ಕರಾವಳಿ ಮಂಗಳೂರಿನಲ್ಲಿ ರಂಗು ರಂಗಿನ ಮಸ್ತಿ!

ಮಂಗಳೂರು, ಫೆಬ್ರವರಿ 02: ಅಲ್ಲಿದ್ದವರಿಗೆ ಗಂಡು ಹೆಣ್ಣು ಅನ್ನೋ ಭೇದ ಇಲ್ಲ, ಮಕ್ಕಳು ವೃದ್ದರೂ ಅನ್ನೋ ತಾರತಮ್ಯವೂ ಇಲ್ಲ. ಎಲ್ಲರೂ ಒಟ್ಟಾಗಿ ಬಣ್ಣ, ಬಣ್ಣದ ನೀರನ್ನು ಒಬ್ಬರಿಗೊಬ್ಬರು ಎರಚಿ ಕುಣಿದು ಸಂಭ್ರಮಿಸಿದರು.

ಹೌದು ಇವತ್ತು ಮಂಗಳೂರಿನ ರಥಬೀದಿಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಮನೆ ಮಾಡಿತ್ತು. ಗೌಡ ಸಾರಸತ್ವ ಬ್ರಾಹ್ಮಣ ಸಮಾಜಕ್ಕೆ ಸೇರಿರೋ ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದಲ್ಲಿ ನಿನ್ನೆ ನಡೆದಿದ್ದ ರಥೋತ್ಸವಕ್ಕೆ ನಡೆದ ಓಕುಳಿ ಆಟ ಇದಾಗಿತ್ತು.

ಎಲ್ಲಿ ನೋಡಿದರೂ ಬಣ್ಣ ಬಣ್ಣ ಬಣ್ಣ. ಕೈಯಲ್ಲಿ ಪಿಚಕಾರಿ ಹಿಡಿದುಕೊಂಡು ಮಕ್ಕಳು ಬಣ್ಣ ಎರಚುತ್ತಿದ್ದರೆ, ಕೈಯಲ್ಲಿ ಬಣ್ಣದ ಪೊಟ್ಟಣ ಹಿಡಿದು ಸಿಕ್ಕಸಿಕ್ಕವರನ್ನು ಬಣ್ಣದ ಮುಳುಗಿಸುತ್ತಿದ್ದರು. ಇನ್ನು ಈ ಬಣ್ಣದ ಓಕುಳಿಯಾಟಕ್ಕೆ ಉತ್ತೇಜನ ನೀಡುವುದಕ್ಕೆ ಹಾಡಿನ ಜತೆಯಲ್ಲಿ ನೀರು ಹಾರಿಸುತ್ತಿರುವ ಯುವಕರ ತಂಡದ ಮತ್ತೊಂದು ಸಂಭ್ರಮ.

ರಥೋತ್ಸವ ನಿಮಿತ್ತ ಬಣ್ಣದ ಆಟ

ರಥೋತ್ಸವ ನಿಮಿತ್ತ ಬಣ್ಣದ ಆಟ

ಹೌದು. ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ನಡೀತಾ ಇರುವ ವಂಕಟರಮಣ ದೇವರ ಉತ್ಸವದಲ್ಲಿ ಇಂದು ಕಲರ್ ಫುಲ್ ವಾತಾವರಣ ಸೃಷ್ಟಿಯಾಗಿತ್ತು. ನಿನ್ನೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾಧಿಗಳು ವೆಂಕಟರಮಣ ದೇವರನ್ನು ರಥದಲ್ಲಿ ಕುರಿಸಿ ರಥೋತ್ಸವ ಸೇವೆ ನೀಡಿದ್ರು.

ಇವತ್ತು ಈ ದೇವರ ಅವಭೃತ ಸ್ನಾನ ನಡೆದು, ಆ ಬಳಿಕ ದೇವರು ಗರ್ಭಗುಡಿಯನ್ನು ಸೇರಲಿದೆ. ಹೀಗಾಗಿ ದೇವರ ಈ ಸ್ನಾನವನ್ನು ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಈ ರೀತಿ ಬಣ್ಣದ ಆಟದಲ್ಲೇ ಮುಳುಗಿ ಫುಲ್ ಎಂಜಾಯ್ ಮಾಡುತ್ತಾರೆ.

ಬಣ್ಣದ ಎರಚಾಟ, ಹಾಡು, ಕುಣಿತ

ಬಣ್ಣದ ಎರಚಾಟ, ಹಾಡು, ಕುಣಿತ

ಅದೇ ವೇಳೆ ನಡೆಯುವ ಈ ಓಕುಳಿ ಹಬ್ಬ ವರ್ಷಕ್ಕೊಮ್ಮೆ ಆತ್ಮೀಯರು ಹಾಗೂ ತಮ್ಮ ಕುಟುಂಬ ಸದಸ್ಯರೊಂದಿಗೆ ಎಂಜಾಯ್ ಮಾಡುವುದಕ್ಕೂ ಒಂದು ಅವಕಾಶ. ಹೀಗಾಗಿ ರಥೋತ್ಸವವನ್ನು ಮಿಸ್ ಮಾಡಿಕೊಂಡರೂ ಈ ಓಕುಳಿ ಹಬ್ಬವನ್ನು ಯಾರು ಮಿಸ್ ಮಾಡಿಕೊಳ್ಳುವುದಿಲ್ಲ. ವೆಂಕಟರಮಣ ದೇವರ ರಥೋತ್ಸವ ಅಂದ್ರೆ ಅದು ಪಕ್ಕದೂರಿನ ಭಕ್ತರು ಕೂಡಾ ಆಗಮಿಸಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನು ಭೇಟಿಯಾಗುವ ಒಂದು ಸದಾವಕಾಶವೂ ಸಿಕ್ಕಂತಾಗುತ್ತದೆ.

