ಮಂಗಳೂರು: ವಿದ್ಯಾರ್ಥಿನಿ ಅಂಜನಾಳನ್ನ ಕೊಲೆ ಮಾಡಿದ್ದೇಕೆ?

ಮಂಗಳೂರು ಜೂನ್ 10: ಮಂಗಳೂರಿನ ಅತ್ತಾವರದ ಬಾಡಿಗೆ ಮನೆಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ರಹಸ್ಯ ಬಯಲಾಗಿದೆ. ಅಂಜನಾ ಕೊಲೆಗೆ ಆಕೆ ಗೆಳೆಯನೊಂದಿಗೆ ಮದುವೆಗೆ ನಿರಾಕರಿಸಿದ್ದೇ ಕಾರಣ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕೊಲೆ ಆರೋಪಿ ವಿಜಯಪುರ ಸಿಂಧಗಿ ತಾಲೂಕಿನ ಬೆನಕೊಟಗಿ ಥಾಂಡಾ ನಿವಾಸಿ ಸಂದೀಪ್ ರಾಥೋಡ್ ಎಂಬಾತನನ್ನು ಅಂಜನಾ ವಸಿಷ್ಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಂಧಗಿಯಲ್ಲಿ ಬಂಧಿಸಿದ್ದರು. ಕೊಲೆ ಕೃತ್ಯ ನಡೆಸಿದ ಬಳಿಕ ನೇರವಾಗಿ ಬಸ್ ಹತ್ತಿ ಊರಿಗೆ ತೆರಳಿದ್ದ ಆತ ಸಿಂಧಗಿಯ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.

ಸಂದೀಪ್ ರಾಥೋಡ್ ಹಾಗೂ ಅಂಜನಾ ವಸಿಷ್ಠ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂಜನಾ ವಸಿಷ್ಠ ಅವರ ಪೋಷಕರು ಆಕೆಯನ್ನು ಪ್ರತಿಷ್ಠಿತ ಕುಟುಂಬಕ್ಕೆ ವಿವಾಹ ಮಾಡಿಕೊಡಬೇಕು ಎಂದು ಆಸೆಪಟ್ಟಿದ್ದರು. ಉತ್ತಮ ಸಂಬಂಧವೂ ಕೂಡಿ ಬಂದಿತ್ತು. ಆಕೆಯೂ ವಿವಾಹಕ್ಕೆ ಸಮ್ಮತಿ ನೀಡಿದ್ದಳು. ಈ ವಿಷಯವನ್ನು ರಾಥೋಡ್ ಜತೆ ಹೇಳಿದಾಗ ಆತ ಕೋಪಗೊಂಡಿದ್ದ ಎಂದು ಹೇಳಲಾಗಿದೆ.

what is the motive behind Anjana Vasist murder

ಉಜಿರೆಯಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ ಅಂಜನಾ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಾಗಿ ತರಬೇತಿ ಪಡೆಯಲು ಶುಕ್ರವಾರ ಬೆಳಿಗ್ಗೆ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದರು. ಆ ಬಳಿಕ ಅತ್ತಾವರದಲ್ಲಿರುವ ಗೆಳೆಯ ಸಂದೀಪ್ ರಾಥೋಡ್ ಎಂಬಾತನ ಬಾಡಿಗೆ ಕೊಠಡಿಗೆ ಹೋಗಿದ್ದು, ಅಲ್ಲಿ ಆಕೆಯನ್ನು ವೈರ್ ನಿಂದ ಬಿಗಿದು ಕೊಲೆ ಮಾಡಲಾಗಿತ್ತು. ಕೊಲೆಯಾದ ಬಳಿಕ ಆರೋಪಿ ರಾಥೋಡ್ ಸ್ಥಳದಿಂದ ಪರಾರಿಯಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+