• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ವಿಜಯಾ ಬ್ಯಾಂಕ್ ವಿಲೀನ ರದ್ದು'

|

ಮಂಗಳೂರು, ಮಾರ್ಚ್ 03: ವಿಜಯಾ ಬ್ಯಾಂಕ್ ವಿಲೀನ ವಿವಾದ ಮುಂಬರುವ ಲೋಕಸಭಾ ಚುನಾವಣೆಯ ಪ್ರಮುಖ ವಿಷಯವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ವಿಲೀನ ವಿವಾದ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಈ ನಡುವೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಜಯ ಬ್ಯಾಂಕ್ ವಿಲೀನ ‌ಮಾಡಲು ಬಿಡುವುದಿಲ್ಲ ‌ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ .

ವಿಜಯಾ ಬ್ಯಾಂಕ್: ಒಗ್ಗಟ್ಟಿನಲ್ಲಿ ಕೊರತೆಯಿದೆ ಎಂದು ಜಗಜ್ಜಾಹೀರು ಮಾಡಿದ ಜನಪ್ರತಿನಿಧಿಗಳು

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡದ ಪ್ರತಿಷ್ಟೆಯ ಪ್ರತೀಕವಾಗಿರುವ ವಿಜಯ ಬ್ಯಾಂಕ್ ವಿಲೀನ ಮಾಡಿರುವುದು ಖಂಡನೀಯ. ವಿಜಯ ಬ್ಯಾಂಕ್ ವಿಲೀನ ಮಾಡದಂತೆ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಈ ವಿಚಾರ ಹಣಕಾಸು ಸಮಿತಿಗೆ ಬರುವುದಿಲ್ಲವಾದರೂ ಬಿಜೆಪಿಯು ಬ್ಯಾಂಕ್ ವಿಲೀನ ಮಾಡುತ್ತಿದೆ ಎಂದು ಹೇಳಿದ ಮೊಯ್ಲಿ ಅವರು, ಮುಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ವಿಜಯ ಬ್ಯಾಂಕ್ ವಿಲೀನ ಮಾಡಲು ಬಿಡುವುದಿಲ್ಲ ‌ಎಂದು ಸ್ಪಷ್ಟಪಡಿಸಿದರು.

English summary
Spoke with media persons in Mangaluru former Central Minister Veerappa Moily said that Vijaya Bank merger will cancel if congress come to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X