ಕೈ ಮುಖಂಡ ಮಣಿಶಂಕರ್ ಅಯ್ಯರ್‌ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದ ಉದ್ಧವ್ ಠಾಕ್ರೆ

ಮುಂಬೈ, ಸೆಪ್ಟೆಂಬರ್ 18: ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್‌ ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಣಿ ಶಂಕರ್ ಅಯ್ಯರ್ ಅವರು 2018 ರಲ್ಲಿ ಸಾವರ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ನೆನಪಿಸಿಕೊಂಡು, 'ಮಣಿಶಂಕರ್ ಅಯ್ಯರ್ ಕಾಣಿಸಿದರೆ ಆತನನ್ನು ಚಪ್ಪಲಿಯಲ್ಲಿ ಹೊಡೆಯಬೇಕು' ಎಂದು ಹೇಳಿದ್ದಾರೆ.

ವೀರ್ ಸಾರ್ವಕರ್ ಅವರ ಜೀವನದ ಬಗ್ಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಎರಡು ದೇಶದ ವಿಷಯ (ಭಾರತ-ಪಾಕಿಸ್ತಾನ) ಮೊದಲು ಪ್ರಸ್ತಾಪಿಸಿದ್ದೇ ಸಾವರ್ಕರ್ ಎಂದು 2018 ರಲ್ಲಿ ಮಣಿಶಕರ್ ಅಯ್ಯರ್ ಹೇಳಿದ್ದರು.

Beat Mani Shankar Aiyar with Shoe: Uddhav Thackeray

'ನೆಹರು ಮತ್ತು ಮಹಾತ್ಮಾ ಗಾಂಧಿ ಅವರು ಭಾರತಕ್ಕೆ ನೀಡಿರುವ ಕೊಡುಗೆಯನ್ನು ನಾವು ಪ್ರಶ್ನೆ ಮಾಡುತ್ತಿಲ್ಲ, ಆದರೆ ಸಾರ್ವಕರ್ ಪ್ರಧಾನಿ ಆಗಿದ್ದರೆ ಪಾಕಿಸ್ತಾನ ಉದಯವಾಗುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ.

'ವೀರ್ ಸಾವರ್ಕರ್ ಅವರ ಜೀವನದ ಬಗೆಗಿನ ಈ ಪುಸ್ತಕವನ್ನು ರಾಹುಲ್ ಗಾಂಧಿಗೆ ನೀಡಬೇಕು, ಪುಸ್ತಕ ಓದಲು ಅವರ ಬಳಿ ಈಗ ಸಾಕಷ್ಟು ಸಮಯ ಇದೆ ಎಂದ ಠಾಕ್ರೆ, ತೋಳು ಮೇಲೆಳೆದುಕೊಳ್ಳುವುದರಿಂದ ದೇಶದ ಪ್ರಧಾನಿ ಆಗಲು ಸಾಧ್ಯವಿಲ್ಲ, ದೇಶದ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಅವರು ಹೇಳಿದರು.

ವೀರ್ ಸಾವರ್ಕರ್‌ಗೆ ಭಾರತ ರತ್ನ ನೀಡಿ ಗೌವರವಿಸಬೇಕು ಎಂದು ಸಹ ಉದ್ಧವ ಠಾಕ್ರೆ ಈ ಸಮಯದಲ್ಲಿ ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+