ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ: ಜಮೀರ್ ಅಹಮದ್
ಮಂಗಳೂರು, ಅಕ್ಟೋಬರ್.18: ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅವರ ರಾಜಕೀಯ ನಿವೃತ್ತಿಯನ್ನ ಜನ ಒಪ್ಪೊಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಚುನಾವಣೆಗೆ ನಿಲ್ಲದಿದ್ದರೆ ಜನ ಬಿಡಬೇಕಲ್ಲ. ಅದನ್ನು ಜನ ಒಪ್ಪುವುದುದಿಲ್ಲ. ರಾಜಕೀಯದಿಂದ ಯಾವ ರಾಜಕಾರಣಿ ಈವರೆಗೆ ನಿವೃತ್ತಿಯಾಗಿದ್ದಾರೆ? ಮಾಜಿ ಪ್ರಧಾನಿ ದೇವೇಗೌಡರು ಈ ಹಿಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು ಆದರೆ ಮತ್ತೆ ಚುನಾವಣೆಗೆ ನಿಂತರು. ತಮ್ಮ ನಿಲುವನ್ನು ಬದಲಾಯಿಸಿದರು.

ಅದೇ ರೀತಿ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿದ್ದಾರೆ. ನಮಗೂ ಸಿದ್ದರಾಮಯ್ಯ ಅವರು ಬೇಕೇ ಬೇಕು ಎಂದು ಹೇಳಿದ ಅವರು ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ಈ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು. ಇಷ್ಟೆಲ್ಲಾ ವಿವಾದ ಆದ ಮೇಲೆ ಛೀಮಾರಿ ಹಾಕಿಸಿಕೊಂಡು ರಾಜೀನಾಮೆ ಕೊಡಬೇಕಾಗಿತ್ತಾ? ಎಂದು ಪ್ರಶ್ನಿಸಿದರು.
ಲೈಂಗಿಕ ಕಿರುಕುಳ ಆರೋಪ ಬರುತ್ತಿದ್ದಂತೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಅವರಿಗೆ ಸ್ವಲ್ಪವಾದರೂ ಗೌರವ ಇರುತ್ತಿತ್ತು ಎಂದು ಜಮೀರ್ ಅಹಮದ್ ಛೇಡಿಸಿದರು.












Click it and Unblock the Notifications