ಮಹಾರಾಷ್ಟ್ರದ ಗುರುದ್ವಾರದಲ್ಲಿ ಗಲಭೆ; ನಾಲ್ವರು ಪೊಲೀಸರಿಗೆ ಗಾಯ

ಮುಂಬೈ, ಮಾರ್ಚ್ 29: ಮಹಾರಾಷ್ಟ್ರದ ನಾಂದೆಡ್‌ನಲ್ಲಿನ ಗುರುದ್ವಾರದಲ್ಲಿ ಗಲಭೆ ಸಂಭವಿಸಿದ್ದು, ನಾಲ್ವರು ಪೊಲೀಸರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಕೊರೊನಾ ಕಾರಣದಿಂದಾಗಿ ಗುರುದ್ವಾರದಲ್ಲಿ ಹೋಲಾ ಮಹೊಲ್ಲಾಗೆ ಅನುಮತಿ ನಿರಾಕರಿಸಲಾಗಿತ್ತು. ಗುರುದ್ವಾರದ ಸಮಿತಿಗೆ ಈ ಕುರಿತು ಮಾಹಿತಿ ನೀಡಿದ್ದು, ಗುರುದ್ವಾರದ ಒಳಗೇ ಆಚರಣೆ ಮಾಡುವುದಾಗಿ ಸಮಿತಿ ತಿಳಿಸಿತ್ತು. ಆದರೆ ಕೆಲವು ಸಿಖ್ ಯುವಕರು ಗುರುದ್ವಾರದ ಗೇಟ್‌ಗಳನ್ನು ಮುರಿದು ಗಲಭೆ ಸೃಷ್ಟಿಸಿದ್ದಾರೆ.

ಸಂಜೆ 4 ಗಂಟೆ ಸಮಯದಲ್ಲಿ ಸಿಖ್ಖರ ಪವಿತ್ರ ಧ್ವಜ ನಿಶಾನ್ ಸಾಹಿಬ್ ಅನ್ನು ಗುರುದ್ವಾರದ ಬಳಿ ತರುತ್ತಿದ್ದಂತೆ ಜನರು ಜಮಾಯಿಸಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ. ಸುಮಾರು 300ರಿಂದ 400 ಯುವಕರು ಗುರುದ್ವಾರದ ಗೇಟ್‌ಗಳನ್ನು ಮುರಿದು ಗಲಾಟೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಹಲವು ವಾಹನಗಳು ಜಖಂ ಆಗಿವೆ.

4 Police Personnel Injured After Sikh Youth Broke Gates Of Gurudwara in Nanded

ಈ ಗಲಭೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ನಾಂದೆಡೆ್ ಎಸ್‌ಪಿ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+