ಮುಂಬೈ: ನೈಟ್ ಕ್ಲಬ್ಬಲ್ಲಿ ಕಿತ್ತಾಟ ನಟ ಆದಿತ್ಯಾ ಬಂಧನ
ಮುಂಬೈ, ಮಾ.8: ಇಲ್ಲಿನ ಜುಹು ಪ್ರದೇಶದಲ್ಲಿ ತಡರಾತ್ರಿ ಕ್ಲಬ್ ವೊಂದರಲ್ಲಿ ಹಿಂದಿ ಹಾಡು ಹಾಕುವಂತೆ ಡಿ.ಜೆ ಜೊತೆ ಕಿತ್ತಾಟ ನಡೆಸಿ ಹಲ್ಲೆ ನಡೆಸಲು ಮುಂದಾಗಿದ್ದ ಹಿಂದಿ ನಟ ಆದಿತ್ಯಾ ಪಂಚೋಲಿ ಅವರನ್ನು ಭಾನುವಾರ ಮುಂಜಾನೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನೈಟ್‌ಕ್ಲಬ್‌ನಲ್ಲಿ ಕುಡಿದು ಅಸಭ್ಯವಾಗಿ ನಡೆದುಕೊಂಡು ಗಲಾಟೆ ಮಾಡಿದ ಆರೋಪ ಹೊತ್ತಿರುವ ಬಾಲಿವುಡ್ ನಟ ಆದಿತ್ಯ ಪಾಂಚೋಲಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜುಹು ಪೊಲೀಸರು ಹೇಳಿದ್ದಾರೆ. [ಜಿಯಾ ಆತ್ಮಹತ್ಯೆ ದಿನ ಸಿಸಿಟಿವಿಯಲ್ಲಿ ಆದಿತ್ಯಾ ಸೆರೆ]
ತಡರಾತ್ರಿ ಕ್ಲಬ್‌ನಲ್ಲಿ ಡಿಜೆ ರಿಮಿಕ್ಸ್ ಹಾಡುಗಳನ್ನು ಪ್ಲೇ ಮಾಡಲಾಗುತ್ತಿದ್ದ ಸಂದರ್ಭ ಪಾಂಚೋಲಿ ಈ ಕ್ಯಾತೆ ತೆಗೆದ. ಡಿಜೆ ಹಾಡು ನಿಲ್ಲಿಸಿ ತಾವು ಹೇಳಿದ ಹಾಡು ಹಾಕುವಂತೆ ಗಲಾಟೆ ಮಾಡಿದರು. ಕಂಠಮಟ್ಟ ಕುಡಿದು ಮ್ಯಾನೇಜರ್ ಮೇಲೆ ಹಲ್ಲೆ ಮಾಡಲು ಯತ್ನಿಸಿದರು ಎಂದು ಕ್ಲಬ್ ಸಿಬ್ಬಂದಿ ದೂರು ನೀಡಿದ್ದಾರೆ.

ಮ್ಯಾನೇಜರ್ ಸ್ಥಳಕ್ಕೆ ಆಗಮಿಸುವುದಕ್ಕೂ ಮುನ್ನ ಪಾಂಚೋಲಿ ಅವರು ಕೆಲವು ಸಿಬ್ಬಂದಿಯನ್ನು ಥಳಿಸಿದ್ದು, ಒಬ್ಬ ಕೆಲಸಗಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಹೋಟೆಲ್ ಸಿಬ್ಬಂದಿಯೇ ಪಾಂಚೋಲಿಯನ್ನು ಸಮೀಪದ ಭಾಭಾ ಆಸ್ಪತ್ರೆಗೆ ಅವನನ್ನು ಕರೆದೊಯ್ದು ಮದ್ಯಪಾನ ಮಾಡಿರುವ ಬಗ್ಗೆ ಸರ್ಟಿಫಿಕೇಟ್ ಮಾಡಿಸಿದರು. ನಂತರ ಅವನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಪಾಂಚೋಲಿ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಬಾಲಿವುಡ್ ನಟಿ ಜಿಯಾ ಖಾನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆದಿತ್ಯಾ ಪಂಚೋಲಿ ಮಗ ಸೂರಜ್ ಪಂಚೋಲಿ ಸಿಕ್ಕಿ ಹಾಕಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಮಗನನ್ನು ಉಳಿಸಲು ಯತ್ನಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಆದಿತ್ಯಾ ಅವರ ಮೇಲೂ ಚಾರ್ಜ್ ಶೀಟ್ ಹಾಕಿದ್ದರು.
ಅದರೆ, ಆದಿತ್ಯಾ ಹಾಗೂ ಅವರ ಮಗ ಸೂರಜ್ ಗೆ ಜಾಮೀನು ಸಿಕ್ಕಿ ಪ್ರಕರಣದಿಂದ ರಿಲೀಫ್ ಪಡೆದುಕೊಂಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಅಥವಾ ಎಫ್ ಬಿಐಗೆ ಹಸ್ತಾಂತರಿಸಬೇಕು ಎಂದು ಜಿಯಾ ಖಾನ್ ತಾಯಿ ರಬಿಯಾ ಅಮಿನ್ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಪಿಟಿಐ)












Click it and Unblock the Notifications