ವಿಡಿಯೋ ವೈರಲ್; "ನಮ್ ಸುದ್ದಿಗೆ ಬಂದರೆ ಕೈಕಾಲ್ ತೆಗಿತೀವಿ" ಯುಟಿ ಖಾದರ್ ಗೆ ಕೊಲೆ ಬೆದರಿಕೆ
ಮಂಗಳೂರು, ಜನವರಿ 28: ಸಿಎಎ ಸಮರ್ಥನಾ ಸಮಾವೇಶದ ಸಂದರ್ಭ ಮಾಜಿ ಸಚಿವ ಯು.ಟಿ.ಖಾದರ್ ಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಮಲಯಾಳಂ ಭಾಷೆಯಲ್ಲಿ ಖಾದರ್ ಅವರಿಗೆ ಜೀವ ಬೆದರಿಕೆ ಹಾಕಿರುವ ಈ ವಿಡಿಯೋ ಎಲ್ಲೆಲ್ಲೂ ಹರಿದಾಡುತ್ತಿದ್ದು, "ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್. ಬೇಕಾದರೆ ತಲೆ ಕಡಿಯುವೆವು" ಎಂದು ಕೊಲೆ ಬೆದರಿಕೆ ಹಾಕಲಾಗಿದೆ. ಸಿಎಎ ಸಮರ್ಥನಾ ಸಮಾವೇಶದ ವೇಳೆ ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಖಾದರ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೇಸರಿ ರುಮಾಲು, ಶಾಲು ಹಾಕಿಕೊಂಡಿದ್ದ ಕೆಲ ಯುವಕರ ಗುಂಪು ರಸ್ತೆ ಬದಿಯಲ್ಲಿ ನಿಂತು, 'ಖಾದರ್, ನಮ್ಮ ಸುದ್ದಿಗೆ ಬರಬೇಡ. ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್ ಮಾಡ್ತೇವೆ, ಬೇಕಾದ್ರೆ ತಲೆಯನ್ನೂ ಕಡಿಯುವೆವು' ಎಂದು ಘೋಷಣೆ ಕೂಗುತ್ತಾ, ಚಪ್ಪಾಳೆ ತಟ್ಟಿ ಡ್ಯಾನ್ಸ್ ಮಾಡಿದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.
ಸಿಎಎ ಸಮರ್ಥನಾ ಸಮಾವೇಶದ ಸಂದರ್ಭ ಮಾಜಿ ಸಚಿವ ಯು.ಟಿ.ಖಾದರ್ ಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.#caa #utkhader pic.twitter.com/ttv0RzY1S3
— Oneindia Kannada (@OneindiaKannada) January 28, 2020
ವಿಡಿಯೋದ ಆರಂಭದಲ್ಲಿ ಜೈ ಜೈ ಬಿಜೆಪಿ ಎಂದು ಘೋಷಣೆ ಕೂಗಿದ್ದು ಕೇಳಿಬಂದಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರೇ ಯು.ಟಿ ಖಾದರ್ ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications