ಮಂಗಳೂರಿನಲ್ಲಿ ಚೂರಿ ಇರಿತ, ಇಬ್ಬರಿಗೆ ಗಾಯ

ಮಂಗಳೂರು, ನವೆಂಬರ್ 13: ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಾಡಿಯ ಕಟ್ಟೆಮಾರು ಹಾಗೂ ಅನ್ಸಾರ್ ನಗರದ ಬಳಿ ನಡೆದಿದೆ.

ಇತ್ತೀಚೆಗೆ ಈ ಭಾಗದಲ್ಲಿ ಚೂರಿ ಇರಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಬೈಕ್‌ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದಾರೆ.

Two youth attacked by miscreants in Konaje

ಗಾಯಾಳುಗಳನ್ನು ಮಂಜನಾಡಿ ನಿವಾಸಿ ನವಾಝ್(25) ಹಾಗೂ ಶಮೀರ್(19) ಎಂದು ಗುರುತಿಸಲಾಗಿದೆ.

ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದು, ರಸ್ತೆಗೆ ಕುಸಿದು ಬಿದ್ದ ನವಾಝ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನವಾಝ್ ಹಾಸನದ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದು ರಜೆಯ ಮೇಲೆ ಇತ್ತೀಚೆಗಷ್ಟೇ ತನ್ನ ಮನೆಗೆ ಮರಳಿದ್ದರೆಂದು ಹೇಳಲಾಗಿದೆ.

ಈ ದುಷ್ಕರ್ಮಿಗಳ ಆಟ ಇಲ್ಲಿಗೆ ನಿಲಲಿಲ್ಲ ಸುಮಾರು 1ಕಿ.ಮೀ. ದೂರದ ತೌಡುಗೋಳಿ ಕ್ರಾಸ್ ಸಮೀಪದ ಅನ್ಸಾರ್ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿ ಶಮೀರ್‌ನ ಹೊಟ್ಟೆಯ ಭಾಗಕ್ಕೂ ಇರಿದು ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಶಮೀರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಶನಿವಾರ ರಾತ್ರಿ 11ರಿಂದ ಮಂಗಳವಾರ ರಾತ್ರಿ 11ರವರೆಗೆ 144 ಸೆಕ್ಷನ್ ಜಾರಿಯಾಗಿರುತ್ತದೆ ಎಂದು ಮಂಗಳೂರು ನಗರ ಪೋಲೀಸ್ ಆಯುಕ್ತ ಚಂದ್ರಶೇಕರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+