ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಯಲ್ಲಿ 50,000 ರೈತರಿಂದ ಬೃಹತ್ ಪ್ರತಿಭಟನೆ

|
Google Oneindia Kannada News

ಮುಂಬೈ, ಫೆಬ್ರವರಿ 20: ಮಹಾರಾಷ್ಟ್ರದಲ್ಲಿ ಫೆಬ್ರವರಿ 20 ರಿಂದ ಸುಮಾರು 50,000 ರೈತರಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದು ಒಂದು ವಾರಗಳ ಕಾಲ ಮುಂದುವರಿಯಲಿದೆ.

ರೈತ ಸಂಘದ ಸದ್ದಡಗಿಸಲು ಜೆಡಿಎಸ್ ತಂತ್ರ:ಬಡಗಲಪುರ ನಾಗೇಂದ್ರ ಆರೋಪ ರೈತ ಸಂಘದ ಸದ್ದಡಗಿಸಲು ಜೆಡಿಎಸ್ ತಂತ್ರ:ಬಡಗಲಪುರ ನಾಗೇಂದ್ರ ಆರೋಪ

ಮಹಾರಾಷ್ಟ್ರದ ನಾಸಿಕ್ ನಿಂದ ಆರಂಭವಾಗಿ ಮುಂಬೈಯಲ್ಲಿ ಪ್ರತಿಭಟನಕಾರರು ಸೇರಲಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾ(AIKS) ಈ ಪ್ರತಿಭಟನೆಯನ್ನು ನಡೆಸುತ್ತಿದ್ದು, ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ, ನೀರಾವರಿ ಸೌಲಭ್ಯ, ರೈತರಿಗೆ ಪಿಂಚಣಿ ವ್ಯವಸ್ಥೆ ಮುಂತಾದ ಬೇಡಿಕೆಗಳೊಂದಿಗೆ ಈ ಪ್ರತಿಭಟನೆ ನಡೆಯಲಿದೆ.

ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

"ಮಹಾರಾಷ್ಟ್ರ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ರೈತರ ದನಿಯನ್ನು ಆಲಿಸುತ್ತಿಲ್ಲ. ಸರ್ಕಾರದ ಅವಧಿಗಳು ಮುಗಿಯುತ್ತ ಬಂದರೂ ನಮ್ಮ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಆದ್ದರಿಂದ ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕಾರಣ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ" ಎಂದು AIKS ಹೇಳಿದೆ.

50,000 farmers to march in Mumbai for a week

2018 ಮಾರ್ಚ್ ನಲ್ಲಿ AIKS 35000 ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಿತ್ತು. ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನಿಟ್ಟಿತ್ತು. ಸರ್ಕಾರ ತನ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ವಾಪಸ್ ಪಡೆದಿತ್ತು. ಆದರೆ ಈ ಪ್ರತಿಭಟನೆ ನಡೆದು ಒಂದು ವರ್ಷವಾದರೂ ಸರ್ಕಾರ ತನ್ನ ಬೇಡಿಕೆ ಈಡೇರಿಸದ ಕಾರಣ ಮತ್ತೆ ಪ್ರತಿಭಟನೆಗೆ ಮುಂದಾಗಿದೆ.

ಕಟ್ಟೆಯೊಡೆದ ರೈತರ ಆಕ್ರೋಶ, ಕೆಆರ್ ಪೇಟೆಯ ಬೆಳ್ಳಿಬೆಟ್ಟಕ್ಕೆ ಲಗ್ಗೆಕಟ್ಟೆಯೊಡೆದ ರೈತರ ಆಕ್ರೋಶ, ಕೆಆರ್ ಪೇಟೆಯ ಬೆಳ್ಳಿಬೆಟ್ಟಕ್ಕೆ ಲಗ್ಗೆ

ಒಡಿಶಾಸಲ್ಲಿ ಇದೇ ಬೇಡಿಕೆಗಳನ್ನು ಮುಂದಿಟ್ಟು ನಬ ನಿರ್ಮಾಣ ಕೃಷಕ್ ಸಂಘಟನಂ(NNKS) ಫೆ.21 ರಂದು 12 ಗಂಟೆಗಳ ಒಂದು ದಿನದ ಬಂದ್ ಗೆ ಕರೆನೀಡಿದೆ.

English summary
About 50,000 farmers from 23 districts will take out a week long march in Maharshtra from Feb 20. The march will begin from Nasik to Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X