ಪ್ರಧಾನಿ ಮೋದಿಗೆ ನಟಿ ರಾಖಿ ಸಾವಂತ್ ನೀಡಿದ ಖಡಕ್ ಸಲಹೆ
Recommended Video

ಮುಂಬೈ, ಜ 23: ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಮತ್ತು ಮುಂದಿನ ಐದು ವರ್ಷಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ, ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಸಲಹೆಯನ್ನೊಮ್ಮೆ ಕೇಳಿ..
ಖುದ್ದು ರಾಖಿ ಕೂಡಾ ಪ್ರಧಾನಿಗೆ, ನನ್ನ ಮಾತು ಕೇಳಿದರೆ ಮುಂದಿನ ಐದು ವರ್ಷ ನಿಮಗೇನೂ ತೊಂದರೆಯಿಲ್ಲ ಎಂದಿದ್ದಾರೆ. ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಸುಮಾರು ಒಂದು ನಿಮಿಷದ ವಿಡಿಯೋ ಹಾಕಿರುವ ರಾಖಿ, ಪ್ರಧಾನಿಗೆ ಕೊಟ್ಟ ಸಲಹೆ ಹೀಗಿದೆ..
" ಹಲೋ ಮೋದಿಜೀ.. ಹೌ ಆರ್ ಯು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬಾಲಿವುಡ್ ನಟ/ನಟಿಯರು ನಿಮ್ಮನ್ನು ಭೇಟಿಯಾಗುತ್ತಿದ್ದಾರೆ.. ಈ ದೇಶದ ನಾಗರೀಕನಾಗಿ ನಿಮಗೊಂದು ಸಲಹೆಯನ್ನು ನೀಡಲು ನಾನು ಬಯಸುತ್ತೇನೆ.

ಸೆಲೆಬ್ರಿಟಿಗಳನ್ನು ಭೇಟಿಯಾದರೆ ಒಳ್ಳೆಯದೇ.. ಆದರೆ ನಿಮಗೆ ಮತಚಲಾಯಿಸುವವರು ಬಡವರು ಮತ್ತು ರೈತರು. ಮೊದಲು ಅವರನ್ನು ಭೇಟಿಯಾಗಿ, ನಿಮಗೆ ಮತ ಚಲಾಯಿಸುವವರು ಅವರೇ.. ಈ ಸೆಲೆಬ್ರಿಟಿಗಳು ವೋಟ್ ಹಾಕಿ ನಿಮ್ಮನ್ನು ಗೆಲ್ಲಿಸುವುದಿಲ್ಲ.
View this post on InstagramA post shared by Rakhi Sawant (@rakhisawant2511) on
ಹಾಗಾಗಿ, ಶ್ರೀಮಂತರನ್ನು ಭೇಟಿಯಾಗುವ ಬದಲು, ಬಡವರ ಕಷ್ಟಸುಖಃ ವಿಚಾರಿಸಿಕೊಳ್ಳಿ. ಬಾಲಿವುಡ್ ಸೆಲೆಬ್ರಿಟಿಗಳು ಬರೀ ಚಂಚಾಗಿರಿ ಮಾಡುತ್ತಾರೆ" ಎಂದು ರಾಖಿ ಸಾವಂತ್, ಪ್ರಧಾನಿಗೆ ಸಂದೇಶವನ್ನು ಕಳುಹಿಸಿದ್ದಾರೆ.












Click it and Unblock the Notifications