ಸಲ್ಮಾನ್ ಖಾನ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್

ಮುಂಬೈ, ಡಿಸೆಂಬರ್ 14: ದಬಾಂಗ್ ಹೀರೋ ಸಲ್ಮಾನ್ ಖಾನ್‌ ಮನೆಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಒಂದು ಬಂದು ಪೊಲೀಸರನ್ನು ಬೆಸ್ತು ಬೀಳಿಸಿದ ಘಟನೆ ನಡೆದಿದೆ.

ಸಲ್ಮಾನ್ ಖಾನ್ ನ ಮುಂಬೈನ ಬಾಂದ್ರಾನಲ್ಲಿರುವ 'ಗ್ಯಾಲೆಕ್ಸಿ' ಮನೆಗೆ ಬಾಂಬ್ ಇಟ್ಟಿರುವುದಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನ 16 ರ ಹುಡುಗನೊಬ್ಬ ಮುಂಬೈ ಪೊಲೀಸರಿಗೆ ಇ-ಮೇಲ್ ಮಾಡಿದ್ದ. ಘಟನೆ ನಡೆದು ಹತ್ತು ದಿನಗಳಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

'ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್‌ ನ ಮನೆಗೆ ಬಾಂಬ್ ಇಟ್ಟಿದ್ದೇನೆ, ಇನ್ನೆರಡು ಗಂಟೆಯಲ್ಲಿ ಅದು ಸ್ಫೊಟಿಸುತ್ತದೆ, ತಡೆಯುವ ತಾಕತ್ತಿದ್ದರೆ ತಡೆಯಿರಿ' ಎಂದು ಬರೆದಿದ್ದ ಮೇಲ್ ಬಾಂದ್ರಾದ ಪೊಲೀಸ್ ಠಾಣೆಯ ಇ-ಮೇಲ್ ಖಾತೆಗೆ ಬಂದಿತ್ತು.

Bomb At Salman Khans Mumbai Home Police Received E-Mail

ಬಾಂಬ್ ಬೆದರಿಕೆಯನ್ನು ಗಂಭೀರವಾಗಿಯೇ ಪರಿಗಣಿಸಿದ ಪೊಲೀಸರು, ಸಲ್ಮಾನ್ ಖಾನ್ ಮುಂಬೈ ನಿವಾಸವನ್ನು ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸ್ಪೋಟಕ ವಸ್ತುಗಳು ಸಲ್ಮಾನ್ ಖಾನ್ ಮನೆಯಲ್ಲಿ ಪತ್ತೆಯಾಗಲಿಲ್ಲ.

ಮುಂಬೈ ಪೊಲೀಸ್‌ನ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸಲ್ಮಾನ್ ಖಾನ್ ಮನೆಯ ಪರಿಶೀಲನೆ ನಡೆಯಿತು. ಪೊಲೀಸರು ಸಲ್ಮಾನ್ ಖಾನ್ ಮನೆಗೆ ಭೇಟಿ ನೀಡಿದಾಗ ಸಲ್ಮಾನ್ ಖಾನ್ ಮನೆಯಲ್ಲಿರಲಿಲ್ಲ, ಬದಲಿಗೆ ಅವರ ಪೋಷಕರಾದ ಸಲೀಂ ಖಾನ್, ಸಹೋದರ ಮತ್ತು ಸಹೋದರಿ ಅರ್ಪಿತಾ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇ-ಮೇಲ್ ಕಳುಹಿಸಿದ ಹುಡುಗನ ವಿರುದ್ಧ ಬಾಂದ್ರಾ ಪೊಲೀಸರು ದೂರು ದಾಖಲಿದ್ದಾರೆ. ಆತನನ್ನು ಪೊಲೀಸರು ಬಂಧಿಸಲು ತೆರಳುವ ವೇಳೆಗಾಗಲೇ ಆತನೇ ಸಮೀಪದ ನ್ಯಾಯಾಲಯಕ್ಕೆ ಶರಣಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+