ಬಿಜೆಪಿ ಕಾರ್ಪೊರೇಟ್ ಮನೆ ಮೇಲೆ ಗುಂಡಿನ ದಾಳಿ, ಐದು ಸಾವು
ಮುಂಬೈ, ಅಕ್ಟೋಬರ್ 07: ಬಿಜೆಪಿ ಕಾರ್ಪೊರೇಟರ್ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಜಲಗಾಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ನಿನ್ನೆ ತಡರಾತ್ರಿ ಬಿಜೆಪಿ ಕಾರ್ಪೊರೇಟರ್ ರವೀಂದ್ರ ಕಾರಟ್ ಅವರ ಮನೆಗೆ ನುಗ್ಗಿದ ಮೂವರು ಮುಸುಕುಧಾರಿಗಳು ಗುಂಡಿನ ಮಳೆಗರೆದಿದ್ದಾರೆ.
ನಾಡ ಪಿಸ್ತೂಲು ಚಾಕುಗಳೊಂದಿಗೆ ಕಾರ್ಪೊರೇಟರ್ ಮನೆ ಪ್ರವೇಶಿಸಿದ ದಾಳಿಕೋರರು ಕಾರ್ಪೊರೇಟರ್ ರವೀಂದ್ರ ಕಾರಟ್ ಹಾಗೂ ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ನಂತರ ಪರಾರಿ ಆಗಿದ್ದ ಗುಂಡು ನಂತರ ಪೊಲೀಸ್ ಠಾಣೆಗೆ ಹೋಗಿ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ.

ರವೀಂದ್ರ ಕಾರಟ್ ಅವರ ಸಹೋದರ ಸುನಿಲ್ ಕಾರಟ್ (50), ಪ್ರೇಮಸಾಗರ್ (26), ರೋಹಿತ್ (25) ಮತ್ತು ಸುಮಿತ್ ಫೆಡ್ರೆ ಎಂಬ ವ್ಯಕ್ತಿ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ವೈಯಕ್ತಿಕ ದ್ವೇಷ ಕಾರಣದಿಂದಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಆರೋಪಿಗಳಿಗೂ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.












Click it and Unblock the Notifications