ಕಾಸರಗೋಡು: ರೈಲು ಡಿಕ್ಕಿಯಾಗಿ ಮಗು ಸೇರಿ ಮೂವರ ಸಾವು
ಮಂಗಳೂರು, ಜನವರಿ 31: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸೇರಿದಂತೆ ಮೂರು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ರೈಲು ನಿಲ್ದಾಣ ಬಳಿ ನಡೆದಿದೆ.
ಮೃತಪ್ಟವರನ್ನು ಪೊಸೋಟ್ ನಿವಾಸಿಗಳಾದ ಅಮಿನಾ (45) ಆಯಿಷಾ (42) ಮತತ್ಉ ಮೂರು ವರ್ಷದ ಮಗು ತಾಮಿಲ್ ಎಂದು ಗುರುತಿಸಲಾಗಿದೆ.
ಮಂಜೇಶ್ವರದ ಮುಖ್ಯ ರಸ್ತೆಯಿಂದ ಇನ್ನೊಂದು ರಸ್ತೆಗೆ ತೆರಳಬೇಕಾದರೆ ರೈಲ್ವೇ ಹಳಿಗಳನ್ನು ದಾಟಲೇ ಬೇಕು. ಹೀಗಾಗಿ ಎಂದಿನಂತೆ ಇಂದೂ ಸ್ಥಳೀಯರು ರೈಲ್ವೇ ಹಳಿ ದಾಟುತ್ತಿದ್ದರು. ಈ ವೇಳೆ ಮಂಜೇಶ್ವರ ರೈಲು ನಿಲ್ದಾಣದ ಬಳಿ ಇಬ್ಬರು ಮಹಿಳೆಯರು ಮತ್ತು ಮಗು ಹಳಿ ದಾಟುತ್ತಿತ್ತು. ಈ ಸಂದರ್ಭ ಮಂಗಳೂರು ನಿಂದ ಕಾಸರಗೋಡು ಕಡೆ ತೆರಳುತ್ತಿದ್ದ ರೈಲು ಇವರಿಗೆ ಡಿಕ್ಕಿ ಹೊಡೆದಿದೆ.

ಒಂದು ರೈಲು ತೆರಳಿದ ನಂತರ ಇವರು ಹಳಿ ದಾಟುತ್ತಿದ್ದರು. ವೇಳೆ ಮತ್ತೊಂದು ಹಳಿಯಲ್ಲಿ ರೈಲು ವೇಗವಾಗಿ ಬಂದಿದ್ದು ಈ ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮಗು ಸೇರಿದಂತೆ ಮಹಿಳೆಯರಿಬ್ಬರ ದೇಹ ಸಂಪೂರ್ಣ ನಜ್ಜುಗುಜ್ಜಾಗಿದೆ.

ರೈಲ್ವೇ ಹಳಿ ದಾಟಲು ಓವರ್ ಬ್ರಿಡ್ಜ್ ಆಗಬೇಕೆಂದು ಸ್ಥಳೀಯರು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಇಲ್ಲಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜನರ ಬೇಡಿಕೆ ಈವರೆಗೆ ಈಡೇರಿರಲಿಲ್ಲ.ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications