲಿ ಹಾಗಲ್ಲ"ಎಂದು ರಾಹುಲ್ ಗಾಂಧಿ ಸ್ಪಷ್ಟ ಪಡಿಸಿದ್ದಾರೆ.
"ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಮಹಾರಾಷ್ಟ್ರ ದೇಶದ ಪ್ರಮುಖ ರಾಜ್ಯಗಳಲ್ಲೊಂದು, ಮುಂಬೈ ಈ ದೇಶದ ವಾಣಿಜ್ಯ ರಾಜಧಾನಿ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಿದೆ"ಎಂದು ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ.
'ಸರಕಾರ ನಡೆಸುವುದು ಮತ್ತು ಸರಕಾರಕ್ಕೆ ಬೆಂಬಲ ನೀಡುವುದು ಈ ಪದಕ್ಕೆ ಬೇರೆ ಬೇರೆ ಅರ್ಥವಿದೆ" ಎಂದು ರಾಹುಲ್ ಹೇಳಿದ್ದಾರೆ. "ರಾಹುಲ್ ಅವರ ಹೇಳಿಕೆ ಸರಿಯಾಗಿಯೇ ಇದೆ" ಎಂದು ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ.












Click it and Unblock the Notifications