ಮುಂಜಾನೆಯಿಂದ ಸಂಜೆ ದೇವರ ಅವಭೃತ ಸ್ನಾನ ನಡೆಯೋವರೆಗೂ ಈ ರೀತಿ ಬಣ್ಣದ ಎರಚಾಟ, ಹಾಡು, ಕುಣಿತ ನಿರಂತರವಾಗಿ ಸಾಗುತ್ತದೆ. ಯಾವುದೇ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಈ ಓಕುಳಿ ಹಬ್ಬ ಒಗ್ಗಟ್ಟಿನ ಸಂಕೇತ ಕೂಡಾ ಆಗಿದೆ.

ಚಂಡೆ ವಾದ್ಯಕ್ಕೆ ಹೆಣ್ಣುಮಕ್ಕಳ ಕುಣಿತ

ಚಂಡೆ ವಾದ್ಯಕ್ಕೆ ಹೆಣ್ಣುಮಕ್ಕಳ ಕುಣಿತ

ದೇವರನ್ನು ಸಂತೋಷ ಪಡಿಸಬೇಕು ಅನ್ನೋ ಕಾರಣಕ್ಕೆ ಎಲ್ಲರೂ ಸಂತೋಷದಿಂದ ಬಣ್ಣ ಎರಚಾಡಿ ಖುಷಿ ಪಡೋ ಈ ಓಕುಳಿ, ಇತ್ತೀಚಿನ ದಿನಗಳಲ್ಲಿ ಭಾರೀ ಫೇಮಸ್. ಹೀಗಾಗಿ ಪಕ್ಕದೂರಿನ ಜನರೂ ಕೂಡಾ ಈ ಹಬ್ಬದಲ್ಲಿ ಪಾಲ್ಗೊಳ್ಳುವುದಕ್ಕೆ ಅಂತಾನೆ ಆಗಮಿಸುತ್ತಾರೆ. ಚಂಡೆ ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಹೆಣ್ಣುಮಕ್ಕಳು, ಯುವಕರು ಸೇರಿದಂತೆ ಹಿರಿಯರು ಕೂಡ ಓಕುಳಿ ಆಟದಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡಿದರು.

ಅದರಲ್ಲೂ ಹೆಣ್ಣುಮಕ್ಕಳು ಹುಡುಗರ ಜೊತೆ ಸೇರಿಕೊಂಡು ಒಂದೇ ಮನೆಯ ಮಕ್ಕಳಂತೆ ರಥಬೀದಿಯ ಗಲ್ಲಿಗಲ್ಲಿಗಳಲ್ಲೂ ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳುವುದೇ ಚೆಂದ.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ರಥೋತ್ಸವ

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ರಥೋತ್ಸವ

ಗೌಡ ಸಾರಸ್ವತ ಬ್ರಾಹ್ಮಣ( ಜಿಎಸ್ಬಿ) ಸಮಾಜದ ರಥೋತ್ಸವ ಅಂದರೆ ಅದು ಅದ್ದೂರಿ ಹಾಗೂ ಆಡಂಭರದಿಂದ ಕೂಡಿರುತ್ತೆ. ಅದೇ ರೀತಿ ಈ ಓಕುಳಿ ಕೂಡಾ ಬಹಳಷ್ಟು ಕಲರ್ ಫುಲ್ ಆಗಿದ್ದು, ನೋಡುಗರಿಗೆ ಕೂಡಾ ಬಹಳಷ್ಟು ಖುಷಿ ನೀಡುತ್ತದೆ.

ಅಸಲಿಗೆ ಈ ಓಕಳಿಯಲ್ಲಿ ಗುಲಾಬಿ ಬಣ್ಣ ಮಾತ್ರ ಬಳಸಬೇಕು ಅನ್ನೋ ನಿಯಮ ಇದ್ದರೂ, ಈಗ ಹಲವು ಬಣ್ಣಗಳು ಬಳಕೆಯಾಗುತ್ತಿವೆ. ಕಳೆದ ವರ್ಷದಿಂದ ಬ್ಯಾಂಡ್ ಡಿಜೆಗೆ ಬ್ರೇಕ್ ಹಾಕಲಾಗಿತ್ತು. ಆದ್ದರಿಂದ ಪಡ್ಡೆಗಳಿಗೆ ಸ್ವಲ್ಪ ಬೇಸರ ಮೂಡಸಿದರೂ ಎಲ್ಲರೂ ಎಂಜಾಯ್ ಮಾಡಿದ್ದಂತು ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+