ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಆದ್ಯತೆ ಕೊರೊನಾ ನಿಯಂತ್ರಣ ಅಲ್ಲ ಉತ್ತರ ಪ್ರದೇಶ ಚುನಾವಣೆ: ಶಿವಸೇನೆ

|
Google Oneindia Kannada News

ಮುಂಬೈ, ಮೇ 26: ಬಿಜೆಪಿ ವಿರುದ್ಧ ಶಿವಸೇನೆ ಬುಧವಾರದಂದು ಮತ್ತೊಮ್ಮೆ ಗುಡುಗಿದೆ. ಬಿಜೆಪಿ ಇನ್ನು ಕೂಡ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಹೆಚ್ಚಿನ ಗಮನಹರಿಸುತ್ತಿಲ್ಲ. ತನ್ನ ಇಮೇಜ್ ಹೆಚ್ಚಿಸಿಕೊಳ್ಳುವುದು ಮತ್ತು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಸಲಿದ್ದು ಅಲ್ಲಿ ಮತಗಳಿಸುವುದರ ಮೇಲೆಯೇ ತನ್ನ ಚಿತ್ತ ನೆಟ್ಟಿದೆ. ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪ್ರದರ್ಶನ ಉತ್ತಮವಾಗಿಲ್ಲದಿರುವುದು ಇದಕ್ಕೆ ಕಾರಣ ಎಂದು ಶಿವಸೇನೆ ಕೆಂಡಕಾರಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರಹವನ್ನು ಅದು ಪ್ರಕಟಿಸಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಫಲವಾದ ನಂತರ ಬಿಜೆಪಿ ನಾಯಕರ ಗಮನ ಈಗ ಉತ್ತರ ಪ್ರದೇಶದತ್ತ ನೆಟ್ಟಿದೆ ಎಂದು ಹೇಳಿದೆ.

"ಮಿಷನ್ ಉತ್ತರ ಪ್ರದೇಶ"

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ರರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಭೆ ನಡೆಸಿದ್ದಾರೆ. 'ಮಿಷನ್ ಉತ್ತರ ಪ್ರದೇಶ' ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಹೇಳಿಕೊಂಡಿದೆ.

ಇಂತಾ ಸಂದರ್ಭದಲ್ಲೂ ಮತಗಳೇ ಆದ್ಯತೆಯಾ?

ಇಂತಾ ಸಂದರ್ಭದಲ್ಲೂ ಮತಗಳೇ ಆದ್ಯತೆಯಾ?

"ಇದು ಹೇಗೆ ಭಾಸವಾಗುತ್ತಿದೆಯೆಂದರೆ ಈಗ ದೇಶದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು ಚುನಾವಣೆ ಘೋಷಣೆ ಮತ್ತು ಅದರಲ್ಲಿ ಸ್ಪರ್ಧಿಸುವುದು ಮಾತ್ರವೇ ಉಳಿದಿದೆ. ಬೃಹತ್ ಸಭೆಗಳನ್ನು ಆಯೋಜನೆ ಮಾಡಿ, ರೋಡ್ ಶೋ ನಡೆಸಿ ಚುನಾವಣೆ ಗೆಲ್ಲಿವುದು ಮಾತ್ರವೇ ಬಾಕಿಯಿದೆ" ಎಂದು ಶಿವಸೇನೆ ವ್ಯಂಗ್ಯವಾಡಿದೆ. ಮುಂದುವರಿದು "ಸಂಸದೀಯ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಬಹಳ ಮುಖ್ಯ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈಗಿನ ಸ್ಥಿತಿಯಲ್ಲಿ ಮತಗಳು ನಿಮ್ಮ ಆದ್ಯತೆಯಾ?" ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ಬಿಜೆಪಿಗೆ ಮುಂದೆ ಸಂಕಷ್ಟ

ಬಿಜೆಪಿಗೆ ಮುಂದೆ ಸಂಕಷ್ಟ

ಇನ್ನು ಈ ಸಂಪಾದಕೀಯ ಬರಹದಲ್ಲಿ ಪಶ್ಚಿಮ ಬಂಗಾಳ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸಿದ ಕ್ರಮದ ಬಗ್ಗೆಯೂ ಶಿವಸೇನೆ ಪ್ರಶ್ನಿಸಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ನಿರ್ವಹಣೆ ಸಂಪೂರ್ಣವಾಗಿ ಕುಸಿದಿದೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆ ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಕಷ್ಟವನ್ನು ಎದುರಿಸುವ ಸಂಭವವಿದೆ ಎಂದು ಹೇಳಿದೆ.

ದೇಶದ ಇಮೇಜ್‌ಗೆ ಒಳ್ಳೆಯದಲ್ಲ!

ದೇಶದ ಇಮೇಜ್‌ಗೆ ಒಳ್ಳೆಯದಲ್ಲ!

"ಕೊರೊನಾ ವೈರಸ್‌ನಂಥ ರಾಷ್ಟ್ರೀಯ ವಿಪತ್ತು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಂಥ ದೊಡ್ಡ ರಾಜ್ಯಗಳಿಗೆ ದೊಡ್ಡ ಆಘಾತ. ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ತೇಲುತ್ತಿರುವ ದೇಹಗಳನ್ನು ಕಂಡು ಇಡೀ ವಿಶ್ವ ಕಣ್ಣೀರಿಟ್ಟಿತು. ಇಂತಾ ಸಂದರ್ಭದಲ್ಲಿ ಸಂಪೂರ್ಣ ಗಮನವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮೇಲೆ ಇರಬೇಕಾಗಿದೆ. ಇಲ್ಲವಾದಲ್ಲಿ ಗಂಗಾನದಿ ಹಿಂದೂಗಳ ಮೃತದೇಹಗನ್ನು ಸಾಗಿಸುವ ನದಿಯಾಗಲಿದೆ ಇದು ದೇಶದ ಇಮೇಜ್‌ಗೆ ಒಳ್ಳೆಯದಲ್ಲ" ಎಂದು ಕಟು ಮಾತುಗಳಲ್ಲಿ ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.

English summary
Shiv Sena on Wednesday claimed BJP's focus not on tackling COVID-19, it is on Uttar Pradesh election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X