"ಮೈತ್ರಿಗಾಗಿ ಬಿಜೆಪಿ ಬೇರೆ ಗ್ರಹಗಳಲ್ಲಿ ಬಣ ಹುಡುಕಬೇಕಾಗುತ್ತೆ!"
ಮುಂಬೈ, ಜನವರಿ 29: "ಮೈತ್ರಿಗಾಗಿ ಬಿಜೆಪಿಗೆ ಇನ್ನು ಕೆಲವೇ ದಿನಗಳಲ್ಲಿ ಬೇರೆ ಗ್ರಹದಲ್ಲಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಬರುತ್ತದೆ" ಎಂದು ಶಿವಸೇನೆ ಬಿಜೆಪಿ ಕುರಿತು ವ್ಯಂಗ್ಯವಾಡಿದೆ.
ಕೆಲವು ಮಹತ್ವದ ವಿಷಯಗಳಲ್ಲಿ ಅಪರಸ್ಪರ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಲು ಯಾರೂ ಇಷ್ಟಪಡುವುದಿಲ್ಲ. ಆಗ ಅದು ಮೈತ್ರಿಗಾಗಿ ಬೇರೆ ಗ್ರಹಗಳಲ್ಲಿ ಬಣ ಹುಡುಕಬೇಕಾಗುತ್ತದೆ ಎಂದು ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಅದು ಬರೆದುಕೊಂಡಿದೆ.
ಇತ್ತೀಚೆಗೆ ತಾನೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಹ ಬಿಜೆಪಿಯೊಂದಿಗೆ ಹೊರಬರುವ ಮಾತನ್ನಾಡಿದ್ದರು.

ಕೆಲವೇ ದಿನಗಳ ಹಿಂದಷ್ಟೆ ಶಿವ ಸೇನೆ ತಾನು ಬಿಜೆಪಿಯಿಂದ ಹೊರಬಂದಿರುವುದಾಗಿ ಅಧಿಕೃತವಾಗಿ ಘೋಷಿಸಿತ್ತು. ತಾನು ಚುನಾವಣೆಯನ್ನು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅದು ಹೇಳಿತ್ತು.












Click it and Unblock the Notifications