ಮೂಡಬಿದಿರೆ ಅಗ್ನಿಶಾಮಕ ಠಾಣೆಗೆ ನೀರಿನ ಸಮಸ್ಯೆ

ಮೂಡಬಿದಿರೆ, ಅಕ್ಟೋಬರ್ 15 : ಮೂಡಬಿದಿರೆ ಅಗ್ನಿಶಾಮಕಠಾಣೆಯ ಸ್ವಂತ, ಸುಸಜ್ಜಿತ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ಸಜ್ಜಾಗಿದೆ. ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು, ಠಾಣೆಗೆ ನೀರಿನ ಸಮಸ್ಯೆ ಎದುರಾಗಿದೆ.

ಕಡಲಕೆರೆ ನಿಸರ್ಗಧಾಮ ಸಮೀಪ ಸುಮಾರು 2 ಎಕರೆ ಜಾಗದಲ್ಲಿ 3.25 ಕೋಟಿ ವೆಚ್ಚದಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಾಣಗೊಂಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಹಾಗೂ ಇನ್‍ಫ್ರಾಸ್ಟ್ರಕ್ಚರ್ ಡೆವೆಲಪ್‍ಮೆಂಟ್ ಕಾರ್ಪೋರೇಷನ್ ಈ ಕಾಮಗಾರಿಯನ್ನು ಕೈಗೊಂಡಿತ್ತು. [ಮೂಡಬಿದಿರೆ ಕೋರ್ಟ್ ಕಟ್ಟಡ ನೋಡಿ]

moodbidri

ಎರಡು ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿ ಈಗ ಪೂರ್ಣಗೊಂಡಿದ್ದು, 18 ವರ್ಷಗಳಿಂದ ಗಂಟಾಲ್ಕಟ್ಟೆಯ ಕಟ್ಟಡವೊಂದರಲ್ಲಿ ಕಾರ್ಯಾ ನಿರ್ವಹಿಸುತ್ತಿದ್ದ ಠಾಣೆಗೆ ಹೊಸ ಸ್ವಂತ ಕಟ್ಟಡ ಲಭ್ಯವಾಗಿದೆ. ಆದರೆ, ಅಗ್ನಿಶಾಮಕ ಠಾಣೆಗೆ ಮುಖ್ಯವಾಗಿ ಬೇಕಾದ ನೀರಿನ ವ್ಯವಸ್ಥೆಯೇ ಇಲ್ಲದಿರುವುದರಿಂದ ಹೊಸಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. [ಚಿತ್ರಗಳು : ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ]

ಸಮಸ್ಯೆಗೆ ಕಾರಣವೇನು? : ಅಗ್ನಿಶಾಮಕ ಠಾಣೆಗೆ ನೀರಿನ ವ್ಯವಸ್ಥೆಯನ್ನು ಮಾಡಲು ಹಿರಿಯ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಬೋರ್‌ ವೆಲ್ ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವಂತೆ ಮೂಡುಬಿದರೆ ಪುರಸಭೆಗೆ 4 ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. [ಮೂಡಬಿದಿರೆಯಲ್ಲಿ ಬೆಳ್ಳಂಬೆಳಗ್ಗೆ ಹೂವಿನ ವ್ಯಾಪಾರಿ ಹತ್ಯೆ]

ಪುರಸಭೆ ಹಾಗೂ ಪುತ್ತಿಗೆ ಗ್ರಾಮ ಪಂಚಾಯಿತಿ ಗಡಿಪ್ರದೇಶದಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡವಿರುವುದರಿಂದ ಪುರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಸಂಸದರ ನಿಧಿ, ಸಚಿವರ ನಿಧಿ ಹಾಗೂ ಜಿಲ್ಲಾಧಿಕಾರಿ ನಿಧಿಯ ವಿಶೇಷ ಅನುದಾನ ಮೂಲಕ ನೀರಿನ ವ್ಯವಸ್ಥೆ ಮಾಡಲು ಚಿಂತನೆ ನಡೆಯುತ್ತಿದೆ.

ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಠಾಣೆಯ ಅಧಿಕಾರಿ ವರದರಾಜನ್ ಅವರು,'ನೀರಿನ ವ್ಯವಸ್ಥೆ ಮಾಡಿದಲ್ಲಿ ಶ್ರೀಘ್ರವೇ ಠಾಣೆಯನ್ನು ಹೊಸ ಕಟ್ಟಡಕ್ಕ ಸ್ಥಳಾಂತರ ಮಾಡುತ್ತೇವೆ. ಸರ್ಕಾರದ ಅನುದಾನಕ್ಕೆ ಮನವಿ ಸಲಿಸಿದ್ದು, ಅನುಮತಿ ಸಿಕ್ಕರೆ ಶೀಘ್ರವೇ ನೀರಿನ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+