• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರಾವಳಿಯಲ್ಲಿ ಹೆಚ್ಚಿದೆ ಅಕ್ರಮ ನಾಯಿ ಮಾರಾಟ ದಂಧೆ!

|

ಮಂಗಳೂರು, ಜೂನ್ 01 :ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಿದೇಶಿ ತಳಿಯ ನಾಯಿಗಳನ್ನು ಸಾಕುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಹೀಗಾಗಿ ಜನರಲ್ಲಿ ವಿದೇಶಿ ನಾಯಿಗಳ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ. ಆದರೆ ಇದರ ಪರಿಣಾಮ ಮಾತ್ರ ನಾಯಿಗಳ ಮೇಲಾಗುತ್ತಿದೆ.

ಕರಾವಳಿಯಲ್ಲಿ ನಾಯಿಮರಿಗಳ ತಳಿ ಸಂವರ್ಧನೆಯ ಅಕ್ರಮ ಚಟುವಟಿಕೆಗಳು ಬೆಳೆಯಲಾರಂಭಿಸಿದ್ದು, ಲಕ್ಷಗಟ್ಟಲೆ ಹಣ ಸಂಪಾದಿಸುವ ಅಕ್ರಮ ದಂಧೆಯಾಗಿ ಬೆಳೆಯುತ್ತಿದೆ. ಹಣದ ಆಸೆಗೆ ಬಿದ್ದು ಮನೆಗಳಲ್ಲಿ, ಸಣ್ಣ ಸಣ್ಣ ಪೆಟ್ ‌ಶಾಪ್ಗಳಲ್ಲಿ ಅವೈಜ್ಞಾನಿಕವಾಗಿ ವಿದೇಶಿ ತಳಿ ನಾಯಿಮರಿಗಳ ಸಂವರ್ಧನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದ, ವಯಸ್ಸಾದ ಒಳ್ಳೆಯ ಜಾತಿಯ ನಾಯಿಗಳು ಇಲ್ಲಿಂದ ಬೀದಿಪಾಲಾಗುತ್ತಿವೆ.

ಎಂಟು ತಿಂಗಳ ಕಂದನನ್ನು ಉಸಿರುಗಟ್ಟಿಸಿ ನದಿಗೆ ಎಸೆದ ತಂದೆ

ಮಂಗಳೂರು ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ಇಂಥ ಹಲವು ನಾಯಿಗಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ನಾಯಿಗಳು ಮರಿ ಹಾಕುವುದು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ. ಅಕ್ರಮವಾಗಿ ತಳಿ ಸಂವರ್ಧನೆ ನಡೆಸುವವರು ಅನೈಸರ್ಗಿಕವಾಗಿ ಗರ್ಭ ಧರಿಸುವಂತೆ ಮಾಡುತ್ತಿದ್ದಾರೆ. ಇಂಜೆಕ್ಷನ್ ಕೊಟ್ಟು ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಮರಿ ಹಾಕುವಂತೆ ಮಾಡುತ್ತಾರೆ. ಇದರಿಂದ 10 ವರ್ಷ ಬದುಕುವ ನಾಯಿ 3ರಿಂದ 4 ವರ್ಷದಲ್ಲೇ ಸಾಯುತ್ತವೆ ಎನ್ನುತ್ತಾರೆ ಟ್ರಸ್ಟ್ ಸದಸ್ಯರು.

ವಾಣಿಜ್ಯ ಉದ್ದೇಶದಿಂದ ನಾಯಿ ಮರಿ ಹಾಕಿಸುವವರು ಅನಿಮಲ್ ವೆಲ್ ಫೇರ್ ಆರ್ಗನೈಸೇಷನ್ ನಿಂದ ಪ್ರಮಾಣಪತ್ರ ಪಡೆಯಬೇಕು. ಆದರೆ ಮನೆಗಳಲ್ಲಿ ಒಂದೆರಡು ನಾಯಿಗಳನ್ನು ಇಟ್ಟುಕೊಂಡು ತಳಿ ಸಂವರ್ಧನೆ ನಡೆಸುವವರು ಯಾವುದೇ ಸರ್ಟಿಫಿಕೇಟ್ ಪಡೆದಿರುವುದಿಲ್ಲ.

ಮಂಗಳೂರಿನ ರೌಡಿ ಶೀಟರ್ ಉಮರ್ ಫಾರುಕ್‌ಗೆ ಪೊಲೀಸರ ಗುಂಡೇಟು

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಾಯಿಗಳನ್ನು ಯಂತ್ರದಂತೆ ಬಳಸಿಕೊಂಡು ಒತ್ತಾಯಪೂರ್ವಕ ತಳಿ ಸಂವರ್ಧನೆ ನಡೆಸುವ ಮನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ ಎನ್ನುವುದು ಪ್ರಾಣಿ ಪ್ರೇಮಿಗಳ ದೂರು. ವಿದೇಶಿ ನಾಯಿಗಳನ್ನು ಸಾಕುವುದು ಪ್ರತಿಷ್ಠೆಯಾಗಿ ಬೆಳೆದದ್ದೇ ದಂಧೆ ಬೆಳೆಯಲು ಕಾರಣ. ವಿದೇಶಿ ತಳಿ ನಾಯಿಮರಿಗಳ ಬಗ್ಗೆ ಜನರಿಗೆ ವ್ಯಾಮೋಹ ಇದ್ದಷ್ಟು ದಿನ ನಾಯಿಗಳ ಮೇಲೆ ಹಿಂಸೆ ಮುಂದುವರಿಯಲಿದೆ. ಈ ಕುರಿತು ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ ಎಂದು ದೂರುತ್ತಾರೆ ಅವರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Having different breeds of dogs in home has now become fashion in mangalore. but some people here, forcefully made dog to mate and sell the puppies at high rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more