ಮಂಗಳೂರಿಗೆ ಆಗಮಿಸಲಿದ್ದಾರೆ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸದ್ಯದಲ್ಲೇ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಜೋಗಿ ಮಠದ ಆಡಳಿತ ಮಂಡಳಿ ತಿಳಿಸಿದೆ.

ಮಂಗಳೂರು : ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಮಹಂತ ಯೋಗಿ ಆದಿತ್ಯನಾಥ ಅವರು ಶೀಘ್ರದಲ್ಲೇ ಕದಳಿ (ಕದ್ರಿ) ಜೋಗಿ ಮಠ ಮತ್ತು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

ನಾಥ ಪಂಥದ ಅನುಯಾಯಿಗಳಾಗಿರುವ ಮತ್ತು ನಾಥ ಸಂಪ್ರದಾಯಕ್ಕೊಳಪಟ್ಟಿರುವ ದೇವಸ್ಥಾನಗಳಿಗೆ ಪ್ರಧಾನ ರಾಜಯೋಗಿಗಳನ್ನೂ ನೇಮಕ ಮಾಡುವ ಅಧಿಕಾರವನ್ನು ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರು ಮಠದ ಪ್ರಧಾನ ಅರ್ಚಕ(ಮಹಂತ)ರಾಗಿಯೂ ಗುರುತಿಸಿಕೊಂಡಿದ್ದಾರೆ. [ಯೋಗಿ ಆದಿತ್ಯನಾಥ್ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]

UP CM Yogi will be there in Kadri, Mangaluru soon!

2016 ರಲ್ಲಿ ಮಂಗಳೂರಿನ ಕದಳಿ ಮಠದಲ್ಲಿ ಜರುಗಿದ್ದ ಮಹಾರಾಜರ ಪಟ್ಟಾಭಿಷೇಕ ಸಂದರ್ಭದಲ್ಲಿ ಪ್ರಧಾನ ಅತಿಥಿಗಳಾಗಿ ಇವರು ಆಗಮಿಸಿದ್ದ ಅವರು ಶೀಘ್ರದಲ್ಲೇ ಉಡುಪಿ ಕೃಷ್ಣ ಮಠ ಮತ್ತು ಕದಳಿ ಜೋಗಿ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಈ ಭಾಗದ ಯೋಗಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. [ಯೋಗಿ ಜಿಂದಾಬಾದ್ ಎಂದವನ ಹತ್ಯೆ ಮಾಡಿದ ಎಸ್ಪಿ ನಾಯಕ]

'ದೇಶದ ಅತೀ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲು ಅವರಿಗೆ ಆಹ್ವಾನವನ್ನು ನೀಡಿದ್ದೇವೆ. ಭಾನುವಾರ ನಡೆದಿರುವ ನಮ್ಮ ವಾರ್ಷಿಕ ಸಭೆಯಲ್ಲಿ ಎಲ್ಲರೂ ಅವರ ಆಯ್ಕೆಗಾಗಿ ಹರ್ಷ ವ್ಯಕ್ತಪಡಿಸಿ ಆಹ್ವಾನ ನೀಡುವ ನಿರ್ಧಾರಕ್ಕೆ ಬಂದಿದ್ದೇವೆ' ಎಂದು ಜೋಗಿ ಮಠದ ಆಡಳಿತ ಸಮಿತಿಯ ಉಪಾಧ್ಯಕ್ಷ ಕೇಶವಾನಂದ ಒನ್ ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+