ಎಚ್ ಐವಿ ಪೀಡಿತ ಮಕ್ಕಳ ನೆರವಿಗೆ ನಿಂತ ಸಚಿವ ಜಮೀರ್ ಅಹಮ್ಮದ್

ಮಂಗಳೂರು, ಅಕ್ಟೋಬರ್.11 : ಸಚಿವ ಜಮೀರ್ ಅಹಮ್ಮದ್ ಗುರುವಾರ (ಅ.12) ಮಂಗಳೂರು ಬಿಜೈಯಲ್ಲಿರುವ "ಸ್ನೇಹದೀಪ್" ಎಚ್ಐವಿ ಪೀಡಿತ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ನೇಹ ದೀಪ್ ಸಂಸ್ಥೆಗೆ ಸ್ವಂತ ಕಟ್ಟಡ ಹೊಂದಲು 10 ಲಕ್ಷ ರೂಪಾಯಿ ಚೆಕ್ ನೀಡಿದರು .

ಅದಲ್ಲದೇ ಅಗತ್ಯ ಬಿದ್ದರೆ 6 ತಿಂಗಳ ಬಳಿಕ ಮತ್ತಷ್ಟು ಮೊತ್ತ ನೀಡುವುದಾಗಿ ಭರವಸೆ ನೀಡಿದರು.

ಸ್ನೇಹದೀಪ್ ಸಂಸ್ಥೆಯು ತಬಸ್ಸುಮ್ ಅವರ ನೇತೃತ್ವದಲ್ಲಿ ಕಳೆದ 8 ವರ್ಷಗಳಿಂದ ಬಿಜೈ ಕಾಪಿಕಾಡ್ ನ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದೆ. ಇಲ್ಲಿ ರಾಜ್ಯದ ವಿವಿಧ ಭಾಗಗಳ 22 ಎಚ್ ಐವಿ ಪೀಡಿತ ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ.

Zameer Ahmed Khan donates 10 lakhs for HIV affected kids

ಇದಕ್ಕಾಗಿ ಮಾಸಿಕ 75 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಸ್ನೇಹ ದೀಪ ಸಂಸ್ಥೆ ಸಂಕಷ್ಟ ದಲ್ಲಿರುವುದನ್ನು ಮನಗಂಡ ಸಚಿವ ಜಮೀರ್ ಅಹ್ಮದ್ ಸ್ವಂತ ಕಟ್ಟಡ ಖರೀದಿಸಲು 10 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಜೊತೆಗೆ ಸ್ನೇಹದೀಪ್ ಕಟ್ಟಡ ಖರೀದಿಗಾಗಿ ಸಚಿವ ಯು.ಟಿ.ಖಾದರ್ 5 ಲಕ್ಷ ರೂಪಾಯಿ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಕಣಚೂರು ಮೋನು 5 ಲಕ್ಷ ರೂಪಾಯಿ , ವಿಶ್ವಾಸ್ ಬಾವಾ ಬಿಲ್ಡರ್ಸ್ ಸಂಸ್ಥೆಯ ಅಧ್ಯಕ್ಷ ರವೂಫ್ ಪುತ್ತಿಗೆ 5 ಲಕ್ಷ ರೂಪಾಯಿ, ಕೆ.ಎಸ್.ಲತೀಫ್ ತುಂಬೆ 2 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+