ಯುಆರ್ ಎ ವಿರುದ್ಧದ ಕ್ರಿಮಿನಲ್ ಕೇಸ್ ಎಫ್ಐಆರ್ ವಿವರ

ಮಂಗಳೂರು, ಜೂ.20: ಡಾ.ಯು.ಆರ್‌.ಅನಂತಮೂರ್ತಿ 'ಬೆತ್ತಲೆ ಪೂಜೆ ಯಾಕೆ ಕೂಡದು?' ಎಂಬ ಕೃತಿಯ ಬರಹವನ್ನು ಉಲ್ಲೇಖಿಸಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವಂತಹ ಲೇಖನ ಬರೆದಿದ್ದಕ್ಕಾಗಿ ಕ್ರಮ ಜರುಗಿಸಿ ಎಂದು ಬಜರಂಗ ದಳದ ಪುನೀತ್ ಕೊಟ್ಟಾರಿ ಎಂಬುವರು ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದುರುದ್ದೇಶಪೂರ್ವಕವಾಗಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿರುವುದ್ದಕ್ಕೆ ದೂರು ನೀಡಿದ್ದೇನೆ ಎಂದು ಮಂಗಳೂರಿನ ಅತ್ತಾವರ ಮೋಹನ್ ಕೊಟ್ಟಾರಿ ಎಂಬುವರ ಮಗ 27 ವರ್ಷದ ಪುನೀತ್ ಕೊಟ್ಟಾರಿ ಎಂಬುವರು ಜೂ.12ರಂದೇ ಡಾ. ಯು.ಆರ್ ಅನಂತಮೂರ್ತಿ ಹಾಗೂ 'ಬೆತ್ತಲೆ ಪೂಜೆ ಯಾಕೆ ಕೂಡದು?' ಎಂಬ ಪುಸ್ತಕ ಪ್ರಕಟಿಸಿರುವ ನವಕರ್ನಾಟಕ ಪಬ್ಲಿಕೇಷನ್ ಸಂಸ್ಥೆ ವಿರುದ್ಧ ಬಂದರು ಠಾಣೆಯಲ್ಲಿ ದೂರು ನೀಡಿದ್ದರು. [ಮೂತ್ರ ಮಾಡಿದ 'ದೇವರ ಕಲ್ಲು' ಪತ್ತೆ]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ರಾತ್ರಿ ಯು.ಆರ್ ಅನಂತಮೂರ್ತಿ ಹಾಗೂ ನವಕರ್ನಾಟಕ ಪಬ್ಲಿಕೇಷನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 295, 295(ಎ) ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. ಎಫ್ ಐಆರ್ ಪ್ರತಿಯಲ್ಲಿ ಏನಿದೆ? ಹಾಗೂ ಪುಸ್ತಕದಲ್ಲಿನ ಆಕ್ಷೇಪಾರ್ಹ ಸಾಲುಗಳು ಯಾವವು? ಎಂಬುದರ ವಿವರ ಮುಂದೆ ಓದಿ...[ಚಿತ್ರಗಳ ಕೃಪೆ: ಐಸಾಕ್ ರಿಚರ್ಡ್, ಮಂಗಳೂರು]

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

* ನವಕರ್ನಾಟಕ ಪಬ್ಲಿಕೇಷನ್ ಹೊರ ತಂದಿರುವ ಬೆತ್ತಲೆ ಪೂಜೆ ಯಾಕೆ ಕೂಡದು ಪುಸ್ತಕ ಓದಿದಾಗ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲವು ವಿಚಾರ ಬರೆಯಲಾಗಿದೆ.
* ಪುಟ 37 ರಲ್ಲಿ ' ನಮ್ಮ ಹಳ್ಲಿಯ ಮರಗಳ ಕೆಳಗಿದ್ದ ದೈವದ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದಿದೆ' ಎಂದು ಲೇಖಕ ಬರೆದಿದ್ದಾರೆ.
* ಪುಟ 71ರಲ್ಲಿ 'ಬರೀ ಪುರಾಣ ಕತೆಗಳನ್ನಷ್ಟೇ ಅಲ್ಲ, ಕೆಳಜಾತಿಯ ತುಳುವರ ತಂಡಗಳು ಆಡುತ್ತಿದ್ದ ಕೋಲ' ವನ್ನೂ ನಾವು ನೋಡುತ್ತಿದ್ದೆವು. ತುಳುವರ ದೇಸೀ ದೇವತೆಗಳ ಕತೆಗಳನ್ನು ಹೇಳುವ ಕೋಲ' ಗಳ ಬಗ್ಗೆ ವಿಚಿತ್ರವಾಗಿ ಬರೆಯಲಾಗಿದೆ.
* ನನ್ನ ಪ್ರೀತಿಯ ದೈವ ಪಂಜುರ್ಲಿಕ್ಕೆ ಅಪಮಾನ ಮಾಡಿದ್ದಂತಾಗಿದ್ದು, ಇದರಿಂದ ಕ್ರಮ ಜರುಗಿಸಿ
* ಯುಆರ್ ಅನಂತಮೂರ್ತಿ, ವಸಂತ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್ ವಿರುದ್ಧ ಐಪಿಸಿ ಸೆಕ್ಷನ್ 295 ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸಲಿ ಮನವಿ

ಅಕ್ಷೇಪಾರ್ಹ ವಾಕ್ಯಗಳು ಇಲ್ಲಿವೆ

ಅಕ್ಷೇಪಾರ್ಹ ವಾಕ್ಯಗಳು ಇಲ್ಲಿವೆ

ಪುಟ 37 ರಲ್ಲಿ ' ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೈವದ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದಿದೆ' ಎಂದು ಲೇಖಕ ಬರೆದಿದ್ದಾರೆ.

ಎಫ್ ಐಆರ್ ದಾಖಲಿಸಿಕೊಂಡಿದ್ದಕ್ಕೆ ಪುರಾವೆ

ಎಫ್ ಐಆರ್ ದಾಖಲಿಸಿಕೊಂಡಿದ್ದಕ್ಕೆ ಪುರಾವೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ರಾತ್ರಿ ಯು.ಆರ್ ಅನಂತಮೂರ್ತಿ ಹಾಗೂ ನವಕರ್ನಾಟಕ ಪಬ್ಲಿಕೇಷನ್ ವಿರುದ್ಧ ಭಾರತೀಯ ದಂಡ ಸಂಹಿತೆ 295, 295(ಎ) ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ಕ್ರಿಮಿನಲ್ ಕೇಸ್ ದಾಖಲು

ಕ್ರಿಮಿನಲ್ ಕೇಸ್ ದಾಖಲು

ಯುಆರ್ ಅನಂತಮೂರ್ತಿ, ವಸಂತ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್ ವಿರುದ್ಧ ಐಪಿಸಿ ಸೆಕ್ಷನ್ 295 ಪ್ರಕಾರ ಕ್ರಿಮಿನಲ್ ಕೇಸ್ ದಾಖಲು.

ಎಫ್ ಐಆರ್ ಪ್ರತಿಯ ಒಂದು ಪುಟ

ಎಫ್ ಐಆರ್ ಪ್ರತಿಯ ಒಂದು ಪುಟ

ಯುಆರ್ ಅನಂತಮೂರ್ತಿ, ವಸಂತ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್ ವಿರುದ್ಧ ಎಫ್ ಐಆರ್ ಪ್ರತಿಯ ಒಂದು ಪುಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+