ಮಂಗಳೂರು : ಶೀಘ್ರದಲ್ಲೇ ರಸ್ತೆ, ಫುಟ್‌ಪಾತ್ ಅಭಿವೃದ್ಧಿ

ಮಂಗಳೂರು, ಸೆಪ್ಟೆಂಬರ್ 28 : ಎರಡು ವರ್ಷದೊಳಗೆ ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. 30 ಲಕ್ಷ ರೂಪಾಯಿ ವೆಚ್ಚದಲ್ಲಿ ಆನೆಗುಂಡಿ ಆಶ್ರಯ ರಸ್ತೆಯ ಕಾಂಕ್ರೀಟಿಕರಣಕ್ಕೂ ಶಾಸಕರು ಚಾಲನೆ ನೀಡಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕಾಂಕ್ರೀಟಿಕರಣಗೊಂಡ ಬಿಜೈ-ಆನೆಗುಂಡಿ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್ ಮತ್ತು ರಸ್ತೆಗಳ ಅಭಿವೃದ್ಧಿಗೆ ಯೋಜನೆ ತಯಾರಿಸಲಾಗಿದೆ ಎಂದು ಹೇಳಿದರು. [ಪಡೀಲ್ ರಸ್ತೆಯಲ್ಲಿ ಸವಾರರ ಪರದಾಟ]

mangaluru

ಆನೆಗುಂಡಿ ರಸ್ತೆಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೂ ಚಾಲನೆ ನೀಡಿದ ಶಾಸಕರು, ಮೊದಲು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಫುಟ್‌ಪಾತ್ ಅಭಿವೃದ್ಧಿಗೆ ಗಮನಹರಿಸಲಾಗುತ್ತದೆ ಎಂದರು. [ಮಂಗಳೂರು ರೈಲ್ವೆ ಸಿಬ್ಬಂದಿಗಳ ಗೋಳು ಕೇಳುವವರಾರು?]

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ದೀಪಕ್ ಪೂಜಾರಿ, ಹರಿನಾಥ್, ಕೇಶವ್ ಮಾರೋಳಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಸಕರಿಂದ ರಸ್ತೆ ಪರಿಶೀಲನೆ : ಶಾಸಕ ಜೆ.ಆರ್. ಲೋಬೊ ಅವರು ಪಡೀಲ್ ಜಂಕ್ಷನ್‌ನಲ್ಲಿನ ಸಂಚಾರ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು. ತುರ್ತಾಗಿ ಅಗತ್ಯವಿರುವ ಕಾಮಗಾರಿಗಳ ಬಗ್ಗೆ ಯೋಜನೆ ರೂಪಿಸಿ ಒಂದು ವಾರದಲ್ಲಿ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+