'ಚೇತನ್ ಭಗತ್ ಸಾಹಿತ್ಯ ಲೋಕದ ರಾಹುಲ್ ಗಾಂಧಿ!'

ಮುಂಬೈ, ಅ.30: ಜನಪ್ರಿಯ ಲೇಖಕ ಚೇತನ್ ಭಗತ್ ಅವರು ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಇತಿಹಾಸಕಾರರು ಏನು ಮಾಡ್ತಾರೆ? ಎಂದ ಚೇತನ್ ಭಗತ್ ಅವರ ಕಾಲೆಳೆಯಲಾಗಿದೆ.

ಕರ್ನಾಟಕದ ಖ್ಯಾತ ಸಂಶೋಧಕ, ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಮತ್ತು ದಾದ್ರಿ ಹತ್ಯೆ ಪ್ರಕರಣಗಳಲ್ಲಿ ಸರ್ಕಾರ ಮೌನವಹಿಸಬಾರದು. ಇಂತಹ ಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿ, ದೇಶಾದ್ಯಂತ 50ಕ್ಕೂ ಹೆಚ್ಚು ಜನ ಹೆಸರಾಂತ ಇತಿಹಾಸ ಸಂಶೋಧಕರು ಪ್ರತಿಭಟನೆಗಿಳಿದಿದ್ದಾರೆ. [ಚೇತನ್ ಭಗತ್ 'ಅರ್ಧ ಪ್ರೇಯಸಿ'ಯ ಕತೆಯಿದು]

ಮುಖ್ಯವಾಗಿ ಇತಿಹಾಸ ಸಂಶೋಧಕರಾದ ಖ್ಯಾತ ರೊಮಿಲಾ ಥಾಫರ್, ಇರ್ಫಾಭನ್ ಹಬೀಬ್, ಬಿ.ಡಿ.ಚಟ್ಟೋಪಾಧ್ಯಾಯ, ಉಪೇಂದರ್ ಸಿಂಗ್, ಎಂ.ಜಿ.ಎಸ್ ನಾರಾಯಣನ್ ಹಾಗೂ ಬಿ.ಎನ್.ಝಾ ಮತ್ತಿತರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಚೇತನ್ ಭಗತ್ ಅವರು ಇತಿಹಾಸಕಾರರ ಬಗ್ಗೆ ಏನೋ ಹೇಳಲು ಹೋಗಿ ಮತ್ತೇನೋ ಹೇಳಿ ನಾಲಗೆ ಕಚ್ಚಿಕೊಂಡಿದ್ದಾರೆ. ಕೊನೆಗೆ ನಾನು ತಮಾಷೆಗೆ ಹೇಳಿದ್ದು ಎಂದಿದ್ದಾರೆ. ಹೌದು ಚೇತನ್ ಭಗತ್ ಏನು ಮಾಡುತ್ತಾರೆ? ಒಂದು ಟ್ವೀಟ್ ಮತ್ತೊಂದು ಟ್ವೀಟ್ ಜನಪ್ರಿಯತೆ ಆಮೇಲೆ ನಿದ್ದೆ ಅಷ್ಟೇ ಅಲ್ಲ ಎಂದಿದ್ದಾರೆ. ಕೆಲವರಂತೂ ಚೇತನ್ ರನ್ನು ರಾಹುಲ್ ಗಾಂಧಿಗೆ ಹೋಲಿಸಿದ್ದಾರೆ. ನಿಮ್ಮ ಐಐಟಿ ಡಿಗ್ರಿ ವಾಪಸ್ ಮಾಡಿ ಎಂದು ಆಗ್ರಹಿಸಿದ್ದಾರೆ.

ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರವಿದೆ

ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರವಿದೆ

ದೇಶದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರವಿದೆ ಅದನ್ನು ವ್ಯಕ್ತಪಡಿಸಲು ಅವಕಾಶ ಕೊಡಬೇಕು. ಸಮಾಜದ ಎಲ್ಲಾ ವರ್ಗ ಹಾಗೂ ವರ್ಣದ ಜನರಿಗೂ ಸೂಕ್ತ ಭದ್ರತೆ ಒದಗಿಸಬೇಕು. ನಮ್ಮ ದೇಶ ಹಿಂದಿನಿಂದಲೂ ವಿಭಿನ್ನತೆಯಲ್ಲಿ ಏಕತೆಯನ್ನು ರೂಢಿಸಿಕೊಂಡು ಬಂದಿದೆ. ಅದನ್ನು ಸಂರಕ್ಷಿಸುವ ಹೊಣೆ ಸರ್ಕಾರದ್ದು ಎಂದು ಈ ಇತಿಹಾಸಕಾರರು ಹೇಳಿದ್ದಾರೆ.

ಹಾಲೋವಿನ್ ಡೇ ಹಾಗೂ ಭಗತ್

ಭಾರತೀಯರು ಹಾಲೋವಿನ್ ಡೇ ಆಚರಿಸುವುದು ಭಗತ್ ನಚ್ ಬಲಿಯೇ ಜಡ್ಜ್ ಆಗಿರುವುದು ಎರಡೂ ಒಂದೇ

ನನ್ನ ಮಾತನ್ನು ತಪ್ಪು ತಿಳಿಯ ಬೇಡಿ

ನನ್ನ ಮಾತನ್ನು ತಪ್ಪು ತಿಳಿಯ ಬೇಡಿಮ್ ಅನ್ಯಥಾ ಭಾವಿಸಬೇಡಿ, ಪ್ರಶಸ್ತಿ ವಾಪಸ್ ಮಾಡುವುದು ದೊಡ್ಡ ವಿಷ್ಯ ಎಂದ ಚೇತನ್.

ಪ್ರಶಸ್ತಿ ವಾಪಸ್ ಮಾಡುವವರಿಗೆ ಸರಿಯಾದ ಅರಿವಿಲ್ಲ

ಪ್ರಶಸ್ತಿ ವಾಪಸ್ಮಾಡುವವರಿಗೆ ಸರಿಯಾದ ಅರಿವಿಲ್ಲ, ಸಮೂಹ ಸನ್ನಿಗೆ ಒಳಗಾಗಿದ್ದಾರೆ ಎಂದಿದ್ದ ಚೇತನ್ ಭಗತ್.

ವಿವಾದಕ್ಕೆ ಕಾರಣವಾದ ಚೇತನ್ ಟ್ವೀಟ್

ವಿವಾದಕ್ಕೆ ಕಾರಣವಾದ ಚೇತನ್ ಟ್ವೀಟ್

ಸಾಹಿತ್ಯ ಲೋಕದ ರಾಹುಲ್ ಗಾಂಧಿ

ಚೇತನ್ ಭಗತ್ ರನ್ನು ಸಾಹಿತ್ಯ ಲೋಕದ ರಾಹುಲ್ ಗಾಂಧಿ ಎಂದ ಟ್ವೀಟ್.

ಹೌದು ಸಾಫ್ಟ್ ವೇರ್ ಇಂಜಿನಿಯರ್ಸ್ ಏನ್ಮಾಡ್ತಾರೆ?

ಹೌದು ಸಾಫ್ಟ್ ವೇರ್ ಇಂಜಿನಿಯರ್ಸ್ ಏನ್ಮಾಡ್ತಾರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+