ಆತ್ಯಾಚಾರ ಎಸಗಿಲ್ಲ ಎಂದ ನಟ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ
ಮುಂಬೈ, ಮೇ 06: ತಮ್ಮ ಮೇಲೆ ಹೊರೆಸಿರುವ ಅತ್ಯಾಚಾರ, ಬೆದರಿಕೆ ಆರೋಪವನ್ನು ಕಿರುತೆರೆಯ ಜನಪ್ರಿಯ ನಟ ಕರಣ್ ಒಬೆರಾಯ್ ಅಲ್ಲಗೆಳೆದಿದ್ದಾರೆ. ಆದರೆ, ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಮೇ 06ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತು ಕಣ್ಣೀರಿಟ್ಟ ನಟ ಕರಣ್, ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ. ಕರಣ್ ವಿರುದ್ಧ ಐಪಿಸಿ ಸೆಕ್ಷನ್ 376 ಹಾಗೂ 384 ಅನ್ವಯ ಅತ್ಯಾಚಾರ, ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಓಶಿವಾರ ಪೊಲೀಸರು, ಎಫ್ಐಆರ್ ಹಾಕಿದ್ದಾರೆ.
ಸ್ವಾಭಿಮಾನ್, ಸಾಯಾ, ಜಸ್ಸಿ ಜೈಸ ಕೋಯಿ ನಹಿ, ಅಮೆಜಾನ್ ಪ್ರೈಮ್ ನಲ್ಲಿ ಇನ್ ಸೈಡ್ ಎಜ್ ಮುಂತಾದ ಟಿವಿ ಸರಣಿಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ಕರಣ್ ವಿರುದ್ಧ 2018ರಲ್ಲಿ ದೂರು ದಾಖಲಾಗಿತ್ತು.

ಅಕ್ಟೋಬರ್ 2016 ರಲ್ಲಿ ಡೇಟಿಂಗ್ ಸೈಟ್ ಮೂಲಕ ನಮ್ಮಿಬ್ಬರ ಪರಿಚಯವಾಗಿತ್ತು. ಸ್ನೇಹ, ಪ್ರೀತಿ ಬೆಳೆದು ಕರಣ್ ಮನೆಗೆ ಆಗಾಗ ಹೋಗಿ ಬರುತ್ತಿದ್ದೆ.
ಒಂದು ದಿನ ಎಳನೀರಿನಲ್ಲಿ ಮತ್ತು ಬರುವಂಥ ಪದಾರ್ಥವನ್ನು ಹಾಕಿ ನಾನು ಪ್ರಜ್ಞೆ ತಪ್ಪುವಂತೆ ಮಾಡಿ, ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ. ನಂತರ ಮದುವೆಯಾಗುವೆ ಚಿಂತಿಸಬೇಡ ಎಂದು ಭರವಸೆ ನೀಡುತ್ತಾ ಕಾಲದೂಡುತ್ತಿದ್ದ. ಆದರೆ, ಭರವಸೆ ಹುಸಿಯಾಯಿತು ಎಂದು ಮಹಿಳೆ ದೂರು ನೀಡಿದ್ದಾಳೆ.












Click it and Unblock the Notifications