Get Updates
Get notified of breaking news, exclusive insights, and must-see stories!

ಉಳ್ಳಾಲ ಬಳಿ ಯುವಕ ಅನುಮಾನಸ್ಪದ ಸಾವು:ತನಿಖೆಗೆ ಒತ್ತಾಯ

ಮಂಗಳೂರು, ಫೆಬ್ರವರಿ 07:ಕಟ್ಟಡದಿಂದ ಬಿದ್ದು ಯುವಕ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡ್ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಾಪಿಕಾಡ್ ನ ಅಂಬಿಕಾರೋಡ್ ನಿವಾಸಿ ರಿಕ್ಷಚಾಲಕ ವಿಜಯ್ ಎಂಬುವರ ಪುತ್ರ ನಿಶಾನ್ (26) ಅನುಮಾನಸ್ಪದವಾಗಿ ಸಾವನ್ನಪ್ಪಿದ ಯುವಕ. ನಿಶಾನ್ ಹಲವಾರು ವರ್ಷಗಳಿಂದ ಮಾದಕ ವ್ಯಸನಿಯಾಗಿದ್ದು, ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗಿದೆ. ಇಂದು ಮುಂಜಾನೆ ನಿಶಾನ್ ಅವರ ಶವ ಮೀರಾ ಆಚಾರಿ ಎಂಬುವವರ ಮನೆ ಅಂಗಳದಲ್ಲಿ ಪತ್ತೆಯಾಗಿದೆ.

Youth was found dead under mysterious circumstances in Ullal

ಮೃತ ನಿಶಾನ್ ಕಳೆದ ರಾತ್ರಿ ಮೀರಾ ಆಚಾರಿ ಅವರ ಮನೆಯ ಪಕ್ಕದಲ್ಲೇ ಇರುವ ಭಗವತಿ ಕಾಂಪ್ಲೆಕ್ಸ್ ಕಟ್ಟಡ ಹತ್ತಿ ಅಲ್ಲಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ನಿಶಾನ್ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ನಿಶಾನ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಉಳ್ಳಾಲ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+