ಚೂರಿ ಇರಿತಕ್ಕೆ ಒಳಗಾಗಿದ್ದ ದೀಕ್ಷಾ ಆರೋಗ್ಯದಲ್ಲಿ ದಿನೇ ದಿನೇ ಚೇತರಿಕೆ
ಮಂಗಳೂರು, ಜುಲೈ 4: ಮಂಗಳೂರಿನ ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ದೀಕ್ಷಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿಯ ಬಗಂಬಿಲ ಎಂಬಲ್ಲಿ ಚೂರಿ ಇರಿತಕ್ಕೊಳಗಾಗಿದ್ದ ದೀಕ್ಷಾ ಆರೋಗ್ಯದಲ್ಲಿ ಪ್ರತಿನಿತ್ಯ ಒಂದಿಷ್ಟು ಚೇತರಿಕೆಯಾಗುತ್ತಿದೆ. ದೀಕ್ಷಾಗೆ 7 ಮಂದಿ ವೈದ್ಯರ ತಂಡ ವಿಶೇಷ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದೆ.
ಯುವತಿಗೆ ಇರಿದು ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶಕ್ತಿ ನಗರ ನಿವಾಸಿ ಸುಶಾಂತ್ ಕೂಡ ಚೇತರಿಸಿಕೊಂಡಿದ್ದಾನೆ. ಇಂದು ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಹೇಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ದಾಖಲಿಸಲು ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.

ಆರೋಪಿ ಸುಶಾಂತ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ದೀಕ್ಷಾಗೆ ಕಾರ್ಡಿಯೋಲಜಿ, ಕಿಡ್ನಿ ಸೇರಿದಂತೆ ನಾನಾ ವಿಭಾಗದ 7 ತಜ್ಞರು ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾರಣ ಸಂಪೂರ್ಣ ಗುಣಮುಖವಾಗಲು ಹಲವು ದಿನಗಳೇ ತೆಗೆದುಕೊಳ್ಳಬಹುದೆಂದು ಮೂಲಗಳು ತಿಳಿಸಿವೆ.











Click it and Unblock the Notifications