ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ಮುಂಬೈ, ಆಗಸ್ಟ್ 8: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್, ಇಲ್ಲಿನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಿಲೀಪ್ ಕುಮಾರ್ ಈಗ 94 ವರ್ಷ ವಯಸ್ಸಾಗಿದ್ದು, ಕಳೆದ ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪ್ರಾಥಮಿಕ ಹಂತದ ಯಾವುದೇ ಚಿಕಿತ್ಸೆಗೆ ಜ್ವರ ತಗ್ಗಲಿಲ್ಲವಾದ್ದರಿಂದ ಹಾಗೂ ನಿರ್ಜಲೀಕರಣ (dehydration) ಕಾಡುತ್ತಿರುವ ಕಾರಣದಿಂದ ಅವರನ್ನು ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರ ಪತ್ನಿ ಹಾಗೂ ಮಾಜಿ ನಟಿ ಸೈರಬಾನು ತಿಳಿಸಿದ್ದಾರೆ.

ಅಮೀರ್ ಖಾನ್ ಪ್ರಕಾರ ಬಾಲಿವುಡ್‌ನ ಸೂಪರ್ ಸ್ಟಾರ್ ಯಾರು?

Bollywood's veteran actor Dilip Kumar Hospitalised In Mumbai

ವಯೋ ಸಹಜ ಅನಾರೋಗ್ಯಕ್ಕೆ ಆಗಾಗ ತುತ್ತಾಗುತ್ತಿರುವ ಅವರು, ಕಳೆದ ಎರಡು ವರ್ಷಗಳಿಂದಲೂ ಆಸ್ಪತ್ರೆಗೆ ದಾಖಲಾಗುತ್ತಲೇ ಇದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿಯೂ ಅವರು, ಜ್ವರ ಹಾಗೂ ಗಂಟಲು ಊತ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ರಾತ್ರಿ ಕಳೆಯಲು ನಟಿ ಕೊಯಿನಾ ಮಿತ್ರಾಗೆ ಕರೆ, ಅಪರಿಚಿತನ ವಿರುದ್ಧ ದೂರು

ಡಿಸೆಂಬರ್ 11ರಂದು ಆಸ್ಪತ್ರೆಯಲ್ಲಿಯೇ ತಮ್ಮ 94ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅವರು, ಅದಾಗಿ ವಾರದ ನಂತರ ಅಲ್ಲಿಂದ ಬಿಡುಗಡೆ ಹೊಂದಿ ಮನೆ ಸೇರಿದ್ದರು.

IPL 2017: Mumbai Scores a Century Of Wins in IPL

1940ರಿಂದ ಸತತವಾಗಿ ಮೂರು ದಶಕಗಳವರೆಗೆ ದಿಲೀಪ್ ಕುಮಾರ್ ಅವರು ಹಿಂದಿ ಚಿತ್ರರಂಗದ ಸ್ಟಾರ್ ನಟರಾಗಿ ಮಿಂಚಿದ್ದರು. 1966ರಲ್ಲಿ ಅವರು ನಟಿ ಸೈರಬಾನು ಅವರನ್ನು ಮದುವೆಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindi silver screen legend Dilip Kumar, 94, was admitted to Mumbai's Lilavati Hospital on Wednesday evening after he suffered dehydration on August 2nd, 2017.
Please Wait while comments are loading...