ಮೂಡಬಿದ್ರೆಯಲ್ಲಿ ಕ್ವಾರಂಟೈನ್ ಆಗಿದ್ದ ಶಾಲೆಯಲ್ಲೇ ಯುವಕ ಆತ್ಮಹತ್ಯೆ
ಮಂಗಳೂರು, ಮೇ 21: ಕೊರೊನಾ ವೈರಸ್ ಭೀತಿಯ ಜೊತೆಗೆ ಮುಂದಿನ ಜೀವನದ ಕುರಿತ ಚಿಂತೆಯಿಂದ ಯುವಕನೊಬ್ಬ ತಾನು ಕ್ವಾರಂಟೈನ್ ಆಗಿದ್ದ ಶಾಲೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವನನ್ನು ಧನಂಜಯ್ ಪೂಜಾರಿ ಎಂದು ಗುರುತಿಸಲಾಗಿದೆ. ಮುಂಬೈನಿಂದ ಬುಧವಾರ ಬಂದಿದ್ದ ಈ ಯುವಕನನ್ನು ಮೂಡಬಿದ್ರೆ ತಾಲೂಕಿನ ಕಡಂದಲೆಯ ಶಾಲೆಯೊಂದರಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಶಾಲೆಯಲ್ಲೇ ನೇಣು ಹಾಕಿಕೊಂಡಿದ್ದಾನೆ.

ಕೊರೊನಾದಿಂದಾಗಿ ಈತ ಮುಂದಿನ ಜೀವನದ ಬಗ್ಗೆ ಚಿಂತೆಗೀಡಾಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಯಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications