ಪಿಪಿಇ ಕಿಟ್ ಧರಿಸದೇ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಭಾಗಿ; ಯುಟಿ ಖಾದರ್ ಬಗ್ಗೆ ವಿರೋಧ

ಮಂಗಳೂರು, ಜೂನ್ 24 : ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದ ವೃದ್ಧರೊಬ್ಬರ ಅಂತ್ಯಸಂಸ್ಕಾರವನ್ನು ಶಾಸಕ ಯು.ಟಿ.ಖಾದರ್ ಪಿಪಿಇ ಕಿಟ್ ಧರಿಸದೇ ನೆರವೇರಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಜೂನ್ 7 ರಂದು ಬೆಂಗಳೂರಿನಿಂದ ಬಂದಿದ್ದ 70 ವರ್ಷದ ವೃದ್ಧ, ಮಂಗಳೂರಿನ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕೊರೊನಾ ಸೋಂಕಿಗೆ ಮಂಗಳವಾರ ಬಲಿಯಾಗಿದ್ದರು. ಮಂಗಳೂರಿನ ಬೋಳಾರ ಮಸೀದಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆದಿದ್ದು, ಆ ಸಂದರ್ಭ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಶಾಸಕ ಖಾದರ್ ಕೂಡ ಅಂತ್ಯಸಂಸ್ಕಾರ ಕಾರ್ಯ ಮಾಡಿದ್ದಾರೆ.

ಗುಂಡಿ ತೆಗೆದು ಸ್ವತಃ ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚಿದ್ದಾರೆ. ಆದರೆ ಈ ಸಮಯದಲ್ಲಿ ಅವರು ಪಿಪಿಇ ಕಿಟ್ ಧರಿಸದೇ ಅಂತ್ಯ ಸಂಸ್ಕಾರ ಕಾರ್ಯ ನಡೆಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

UT Khader Didnt Wear PPE Kit And Involved In Funeral Of Corona Infected Person

ಒಬ್ಬ ಜನಪ್ರತಿನಿಧಿಯಾಗಿ ಹೀಗೆ ಪಿಪಿಇ ಕಿಟ್ ಧರಿಸದೇ ಅಂತ್ಯಸಂಸ್ಕಾರ ನೆರವೇರಿಸದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಖಾದರ್ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+