ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಟ್ಟುನಿಂತ ಕಾರು ತಳ್ಳಿದ ಮಂಗಳೂರು ಪೊಲೀಸ್ ಕಾನ್ಸ್ಟೇಬಲ್: ಫೋಟೋ ವೈರಲ್

|
Google Oneindia Kannada News

ಮಂಗಳೂರು ಅಕ್ಟೋಬರ್ 20 : ಮಂಗಳೂರಿನ ಪೊಲೀಸರು ಇತ್ತೀಚೆಗೆ ತಮ್ಮ ಜನಸ್ನೇಹಿ ಕಾರ್ಯಗಳಿಗೆ ಸುದ್ದಿಯಾಗುತ್ತಲೇ ಇದ್ದಾರೆ. ಜನಸಾಮಾನ್ಯರ ಪ್ರಾಣ ರಕ್ಷಣೆಗೆ ಲಾಠಿ ಹಿಡಿಯುವ ಕೈಗಳು ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿತ್ತು. ಸುಳ್ಯ ಸಬ್ ಇನ್ಸ್ಪೆಕ್ಟರ್ ರಸ್ತೆ ಮಧ್ಯೆ ಹಾರೆ ಹಿಡಿದು ರಸ್ತೆಗುಂಡಿ ಮುಚ್ಚುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಟ ಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಓಡಾಡಿದ ಪೊಲೀಸಪ್ಪ ಮಟ ಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಓಡಾಡಿದ ಪೊಲೀಸಪ್ಪ

ಈಗ ಮಂಗಳೂರು ಪೊಲೀಸರ ಸರದಿ . ಮಂಗಳೂರು ಪೊಲೀಸ್ ಕಾಸ್ಟೆಬಲ್ ಒಬ್ಬರು ತನ್ನ ಜನ ಸ್ನೇಹಿ ಕಾರ್ಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಂಗಳೂರಿನ ನಂತೂರು ಸರ್ಕಲ್ ಬಳಿ ಕಾರೊಂದು ಕೆಟ್ಟು ನಿಂತಿತ್ತು. ಈ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತದ್ದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಹತ್ತಿರ ಎಲ್ಲಿಯೂ ಗ್ಯಾರೇಜ್ ಕಾಣದೇ ದಿಕ್ಕು ತೋಚದಂತಾಗಿದ್ದ ಕುಟುಂಬಕ್ಕೆ ಸಹಾಯಕ್ಕೆ ಬಂದವರು ಅಲ್ಲೇ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ದೇವರಾಜ್.

ವೈರಲ್ ಆಗಿರುವ ಸುಂದರ ಯುವತಿಯ ಫೋಟೊದ ಹಿಂದಿನ ಅಸಲಿ ಕತೆ ಏನು? ವೈರಲ್ ಆಗಿರುವ ಸುಂದರ ಯುವತಿಯ ಫೋಟೊದ ಹಿಂದಿನ ಅಸಲಿ ಕತೆ ಏನು?

Viral photo: Mangaluru Traffic cop pushes car

ಅವರು ಕೆಟ್ಟು ನಿಂತ ಕಾರೊಂದನ್ನು 200 ಮೀಟರ್ ತಳ್ಳುವ ಮೂಲಕ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಪೊಲೀಸ್ ಸಿಬ್ಬಂದಿ ರಾತ್ರಿ ಹೊತ್ತು ಕಾರನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯವನ್ನು ದಾರಿಹೋಕರು ಸೆರೆಹಿಡಿದಿದ್ದಾರೆ. ಅದನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಈಗ ಅದು ವೈರಲ್ ಆಗಿದೆ.

English summary
In an exemplory act of humanity a Mangaluru traffic constable pushed the car that was struck on the road as it had a breakdown
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X