ಆದಿಪುರುಷ್ ಸಿನಿಮಾ ವೀಕ್ಷಿಸಿದ ಹನುಮ- ಹೆಚ್ಚಾಯ್ತು ದೇವರ ಮೇಲಿನ ನಂಬಿಕೆ!
ಇಂದು ಪ್ರಭಾಸ್ ಅಭಿನಯದ ಹಾಗೂ ಐತಿಹಾಸಿಕ ಕಥೆಯನ್ನು ಹೊಂದಿರುವ ಸಿನಿಮಾ 'ಆದಿಪುರುಷ್' ರಿಲೀಸ್ ಆಗಿದೆ. ರಾಮಾಯಣದಲ್ಲಿ ಬರುವ ರಾಮ-ಲಕ್ಷ್ಮಣ, ಸೀತೆ ಕಥೆಯನ್ನು ಈ ಸಿನಿಮಾ ಆಧರಿಸಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದೇಶದಾದ್ಯಂತ ಐದು ಭಾಷೆಗಳಲ್ಲಿ ಸಿನಿಮಾ ತೆರೆ ಕಂಡಿದೆ.
ಸಿನಿಮಾ ತೆರೆ ಕಂಡ ಮೊದಲನೇ ದಿನವೇ ವಿಚಿತ್ರ ಘಟನೆಯೊಂದು ನಡೆದಿದೆ. ಸಿನಿಮಾ ಮಂದಿರದಲ್ಲಿ ವಾನರವೊಂದು ಸಿನಿಮಾವನ್ನು ವೀಕ್ಷಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನೈಜ ಘಟನೆಯನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ.

ಇಂದು ಬೆಳಿಗ್ಗೆ 5.30ರಿಂದ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಆದಿಪುರುಷ್ ಸಿನಿಮಾ ರೀಲಿಸ್ ಆಗಿದೆ. ನಂಬಿಕೆ ಪ್ರಕಾರ ರಾಮಾಯಾಣ ಕಥೆ, ನಾಟಕ ಹಾಗೂ ಸಿನಿಮಾ ಪ್ರದರ್ಶನದ ವೇಳೆ ಹನುಮನಿಗಾಗಿ ಒಂದು ಸ್ಥಾನವನ್ನು ಕಾಯ್ದಿರಿಸಲಾಗುತ್ತದೆ. ಅಂದರೆ ಎಲ್ಲಿ ರಾಮನೋ ಅಲ್ಲಿ ಹನುಮ ಇರುತ್ತಾನೆ ಎನ್ನುವ ನಂಬಿಕೆ ಇದೆ. ಹೀಗಾಗಿ ರಾಮಾಯಣ ಕಥೆಯನ್ನು ಆಧರಿಸಿದ ಆದಿಪುರುಷ್ ಸಿನಿಮಾ ರಿಲೀಸ್ ಆದಾಗಲೂ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ಸ್ಥಾನವನ್ನು ಕಾಯ್ದಿರಿಸಲಾಗಿದೆ. ಈ ಸ್ಥಳದಲ್ಲಿ ಯಾರೂ ಕೂಡ ಕುಳಿತುಕೊಳ್ಳುವಂತಿಲ್ಲ. ಈ ಸ್ಥಳ ಹನುಮನಿಗಾಗೇ ಇರುವ ಸ್ಥಳ ಎಂಬ ನಂಬಿಕೆ ಇದೆ.
ಹೀಗಾಗಿ ಎಲ್ಲಾ ಚಿತ್ರಮಂದಿಗರಗಳಲ್ಲೂ ಆದಿಪುರುಷ್ ಸಿನಿಮಾ ಪ್ರದರ್ಶನದ ವೇಳೆ ಒಂದು ಸ್ಥಾನವನ್ನು ಕಾಯ್ದಿರಿಸಲಾಗಿದೆ. ಈ ವೇಳೆ ವಾನರವೊಂದು ಚಿತ್ರಮಂದಿರದ ಒಂದು ಕಿಂಡಿಯಲ್ಲಿ ಕುಳಿತು ಸಿನಿಮಾ ನೋಡಿದ್ದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೂ ವಾನರ ಸಿನಿಮಾ ವೀಕ್ಷಣೆ ಮಾಡಿದ್ದು ಜನರಲ್ಲಿ ದೇವರ ಮೇಲಿನ ಭಕ್ತಿಯನ್ನು ಇಮ್ಮಡಿಗೊಳಿಸಿದೆ.
ರಾಮಾಯಣದಲ್ಲಿ ಹನುಮನ ಪಾತ್ರ:
ರಾಮಾಯಣದಲ್ಲಿ ರಾಮ-ಲಕ್ಷ್ಮಣ ಹಾಗೂ ಸೀತೆ ವನವಾಸಕ್ಕೆ ಹೋಗುತ್ತಾರೆ. ದಟ್ಟವಾದ ಕಾಡಿನಲ್ಲಿ ಪ್ರಯಾಣ ಬೇಳಿದ್ದ ವೇಳೆ ರಾವಣ ಎನ್ನುವ ರಾಕ್ಷಸನ ಕಣ್ಣು ಸೀತಾಮಾತೆಯ ಮೇಲೆ ಬೀಳುತ್ತದೆ. ಸೀತೆಯನ್ನು ಪಡೆಯುವ ಆಸೆಯಿಂದ ರಾವಣ ರಾಮನ ವೇಷ ಧರಿಸಿ ಸೀತೆಯನ್ನು ಅಪಹರಿಸುತ್ತಾನೆ. ಆಗ ರಾಮನ ಸಹಾಯಕ್ಕಾಗಿ ನಿಂತವನೇ ಹನುಮ. ಸೀತಾಮಾತೆಯನ್ನು ಅಡಗಿಸಿಟ್ಟ ಸ್ಥಳಕ್ಕೆ ಹನುಮ ತಲುಪಿ ಆಕೆಯನ್ನು ಕರೆತರಲು ರಾಮನಿಗೆ ಸಹಾಯ ಮಾಡುತ್ತಾನೆ. ನಂತರ ರಾಮ ರಾವಣನೊಂದಿಗೆ ಹೋರಾಡಿ ಗೆಲ್ಲುತ್ತಾನೆ. ಇದು ರಾಮಾಯಣದಲ್ಲಿ ಬರುವ ಕಥೆ. ಇದೇ ಕಥೆಯನ್ನು 'ಆದಿಪುರಷ್' ಸಿನಿಮಾ ಆಧರಿಸಿದೆ.

ಈ ಸಿನಿಮಾ ನೋಡಿದ ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಸ್ ಐತಿಹಾಸಿಕ ಕಥೆಗಳನ್ನು ಆಧರಿಸಿದ ಸಿನಿಮಾಗಳನ್ನು ಮಾಡುವಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ ನಟ. ಇದಕ್ಕಾಗಿ ಅವರು ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಭಾಸ್ ಅಭಿನಯದ ಯಾವುದೇ ಐತಿಹಾಸಿಕ ಸಿನಿಮಾ ಪ್ಲಾಪ್ ಆಗಿದ್ದು ತೀರಾ ಕಡಿಮೆ. ಬಾಹುಬಲಿ ದ ಬಿಗಿನಿಂಗ್, ಬಾಹುಬಲಿ ದ ಕನ್‌ಕ್ಲೂಝನ್ ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಪ್ರಭಾಸ್ ಸದ್ಯ ಆದಿಪುರುಷ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಸಿನಿಪ್ರಿಯರ ಮನ ಮುಟ್ಟಲಿದಿಯಾ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications